ಡ್ರೈ ಹೋಳಿ ಆಚರಿಸಿ ಎಂದು ರೈನ್ ಡ್ಯಾನ್ಸ್‌ಗೆ ಬ್ರೇಕ್ ಹಾಕಲಿರುವ ಜಲಮಂಡಳಿ!

Bengaluru: ಬಿರು ಬೇಸಿಗೆಯ ಕಾಲ ಆರಂಭವಾಗುವ ಮುನ್ನವೇ ಬೆಂಗಳೂರಿನ (Break for Rain Dance) ಹಲವು ಪ್ರದೇಶಗಳಲ್ಲಿ ನೀರಿನ ಹಾಹಾಕಾರ ಉಂಟಾಗಿದೆ. ದುಡ್ಡು ಕೊಟ್ರೂ ನೀರು

ಸಿಗದಂಥಾ ಸನ್ನಿವೇಶ ಸೃಷ್ಟಿಯಾಗಿದೆ. ಬೆಂಗಳೂರು ನಗರಕ್ಕೆ ಕಾವೇರಿ ನೀರು ಸಾಕಷ್ಟು ಪ್ರಮಾಣದಲ್ಲಿ ಲಭ್ಯ ಆಗದಿರುವ ಜೊತೆಗೆ ಹಲವಾರು ಬೋರ್‌ವೆಲ್‌ಗಳೂ ಕೈ ಕೊಟ್ಟಿವೆ. ನಗರದ ಬಹುತೇಕ

ಹೋಟೆಲ್, ಅಪಾರ್ಟ್‌ಮೆಂಟ್‌ (Apartment) ಹಾಗೂ ಮನೆಗಳಿಗೆ (Break for Rain Dance) ಟ್ಯಾಂಕರ್ ನೀರೇ ಜೀವನಾಧಾರವಾಗಿದೆ.

ನಗರದ ಹೊರ ವಲಯಗಳ ಬೋರ್‌ವೆಲ್‌ಗಳಿಂದ (Borewell) ನೀರು ತಂದು ನಗರದ ಒಳಗೆ ಸರಬರಾಜು ಮಾಡಲಾಗ್ತಿದೆ. ಜಲ ಮಂಡಳಿಯಂತೂ ಸ್ಲಂ ಪ್ರದೇಶಗಳಲ್ಲಿ ಜನರು ಹೆಚ್ಚಾಗಿ ಇರುವ ಕಡೆ

ಟ್ಯಾಂಕ್‌ಗಳನ್ನ ಅಳವಡಿಕೆ ಮಾಡಿ ಫ್ರೀಯಾಗಿ ನೀರು ನೀಡಿ ನೀರಿನ ಬರವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿದ್ದಾರೆ. ಆದರೆ ಸ್ಟಾರ್ ಹೋಟೆಲ್‌ಗಳು, ರೆಸಾರ್ಟ್‌ಗಳು ಹಾಗೂ ರೆಸ್ಟೊರೆಂಟ್‌ಗಳು

(Star Hotels, Resorts and Restaurants) ಮಾತ್ರ ಮೋಜು ಮಸ್ತಿಗೆ ಯಾವುದೇ ಕೊರತೆ ಇಲ್ಲದೆ ಮೆರೆದಾಡುತ್ತಿವೆ.

ಅದರಲ್ಲೂ ಸೋಮವಾರ ಹೋಳಿ ಹಬ್ಬದ ಅಂಗವಾಗಿ ಪೂಲ್ ಪಾರ್ಟಿ, ರೈನ್ ಡ್ಯಾನ್ಸ್‌ಗಳನ್ನ (Rain Dance) ಆಯೋಜನೆ ಮಾಡಿವೆ. ಈ ಕಾರ್ಯಕ್ರಮಕ್ಕೆ ಅಪಾರ ಪ್ರಮಾಣದ ನೀರು ಬೇಕು ಅನ್ನೋದು

ತಿಳಿದಿದ್ದರೂ ಕೂಡಾ ಮಾರ್ಚ್ (March) 23 ಶನಿವಾರದಿಂದ ಹಿಡಿದು ಮಾರ್ಚ್ 25 ಸೋಮವಾರದವರೆಗೆ ನಿರಂತರವಾಗಿ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದೆ. ಇನ್ನು ಹೋಳಿ ಸ್ಪೆಷಲ್ ರೈನ್

ಡ್ಯಾನ್ಸ್‌ ಘೋಷಣೆ ಮಾಡಿರೋದು ಜಲಮಂಡಳಿಯ ಕಣ್ಣು ಕೆಂಪಗಾಗಿಸಿದೆ.

ನಿಮ್ಮ ಮೋಜಿನಾಟಕ್ಕೆ ಯಾವುದೇ ಕಾರಣಕ್ಕೂ ಕಾವೇರಿ ನೀರು (Kaveri Water) ಹಾಗೂ ಕೊಳವೆ ಬಾವಿ ನೀರು ಬಳಕೆ ಮಾಡಬೇಡಿ ಅಂತಾ ಜಲಮಂಡಳಿ ತಾಕೀತು ಮಾಡಿದೆ. ಬಿರು ಬೇಸಿಗೆಯ ಈ

ದಿನದಲ್ಲಿ ಆಟದ ಹೆಸರಲ್ಲಿ ಜೀವ ಜಲ ವ್ಯರ್ಥ ಮಾಡುವ ಬದಲು ಡ್ರೈ ಹೋಳಿ ಹಬ್ಬ ಆಚರಿಸಿ.ರಾಸಾಯನಿಕ ಬಣ್ಣಗಳ ಬದಲು ಹೂವಿನ ದಳಗಳನ್ನು ಬಳಕೆ ಮಾಡಿಕೊಂಡು ಹೋಳಿ ಹಬ್ಬ ಆಚರಿಸಿ. ಹೋಟೆಲ್‌ಗಳು,

ರೆಸಾರ್ಟ್‌ಗಳಲ್ಲಿ (Resort) ರೈನ್ ಡ್ಯಾನ್ಸ್ ಹೆಸರಲ್ಲಿ ನೀರು ಪೋಲಾಗುವುದನ್ನು ತಪ್ಪಿಸಿ.ನೀರು ಬಳಸದೇ ಹೋಳಿ ಆಚರಿಸಲು ಆದ್ಯತೆ ನೀಡಿ.

ಮನೆ ಹಾಗೂ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ದೊಡ್ಡ ದೊಡ್ಡ ನೀರಿನ ಟ್ಯಾಂಕ್‌ಗಳನ್ನ ಇಟ್ಟುಕೊಂಡು ನೀರಿಗೆ ಬಣ್ಣ ತುಂಬಿ ಹೋಳಿ ಆಚರಿಸಲಾಗುತ್ತದೆ. ಇದು ಪ್ರತಿ ವರ್ಷದ ಪರಿಪಾಠ. ಆದರೆ,

ಈ ವರ್ಷ ಈ ಪರಿಪಾಠಕ್ಕೆ ಬ್ರೇಕ್ ಹಾಕಲೇ ಬೇಕು ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ನೀರಿಲ್ಲದ ಪರಿಸ್ಥಿತಿ ಎದುರಾಗಬಹುದು ಎಂದು ಜಲಮಂಡಳಿ (Water Board) ಎಚ್ಚರಿಕೆಯನ್ನು ನೀಡಿದೆ.

ಇದನ್ನು ಓದಿ: ಅಂಜಲಿ ಲಿಂಬಾಳ್ಕರ್, ಪ್ರಿಯಾಂಕ ಜಾರಕಿಹೊಳಿ, ಸೌಮ್ಯಾ ರೆಡ್ಡಿ ಸೇರಿ 6 ಮಹಿಳೆಯರಿಗೆ ಕೈ ಟಿಕೆಟ್

Exit mobile version