7 ವರ್ಷದ ಬಾಲಕನಿಗೆ ಚೇಳು ಕಚ್ಚಿದ ಪರಿಣಾಮ, ಹಲವು ಬಾರಿ ಹೃದಯಾಘಾತವಾಗಿ ಸಾವು!

Brazil : ಬ್ರೆಜಿಲ್ನ(Brazil) ಕುಟುಂಬವು ಅಕ್ಟೋಬರ್ 23 ರಂದು ಕ್ಯಾಂಪಿಂಗ್ ಪ್ರವಾಸಕ್ಕೆ ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ, ಕುಟುಂಬದ ಏಳು ವರ್ಷದ ಬಾಲಕನೊಬ್ಬ ಶೂ ಧರಿಸಿದಾಗ ಚೇಳೊಂದು(Boy Dies by Scorpian Bite) ಕುಟುಕಿದೆ. ಹೀಗೆ, ಹಳದಿ ಚೇಳು ಕುಟುಕಿದ ಬಳಿಕ ಬಾಲಕ ಏಳು ಬಾರಿ ಹೃದಯಾಘಾತಕ್ಕೆ ಒಳಗಾದನು.

ಲೂಯಿಜ್ ಮಿಗುಯೆಲ್ ಫುರ್ಟಾಡೊ ಬಾರ್ಬೋಸಾ ಎನ್ನುವ ಈ ಬಾಲಕ, ವಿಷಕಾರಿ ಜಾತಿಯ ಟೈಟ್ಯೂಸ್ ಸೆರ್ರುಲಾಟಸ್ ಎಂಬ ಹಳದಿ ಚೇಳಿನಿಂದ ಕಚ್ಚಲ್ಪಟ್ಟು,

ಎರಡು ದಿನಗಳ ಚಿಕಿತ್ಸೆಯ ನಂತರ ಆಸ್ಪತ್ರೆಯಲ್ಲಿ ಅಕ್ಟೋಬರ್ 25 ರಂದು ಸಾವನ್ನಪ್ಪಿರುವ (Boy Dies by Scorpian Bite )ಕುರಿತು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.


ಈ ಬಗ್ಗೆ ಹುಡುಗನ ತಾಯಿ ಏಂಜೆಲಿಟಾ ಪ್ರೊಯೆಂಕಾ ಫುರ್ಟಾಡೊ ಅವರು, ಬ್ರೆಜಿಲಿಯನ್ ಪತ್ರಿಕೆ ಓ ಗ್ಲೋಬೋಗೆ ಈ ರೀತಿ ಹೇಳಿಕೆ ನೀಡಿದ್ದಾರೆ.

“ಶೂ ಹಾಕಿಕೊಂಡ ತಕ್ಷಣ, ನನ್ನ ಮಗ ನೋವಿನಿಂದ ಕಿರುಚಿದನು. ಅವನಿಗೆ ಏನೋ ಕುಟುಕಿದೆ ಎಂದು ಅರಿವಾದ ತಕ್ಷಣ, ನಾವು ಹುಡುಕಲಾರಂಭಿಸಿದೆವು.

https://youtu.be/5_FnwGugDiM

ಆ ತಕ್ಷಣ ಅವನ ಕಾಲು ಕೆಂಪಾಗಲು ಪ್ರಾರಂಭಿಸಿತು ಮತ್ತು ನೋವು ಹೆಚ್ಚಾಗುತ್ತಿದೆ ಎಂದು ಅಳತೊಡಗಿದ. ಸುಮಾರು ಐದು ನಿಮಿಷಗಳ ನಂತರ, ನಾವು ಭಯಾನಕ ಹಳದಿ ಚೇಳನ್ನು ಪತ್ತೆಮಾಡಿದೆವು.

ದೇಶದಲ್ಲಿ ಸಾವಿರಾರು ಸಾವುಗಳಿಗೆ ಟಿಟ್ಯೂಸ್ ಸೆರ್ರುಲಾಟಸ್ ಕಾರಣವಾಗಿದೆ” ಎಂದು ಆರೋಪಿಸಿದರು.

https://youtu.be/49tPYYDsOhY ಕಿಲ್ಲರ್‌ ಕೋಕ್‌ ! ಪ್ಲೀಸ್‌… ಮಕ್ಕಳನ್ನ ದೂರ ಇಡಿ.


ನಂತರ ಪೋಷಕರು ತಮ್ಮ ಮಗನನ್ನು ಸಾವೊ ಪಾಲೊ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್ ಮೆಡಿಸಿನ್ ಕ್ಲಿನಿಕ್ ಆಸ್ಪತ್ರೆಗೆ ಕರೆದೊಯ್ದರು,

ಅಲ್ಲಿ ಅವನ ಸ್ಥಿತಿಯು ಆರಂಭದಲ್ಲಿ ಸುಧಾರಿಸಿತ್ತು. ವೈದ್ಯರು ಕೆಲವು ಔಷಧಿಗಳಿಂದ ಅವನ ದೇಹದಲ್ಲಿನ ವಿಷವನ್ನು ತೆಗೆದಿದ್ದಾರೆ.

ಮಗ ಕಣ್ಣುಗಳನ್ನು ತೆರೆದನು ನನ್ನೊಂದಿಗೆ ಮಾತನಾಡಲು ಪ್ರಯತ್ನಿಸಿದನು, ನಾನು ಅವನಿಗೆ ಮುತ್ತನ್ನಿಟ್ಟ ಸಂದರ್ಭದಲ್ಲಿ ಅವನು ಬಾವೋದ್ರೇಕಕ್ಕೆ ಒಳಗಾದ್ದರಿಂದ ಅವನನ್ನು ಶಾಂತಗೊಳಿಸುವುದು ಕಷ್ಟವಾಯಿತು.

ದುರದೃಷ್ಟವಶಾತ್, ಹುಡುಗನಿಗೆ ಏಳು ಹೃದಯಾಘಾತಗಳು ಸಂಭವಿಸಿದವು ಎನ್ನುವ ವೈದ್ಯರ ಹೇಳಿಕೆಯ ನಂತರ,

ಮಗ ಚೇತರಿಸಿಕೊಳ್ಳುವ ಭರವಸೆಯನ್ನು ನಾನು ಕಳೆದುಕೊಂಡೆ. ಇದು ತನ್ನ ಜೀವನದ ಅತ್ಯಂತ ಕೆಟ್ಟ ಕ್ಷಣ, ಕ್ಯಾಂಪಿಂಗ್‌ಗೆ ತಯಾರಿ ನಡೆಸುತ್ತಿರುವ ದಿನ ನನ್ನ ಮಗ ಆತಂಕದಲ್ಲಿದ್ದ.

ಅವನು ಎಂದಿಗಿಂತಲೂ ತುಂಬಾ ಚಿಂತಾಕ್ರಾಂತನಾಗಿದ್ದನು ಎಂದು ತಾಯಿ ಹೇಳಿಕೆ ನೀಡಿದ್ದಾರೆ.

https://fb.watch/gz8nviElx9/ ಹುಳ ಬಿದ್ದಿರುವ ಗೋಧಿ ಬಳಸಿ ಕೊಡ್ತಾರೆ ಮಕ್ಕಳಿಗೆ ಊಟ!


ಘಟನೆಯ ನಂತರ, ಅಣ್ಹೆಂಬಿಯ ಪುರಸಭೆಯ ಅಧಿಕಾರಿಗಳು ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿದರು.

ನ್ಯೂಯಾರ್ಕ್ ಪೋಸ್ಟ್ ಒಂದರ ಪ್ರಕಾರ, ವರ್ಷಾರಂಭದಿಂದ ಈ ನಗರದಲ್ಲಿ ಚೇಳುಗಳ ಕಡಿತದಿಂದ ಸಾವನ್ನಪ್ಪಿದ 54 ಪ್ರಕರಣಗಳನ್ನು ಇಲ್ಲಿಯವರೆಗೂ ದಾಖಲಾಗಿದೆ ಎನ್ನುವುದು ಆತಂಕಕಾರಿ ವಿಚಾರವೇ ಸರಿ!

Exit mobile version