ಜಮೈಕಾದಲ್ಲಿ ಬಿ.ಆರ್ ಅಂಬೇಡ್ಕರ್ ಅವರ ಸ್ಮಾರಕ ಲೋಕಾರ್ಪಣೆ!

Jamaica

ಕೆರಿಬಿಯನ್(Caribean) ದ್ವೀಪ ಸಮೂಹದ ರಾಷ್ಟ್ರವಾದ ಜಮೈಕಾದ(Jamaica) ರಾಜಧಾನಿ ಕಿಂಗ್‍ಸ್ಟನ್(Kingston) ನಗರದಲ್ಲಿ ಭಾರತದ ಸಂವಿಧಾನ(Indian Constitution) ಶಿಲ್ಪಿ ಬಾಬಾ ಸಾಹೇಬ್(Baba Saheb) ಅಂಬೇಡ್ಕರ್(B.R Ambedkar) ಅವರ ಸ್ಮಾರಕವನ್ನು ಭಾರತದ ರಾಷ್ಟ್ರಪತಿ(President) ರಾಮನಾಥ್ ಕೋವಿಂದ್(Ramanath Kovind) ಲೋಕಾರ್ಪಣೆ ಮಾಡಿದರು.


ಇದೇ ವೇಳೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನ ರಸ್ತೆಯನ್ನು ಉದ್ಘಾಟನೆ ಮಾಡಲಾಯಿತು. ಅಂಬೇಡ್ಕರ್ ಅವೆನ್ಯೂ, ಕಿಂಗ್‍ಸ್ಟನ್ ಟವರ್ ಸ್ಟ್ರೀಟ್‍ನ ಭಾಗವಾಗಿದೆ ಎಂದು ಜಮೈಕಾದ ಮಾಹಿತಿ ಸೇವೆ ವಿಭಾಗವು ತಿಳಿಸಿದೆ. ಜಮೈಕಾದ ಸಚಿವ ಡೆಸ್ಮಂಡ್ ಮೆಕೆಂಜಿ ಮತ್ತು ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಂಟಿಯಾಗಿ ಈ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜನರನ್ನು ಶಿಕ್ಷಿತರನ್ನಾಗಿ ಮಾಡುವ ಮೂಲಕ ಅಸಮಾನತೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಇಡೀ ಜಗತ್ತಿಗೆ ಸ್ಪೂರ್ತಿಯಾಗಿದ್ದಾರೆ. ಶೋಷಿತ ವರ್ಗಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನ ಕಲ್ಪಿಸಲು ಅವರು ನಡೆಸಿದ ಹೋರಾಟ ಅವಿಸ್ಮರಣೀಯವಾದದು. ಶೋಷಿತ ವರ್ಗಗಳ ಸಬಲೀಕರಣಕ್ಕಾಗಿ ಅವರು ಅನೇಕ ಪ್ರಗತಿಪರ ಚಿಂತನೆಗಳನ್ನು ನೀಡಿದರು. ಸಂವಿಧಾನದ ಮೂಲಕ ಭಾರತದ ಎಲ್ಲ ಜನರಿಗೂ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ನೀಡಿದರು ಎಂದು ಬಣ್ಣಿಸಿದರು.

ಇನ್ನು ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೆರಿಬಿಯನ್ ದ್ವೀಪ ರಾಷ್ಟ್ರವಾದ ಜಮೈಕಾಗೆ ಭೇಟಿ ನೀಡಿದ್ದಾರೆ. ವ್ಯಾಪಾರ, ತಂತ್ರಜ್ಞಾನ, ಆಹಾರ, ಶಿಕ್ಷಣ ಮತ್ತು ವೈದ್ಯಕೀಯ ಸೇವೆಗಳಿಗೆ ಸಂಬಂಧಿಸಿದ ಕೆಲವು ಪ್ರಮುಖ ಒಪ್ಪಂದಗಳ ಕುರಿತು ಎರಡು ದೇಶಗಳ ನಡುವೆ ಮಾತುಕತೆ ನಡೆದಿದೆ. ಭಾರತ ಕೆರಿಬಿಯನ್ ದ್ವೀಪ ಸಮೂಹದ ಪುಟ್ಟ ದ್ವೀಪ ರಾಷ್ಟ್ರವಾಗಿರುವ ಜಮೈಕಾದ ಜೊತೆ ಉತ್ತಮ ರಾಜತಾಂತ್ರಿಕ ಸಂಬಂಧವನ್ನು ಹೊಂದಿದೆ.

Exit mobile version