download app

FOLLOW US ON >

Tuesday, June 28, 2022
Breaking News
ಕೆಂಪೇಗೌಡರ ಪಠ್ಯ ಕೈಬಿಟ್ಟಾಗ ಸಿದ್ದರಾಮಯ್ಯ ಯಾಕೆ ಪ್ರಶ್ನಿಸಲಿಲ್ಲ? : ಬಿಜೆಪಿದಲಿತರನ್ನು ಸಿಎಂ ಮಾಡುವ ಬದ್ಧತೆ ಕಾಂಗ್ರೆಸ್ ಪಕ್ಷಕ್ಕಿದೆಯೇ? : ಬಿಜೆಪಿಎಸ್‍ಸಿ-ಎಸ್‍ಟಿಯವರಿಗೆ ತಿಳುವಳಿಕೆ ಕಡಿಮೆ, ಸ್ವಾಭಿಮಾನ ಮನಸ್ಥಿತಿ ಇನ್ನೂ ಬಂದಿಲ್ಲ : ಸಿದ್ದರಾಮಯ್ಯ‘ಅಗ್ನಿವೀರ’ ಹುದ್ದೆಗೆ ನಿರೀಕ್ಷೆಗೂ ಮೀರಿ ಬಂದ ಅರ್ಜಿಗಳುಶಿವಸೇನೆ ಬಂಡಾಯ : ಕುಟುಂಬ ರಾಜಕೀಯಕ್ಕೆ ಹೊಸ ಸವಾಲುಕುಟಿಲತೆ ಇಲ್ಲದ ರಾಜನೀತಿ ಕೆಂಪೇಗೌಡರನ್ನು ಅಜರಾಮರರನ್ನಾಗಿಸಿದೆ : ಹೆಚ್.ಡಿ.ಕೆರಾವಣ ರಾಜ್ಯ ಶ್ರೀಲಂಕಾದಲ್ಲಿ ಪೆಟ್ರೋಲ್ 550, ಡಿಸೇಲ್ 460 ರೂ. ಏರಿಕೆಸಲಿಂಗಕಾಮಿ ಪ್ರೀತಿಯನ್ನು ಒಪ್ಪದ ಪೋಷಕರ ನಿರ್ಧಾರಕ್ಕೆ ‘ಈಕೆ’ ತೆಗೆದುಕೊಂಡ ನಿರ್ಧಾರ ಅಚ್ಚರಿ!ದಲಿತರು ಯಾಕೆ ಮುಖ್ಯಮಂತ್ರಿ ಆಗಬಾರದು : ಡಿ.ಕೆ.ಶಿ“ಮಹಾರಾಷ್ಟ್ರಕ್ಕೆ ಒಂದು ಬಲ ನಿರ್ಧಾರದೊಂದಿಗೆ ಹಿಂತಿರುಗುತ್ತೇವೆ” : ಬಂಡಾಯ ಶಾಸಕ
English English Kannada Kannada

ಗಿಡ-ಮೂಲಿಕೆ, ಔಷಧ ಸಸ್ಯ ಸಂಪತ್ತನ್ನು ಪೋಷಿಸಿ ಬೆಳಸುತ್ತಿರುವ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟದ ರಾಮೇಗೌಡ

ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ(BR Hills) ಮತ್ತು ಮೀಸಲು ಅರಣ್ಯ(Forest) ನಮ್ಮ ಕನ್ನಡ ನಾಡಿನ ಸೌಭಾಗ್ಯ-ಸಮೃಧ್ಧತೆಯ ಪ್ರತೀಕಗಳಲ್ಲೊಂದು.
BR Hills

ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ(BR Hills) ಮತ್ತು ಮೀಸಲು ಅರಣ್ಯ(Forest) ನಮ್ಮ ಕನ್ನಡ ನಾಡಿನ ಸೌಭಾಗ್ಯ-ಸಮೃಧ್ಧತೆಯ ಪ್ರತೀಕಗಳಲ್ಲೊಂದು. ಸಾವಿರಾರು ಕ್ರಿಮಿ-ಕೀಟಗಳ, ಪ್ರಾಣಿ-ಪಕ್ಷಿಗಳ ಮತ್ತು ಗಿಡ-ಮರ-ಬಳ್ಳಿಗಳ ವೈವಿಧ್ಯತೆಯ ನೆಲೆ ಬೀಡು ಈ ನಮ್ಮ ಕಾಡು. ಬಿಳಿಗಿರಿರಂಗನಾಥ ಸ್ವಾಮಿ ಸನ್ನಿಧಿಯ ಕೂಗಳತೆಯ ದೂರದಲ್ಲಿ, ಗುಂಗರು ಕೂದಲು-ಪೊದೆ ಗಡ್ಡದ ಮನುಷ್ಯನೊಬ್ಬ ತನ್ನದೇ ಹಸಿರ ಜೀವ ಜಗತ್ತಿನೊಂದಿಗೆ ಕಾಯಕವಾಗಿರುವನು. ಆತನೆ ನಮ್ಮ ಅಡವಿ ದೇವಿಯ ಕಾಡಿನ ಮಗ, ಜಡೆರುದ್ರಸ್ವಾಮಿ ಗಿಡ-ಮೂಲಿಕೆ ಸಸ್ಯಕಾಶಿಯ ಸೋಲಿಗರ ರಾಮೇಗೌಡ.

Forest


ಸಾಮಾನ್ಯವಾಗಿ ಕಾಡಿನ ಜನ ನಾವು (ನಾಡಿನವರು) ಕಾಡನ್ನೇ ಕಾಡುವಂತೆ ಬಾಳುವ ಬದಲು , ಕಾಡಿನೊಂದಿಗೆ ಹುಟ್ಟಿ-ಕಾಡಿನೊಂದಿಗೆ ಸಹಬಾಳ್ವೆ ನಡೆಸುವರು. ಅವರೆಂದೂ ನಾಗರಿಕತೆಯ(?) ಹುಚ್ಚು ಕುದುರೆಯೇರಿ ಸವಾರಿಗಿಳಿದವರಲ್ಲ. ಅವರಿಗೆ ಅವರ ಸ್ವಾವಲಂಬನೆ-ಸ್ವಾಭಿಮಾನದ ಕಾಡ ಪಾಡೇ ಮಿಗಿಲು. ಇಂತಹವರಲ್ಲಿ ನಮ್ಮ ರಾಮೇಗೌಡ ‘ಮರವಾಗೆಂದರೆ ಹೆಮ್ಮರವಾದವರು’ ನಮ್ಮ ದೇಸಿ ವೈದ್ಯ ಪರಂಪರೆಯ ಗಿಡ-ಮೂಲಿಕೆಗಳು, ವೈವಿಧ್ಯ ಸಸ್ಯ ಸಂಪತ್ತನ್ನು ತಿಳಿಸುವ, ಉಳಿಸುವ ಮತ್ತು ಪಸರಿಸುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಇವರ ಬಳಿ ಅವರೆ ಹೆಸರೇಳುವಂತೆ ಮುನ್ನೂರಕ್ಕೂ ಅಧಿಕ ಜಾತಿಯ ಗಿಡ-ಮೂಲಿಕೆ ಮತ್ತು ಸಸ್ಯ ವೈವಿಧ್ಯತೆಯ ಸಸಿಗಳಿವೆ.

ಈ ಸಸ್ಯಾಭಿವೃಧ್ದಿ ಮತ್ತು ಪ್ರಸರಣೆಯಲ್ಲಿ ರಾಮೇಗೌಡ ಮತ್ತು ಅವರ ಶ್ರೀಮತಿ ಕಾರ್ಯಪ್ರವೃತ್ತರಾಗಿರುವರು. ಅವರು ಮನಸ್ಸು ಮಾಡಿದ್ದರೆ, ಅವರಿಗಿರುವ ಅಗಾಧ ತಿಳುವಳಿಕೆಯನ್ನೆ ಬಂಡವಾಳವಾಗಿ ಮಾಡಿಕೊಂಡು ನಗರಗಳ ಖ್ಯಾತ ನರ್ಸರಿಗಳೊಂದಿಗೆ ಸೇರಿಕೊಂಡು ಕೈ ತುಂಬಾವೇನೂ, ಮನೆ ತುಂಬಾ ಹಣ ಸಂಪಾದನೆ ಮಾಡಬಹುದಿತ್ತು. ಆದರೆ ಗೌಡರು ತನ್ನ ನೆಲದಲ್ಲೆ ತನ್ನ ತನವನ್ನೂ ಉಳಿಸಿಕೊಂಡು , ಕಾಡು ಮತ್ತು ನಾಡಿನ ಕೊಂಡಿಯಾಗಿ ಹಸಿರ ಬಿತ್ತುತ್ತಿರುವರು. ನಾನು, ಅಕ್ಕಾ ಮತ್ತು ಅಜ್ಜಿ ಕಳೆದ ವಾರವಷ್ಟೇ ಬೆಟ್ಟಕ್ಕೆ ಹೋಗಿ ಹಸಿರು ಉಸಿರಾಡುವುದರ ಜೊತೆಗೆ, ರಾಮೇಗೌಡನ ಹಸಿರ ಜೀವ ಜಗತ್ತನ್ನು ಕಣ್ತುಂಬಿಕೊಂಡು ಬಂದಿದ್ದೆವು.

BR Hills

ಇಂದು ನೈಸರ್ಗಿಕ ಕೃಷಿಯಲ್ಲಿ ಬೆಳೆಯಲು ನಾಟಿ ಶುಂಠಿಯನ್ನು ಅವರಿಂದ ತಂದೆವು. ಹಾಗೆ ನಮ್ಮ ಕಾರಂಜಿ ಟ್ರಸ್ಟಿನ ವತಿಯಿಂದ ಶಾಲಾ ಆವರಣದಲ್ಲಿ ಗಿಡ ನೆಡಿಸಲು- ಅಂಜೂರ, ರುದ್ರಾಕ್ಷಿ, ಸಂಪಿಗೆ, ಹೊನ್ನೆ, ಕಕ್ಕಿಲು, ಬಿಕ್ಕಿಲು, ಜಾಲ, ನೀಳಲು, ಜಾಯಿಕಾಯಿ, ಬೇವು, ಬಾಗೆ, ಕಾಡಳ್ಳು, ಮಾದಲ, ನೇರಳೆ ಮೊದಲಾದ ನಲವತ್ತು ಜಾತಿಯ ಸಸಿಗಳನ್ನು ತಂದ ನಮಗೆ ಸಮೃಧ್ಧಿಯನ್ನೇ ತಂದ ಸಂತೃಪ್ತಿ.


ರಾಮೇಗೌಡರನ್ನು ಸಂಪರ್ಕಿಸಲು – 88619 95754
ಮಾಹಿತಿ ಕೃಪೆ : ಪರಿಸರ ಪರಿವಾರ/ ಬೆಳವಾಡಿ ನವೀನ್ ಕುಮಾರ್

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article