ಬಿಎಂಟಿಸಿಯಲ್ಲಿ ಕೇಸರಿ ಧ್ವಜ !

ಬೆಂಗಳೂರು ಜ 3 : ಕೇಸರಿ ಬಂಟಿಂಗ್ಸ್ ಬಸ್‌ ನಲ್ಲಿ ಹಾಕಿದ್ದನ್ನು ಖಂಡಿಸಿ ಯುವಕನೋರ್ವ ಟ್ವೀಟ್‌ ಮಾಡಿದ್ದು, ಇದಕ್ಕೆ ಸಕಾರಾತ್ಮಕವಾಗಿ  ಸ್ಪಂದಿಸಿದ ಬಿಎಂಟಿಸಿ ಅದನ್ನು ತೆರವುಗೊಳಿಸಿದೆ.

ಪುಯಾಣಿಕರೊಬ್ಬರು ಟ್ವಿಟರ್‌ನಲ್ಲಿ ಬಸ್ಸಿನಲ್ಲಿರುವ ಧ್ವಜದ ಫೋಟೊ ಹಂಚಿಕೊಂಡಿದ್ದು ‘ಸರ್ಕಾರಿ ವಾಹನಗಳನ್ನು ಕೋಮುವಾದಗೊಳಿಸುವಿಕೆ, ಸರ್ಕಾರಿ ವಾಹನಗಳನ್ನು ಕೋಮುವಾದಗೊಳಿಸುವುದರಿಂದ ಇತರ ನಾಗರಿಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ’  ಆದರೆ “ಈ ಕುರಿತು ಬಸ್ ನಿರ್ವಾಹಕರಲ್ಲಿ ಪ್ರಶ್ನಿಸಿದಾಗ ಅವರು ಪ್ರತಿಕ್ರಿಯಿಸಲಿಲ್ಲ.” ಎಂದು ಅವರು ಟ್ವೀಟ್‌ ಮಾಡಿದ್ದರು. ಪರಿಣಾಮವಾಗಿ ಕೇಸರಿ ಧ್ವಜದಿಂದ ಅಲಂಕೃತಗೊಂಡಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬನ್ನೊಂದರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಅಧಿಕಾರಿಗಳು ಧ್ವಜವನ್ನು ತೆರವುಗೊಳಿಸಿದ್ದಾರೆ.

ಸದ್ಯ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದ್ದು, ಮಾಹಿತಿಗಾಗಿ ಫೋಟೋವನ್ನು ಹಂಚಿಕೊಂಡಿದ್ದೇವೆ’ ಎಂದು ಬಿಎಂಟಿಸಿ ಅಧಿಕಾರಿಗಳು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಖಚಿತಪಡಿಸಿದ್ದಾರೆ.  

Exit mobile version