ಕೋವಾಕ್ಸಿನ್ ಆಮದು ರದ್ದುಗೊಳಿಸಿದ ಬ್ರೆಜಿಲ್

ಬ್ರೆಜಿಲ್, ಜು. 29: ಭಾರತ್‌ ಬಯೊಟೆಕ್ ನ ಕೊರೊನಾದ ‘ಕೋವ್ಯಾಕ್ಸಿನ್‌’ ಲಸಿಕೆಯ 40 ಲಕ್ಷ ಡೋಸ್‌ಗಳನ್ನು ಆಮದು ಮಾಡಿಕೊಳ್ಳುವ ನಿರ್ಧಾರವನ್ನು ಬ್ರೆಜಿಲ್‌ ರದ್ದುಗೊಳಿಸಿದೆ. ‘ಕೋವ್ಯಾಕ್ಸಿನ್‌’ನ ಕ್ಲಿನಿಕಲ್ ಅಧ್ಯಯನವನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಬ್ರೆಜಿಲ್‌ ಈ ಕ್ರಮಕೈಗೊಂಡಿದೆ.

ಬ್ರೆಜಿಲ್‌ನ ಪ್ರೆಸಿಸಾ ಮೆಡಿಸಿಮೆಂಟೋಸ್ ಮತ್ತು ಎನ್ವಿಕ್ಸಿಯಾ ಫಾರ್ಮಾಸ್ಯುಟಿಕಲ್ಸ್ ಎಲ್ಎಲ್‌ಸಿ ಜತೆಗಿನ ಒಪ್ಪಂದವನ್ನು ರದ್ದುಗೊಳಿಸಲಾಗಿದೆ ಎಂದು ಭಾರತ್ ಬಯೋಟೆಕ್ ಕಂಪನಿ ಜುಲೈ 23ರಂದು ಬ್ರೆಜಿಲ್‌ ಸರ್ಕಾರಕ್ಕೆ ತಿಳಿಸಿತ್ತು. ಭಾರತ್ ಬಯೋಟೆಕ್ ತನ್ನ ನಿರ್ಧಾರ ಪ್ರಕಟಿಸಿದ ಬಳಿಕ ಬ್ರೆಜಿಲ್‌ನ ರಾಷ್ಟ್ರೀಯ ಆರೋಗ್ಯ ನಿಗಾ ಸಂಸ್ಥೆಯು ‘ಕೋವ್ಯಾಕ್ಸಿನ್‌’ ಆಮದು ಮಾಡಿಕೊಳ್ಳುವುದನ್ನು ರದ್ದುಪಡಿಸುವುದಾಗಿ ತಿಳಿಸಿದೆ. ಬ್ರೆಜಿಲ್‌ನಲ್ಲಿ ಕೋವ್ಯಾಕ್ಸಿನ್‌ ಪರಿಚಯಿಸುವ ಉದ್ದೇಶದಿಂದ ಭಾರತ್‌ ಬಯೋಟೆಕ್‌ ಈ ಎರಡೂ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.

Exit mobile version