ಏಷ್ಯನ್ ಗೇಮ್ಸ್ – 2023 : ಮಿಶ್ರ ಡಬಲ್ಸ್ ಟೆನಿಸ್ನಲ್ಲಿ ಚಿನ್ನ ತಂದ ಬೋಪಣ್ಣ-ರುತುಜಾ ಜೋಡಿ

China: ರೋಹನ್ ಬೋಪಣ್ಣ (Rohan Bopanna) ಮತ್ತು ರುತುಜಾ ಭೋಸಲೆ ಅವರು ಚೀನಾದ ಹ್ಯಾಂಗ್ಝೌನಲ್ಲಿ (Bopanna-Rutuja pair won gold) ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರ

ಮಿಶ್ರ ಡಬಲ್ಸ್ ಟೆನಿಸ್ನಲ್ಲಿ ಚಿನ್ನ ಗೆದ್ದಿದ್ದಾರೆ. ಭಾರತದ ಜೋಡಿಯು ಫೈನಲ್ನಲ್ಲಿ ಚೈನೀಸ್ ತೈಪೆಯ ಎನ್-ಶುವೊ, ತ್ಸುಂಗ್-ಹಾವೊ ಹುವಾಂಗ್ ಅವರನ್ನು ಸೋಲಿಸಿತು. ಇದೇ ವೇಳೆ ಭಾರತದ ಶೂಟಿಂಗ್

ತಂಡವೂ ಬೆಳ್ಳಿ ಪದಕ ಗೆದ್ದುಕೊಂಡಿದ್ದು, ಸರಬ್ಜೋತ್ ಸಿಂಗ್ ಮತ್ತು ದಿವ್ಯಾ ಟಿಎಸ್ ಅವರು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಫೈನಲ್ನಲ್ಲಿ ಚೀನಾ ವಿರುದ್ಧ ಸೋಲನ್ನು ಅನುಭವಿಸಿದರು.

ಇನ್ನು ಅಥ್ಲೆಟಿಕ್ಸ್ನಲ್ಲಿ ಮುರಳಿ ಶ್ರೀಶಂಕರ್ ಪುರುಷರ ಲಾಂಗ್ ಜಂಪ್ ಫೈನಲ್ಗೆ ಅರ್ಹತೆ ಪಡೆದಿದ್ದು, ಜ್ಯೋತಿ ಯರ್ರಾಜಿ ನಿತ್ಯ ರಾಮರಾಜ್ ಮಹಿಳೆಯರ 100 ಮೀಟರ್ ಹರ್ಡಲ್ಸ್ ಫೈನಲ್ಗೆ

(Hurdles Final) ಲಗ್ಗೆ ಇಟ್ಟಿದ್ದಾರೆ. ಪ್ರೀತಿ ಮತ್ತು ಲೊವ್ಲಿನಾ ಬೊರ್ಗೊಹೈನ್ ಬಾಕ್ಸಿಂಗ್ ನಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಪದಕಗಳನ್ನು ಖಚಿತಪಡಿಸಿದರು.

ಪ್ರಸ್ತುತ ಭಾರತ ಪುರುಷರ ತಂಡ ಸ್ಕ್ವಾಷ್ ಫೈನಲ್ನಲ್ಲಿ ಪಾಕಿಸ್ತಾನವನ್ನು ಎದುರಿಸುತ್ತಿದೆ. ಭಾರತೀಯ ಪುರುಷರ ಹಾಕಿ ತಂಡವು ಫೈನಲ್ನಲ್ಲಿ ಚಿನ್ನಕ್ಕಾಗಿ ಪಾಕಿಸ್ತಾನವನ್ನು ಎದುರಿಸಲಿದೆ.

ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡ (Bopanna-Rutuja pair won gold) ಸೆಮಿಫೈನಲ್ನಲ್ಲಿ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ.

ಭಾರತದ ಪದಕಗಳ ಸಂಖ್ಯೆ:
ಚಿನ್ನ: 9
ಬೆಳ್ಳಿ: 13
ಕಂಚು: 13

ಫಲಿತಾಂಶಗಳು –

ವಾಲಿಬಾಲ್ : ಮಹಿಳೆಯರ ವಾಲಿಬಾಲ್ (Vollyball) ಪ್ರಾಥಮಿಕ ಸುತ್ತಿನ ಪೂಲ್ ಎ ಪಂದ್ಯಾವಳಿಯಲ್ಲಿ ಭಾರತವು ದಕ್ಷಿಣ ಕೊರಿಯಾವನ್ನು 1-3 ಅಂತರದಿಂದ ಸೋಲಿಸಿತು.

ಟೇಬಲ್ ಟೆನಿಸ್ (Table Tennis) : ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಭಾರತ ತಂಡ ದಕ್ಷಿಣ ಕೊರಿಯಾ ವಿರುದ್ಧ ಸೋತಿದೆ. ಮಣಿಕಾ ಬಾತ್ರಾ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ

ಚೀನಾದ ವಾಂಗ್ ಯಿದಿ ವಿರುದ್ಧ ಸೋತಿದ್ದಾರೆ.

ಬಾಕ್ಸಿಂಗ್: ಪ್ರೀತಿ ಪವಾರ್ ಕಜಕಿಸ್ತಾನದ ಝೈನಾ ಶೆಕರ್ಬೆಕೋವಾ ಅವರನ್ನು ಸೋಲಿಸಿ ಮಹಿಳೆಯರ 54 ಕೆಜಿ ಸೆಮಿಫೈನಲ್ ಪ್ರವೇಶಿಸಿದರು. ಲೊವ್ಲಿನಾ ಬೊರ್ಗೊಹೈನ್ ಅವರು ದಕ್ಷಿಣ ಕೊರಿಯಾದ

ಸುಯೆನ್ ಸಿಯೊಂಗ್ ಅವರನ್ನು ಸೋಲಿಸಿ ಮಹಿಳೆಯರ 75 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಪುರುಷರ 92 ಕೆಜಿ ವಿಭಾಗದಲ್ಲಿ ಇರಾನ್ನ ಇಮಾನ್ ಅವರನ್ನು ಸೋಲಿಸಿದ ನರೇಂದರ್

ಸೆಮಿಫೈನಲ್ ಪ್ರವೇಶಿಸಿದರು.

3×3 ಬ್ಯಾಸ್ಕೆಟ್ಬಾಲ್: ಭಾರತ ಮಹಿಳೆಯರು ಮಲೇಷ್ಯಾ ವಿರುದ್ಧ 16-6 ಗೆಲುವು ಸಾಧಿಸಿ, ಕ್ವಾರ್ಟರ್ಫೈನಲ್ ಸ್ಥಾನ ಕಾಯ್ದಿರಿಸಿದರು.

ಇದನ್ನು ಓದಿ : ರೈಲು ದುರಂತ: ಬಿಹಾರದಲ್ಲಿ ಹಳಿ ತಪ್ಪಿದ ದೆಹಲಿ-ಗುವಾಹಟಿ ಮಾರ್ಗದ ಈಶಾನ್ಯ ಎಕ್ಸ್‌ಪ್ರೆಸ್‌ ರೈಲು

Exit mobile version