ಬಿಎಂಟಿಸಿಯಿಂದ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಉಚಿತ ವಾಹನ ಚಾಲನ ತರಬೇತಿ:ಆಸಕ್ತರಿಂದ ಅರ್ಜಿ ಆಹ್ವಾನ

Job News: ಉಚಿತವಾಗಿ ಲಘು ಮತ್ತು ಭಾರಿ ವಾಹನ ಚಾಲನ ತರಬೇತಿ ಕಾರ್ಯಕ್ರಮವನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ(Bangalore Metropolitan Transport Corporation) ವತಿಯಿಂದ ಹಮ್ಮಿಕೊಳ್ಳಲಾಗಿದೆ. ಗಿರಿಜನ ಉಪ ಯೋಜನೆ (ಟಿಎಸ್ಪಿ)(TSP) ಯೋಜನೆಯಡಿ ಮತ್ತು ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ)(SSSP) ಈ ಕಾರ್ಯಕ್ರಮದ ಸೌಲಭ್ಯ ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (Schedule Caste and Schedule Tribe)ಅಭ್ಯರ್ಥಿಗಳಿಗೆ ಮಾತ್ರ ದೊರಕಲಿದ್ದು, ಆಸಕ್ತ ಅಭ್ಯರ್ಥಿಗಳು ಈ ವಾಹನ ಚಾಲನ ತರಬೇತಿಗೆ ಅರ್ಜಿ ಸಲ್ಲಿಸಲು ಪ್ರಕಟಣೆ ಮೂಲಕ ತಿಳಿಸಲಾಗಿದೆ.

ಲಘು / ಭಾರಿ ವಾಹನ ಚಾಲನ ತರಬೇತಿ ಅಭ್ಯರ್ಥಿಗಳಿಗೆ 30 ದಿನಗಳ ಅವಧಿ ಇರುತ್ತವೆ. ಅಭ್ಯರ್ಥಿಗಳಿಗೆ ವಸತಿ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ಈ ತರಬೇತಿ ಅವಧಿಯಲ್ಲಿ ಉಚಿತವಾಗಿ ಒದಗಿಸಲಾಗುತ್ತದೆ.

ಅಪ್ಲಿಕೇಶನ್‌ ಹಾಕುವ ವಿಧಾನ

ನಿಗಧಿತ ಕೆಳಗಿನ ಅರ್ಹತೆಗಳನ್ನು ಬಿಎಂಟಿಸಿ(BMTC) ಉಚಿತ ಚಾಲನ ತರಬೇತಿಗೆ ಹೊಂದಿರುವವರು ತಮ್ಮ ಮೂಲ ದಾಖಲೆಗಳ 02 ಸೆಟ್‌ ಜೆರಾಕ್ಸ್‌ ಪ್ರತಿಗಳೊಂದಿಗೆ ವಿಳಾಸ – ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ, ತರಬೇತಿ ಕೊಠಡಿ, 2ನೇ ಮಹಡಿ, ಶಾಂತಿನಗರ ಬಸ್ ನಿಲ್ದಾಣ, ಬೆಂಗಳೂರು – 560027′ ಇಲ್ಲಿಗೆ ಭೇಟಿ ನೀಡಿ ತಮ್ಮ ಹೆಸರು ನೋಂದಾವಣೆ ಮಾಡಿಕೊಳ್ಳಬಹುದು.

ಹೆಸರು ರಿಜಿಸ್ಟ್ರೇಷನ್‌ ಮಾಡಲು ಕೊನೆ ದಿನಾಂಕ : 31-07-2023
ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ www.mybmtc.com ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಸಂಪರ್ಕಕ್ಕಾಗಿ : 080-22537481, 7892529634, 7760576556.

ಲಘು ವಾಹನ ಚಾಲನಾ ತರಬೇತಿ (ಕಾರ್/ ಜೀಪ್) ಗೆ ಅರ್ಜಿ ಹಾಕಲು ಕನಿಷ್ಠ ಅರ್ಹತೆಗಳು

ಜನ್ಮ ದಿನಾಂಕದ ಬಗ್ಗೆ ಜನನ ಪ್ರಮಾಣ ಪತ್ರ ಅಥವಾ ಎಸ್‌ಎಸ್‌ಎಲ್‌ಸಿ(SSLC) ಅಂಕಪಟ್ಟಿ ಅಥವಾ ಶಾಲಾ ವರ್ಗಾವಣಾ ಪ್ರಮಾಣ ಪತ್ರ ಅಥವಾ ನೋಟರಿಯಿಂದ ಪ್ರಮಾಣ ಪತ್ರ ಪಡೆದಿರಬೇಕು.
ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು. ಗರಿಷ್ಠ 45 ವರ್ಷ ಮೀರಿರಬಾರದು.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ,ಆಧಾರ್ ಕಾರ್ಡ್‌ ಮತ್ತು ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ-5

ಭಾರಿ ವಾಹನ ಚಾಲನಾ ತರಬೇತಿ (ಬಸ್) ಗೆ ಅರ್ಜಿ ಹಾಕಲು ಅರ್ಹತೆ

ಲಘು ವಾಹನ ಚಾಲನಾ ಅನುಜ್ಞಾ ಪತ್ರ ಪಡೆದು ಒಂದು ವರ್ಷ ಪೂರೈಸಿರಬೇಕು.
ಕನಿಷ್ಠ 20 ವರ್ಷ ಪೂರ್ಣಗೊಂಡಿರಬೇಕು. ಗರಿಷ್ಠ 45 ವರ್ಷ ಮೀರಿರಬಾರದು.
ಜನ್ಮ ದಿನಾಂಕದ ಬಗ್ಗೆ ಜನನ ಪ್ರಮಾಣ ಪತ್ರ ಅಥವಾ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಅಥವಾ ಶಾಲಾ ವರ್ಗಾವಣಾ ಪ್ರಮಾಣ ಪತ್ರ ಅಥವಾ ನೋಟರಿಯಿಂದ ಪ್ರಮಾಣ ಪತ್ರ ಪಡೆದಿರಬೇಕು.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ,ಆಧಾರ್ ಕಾರ್ಡ್‌ ಮತ್ತು ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ-5

ರಶ್ಮಿತಾ ಅನೀಶ್

Exit mobile version