New Delhi : ಕಳೆದ ಅನೇಕ ತಿಂಗಳಿಂದ ನೀವು ನನ್ನ ಮೇಲೆ ಕೇವಲ ಆರೋಪಗಳನ್ನು ಮಾತ್ರ ಮಾಡುತ್ತಿದ್ದಿರಾ, ನನ್ನ ಮಾನಹರಣ ಮಾಡುತ್ತಿದ್ದೀರಿ. ಆದರೆ ನಾನು ಮಾಡಿರುವುದು ತಪ್ಪಿದ್ದರೆ, ನೀವು ನ್ಯಾಯಾಲಯಕ್ಕೆ (court) ಹೋಗಬೇಕು, ಅಲ್ಲಿ ನನ್ನ ವಿರುದ್ದ ಹೋರಾಟ ನಡೆಸಬೇಕು. ಅದನ್ನು ಬಿಟ್ಟು ಮಾದ್ಯಮಗಳ (News Channels) ಮುಂದೆ ಕುಳಿತು ನ್ಯಾಯಬೇಕೆಂದು ಹೋರಾಟ ಮಾಡಿದರೆ, ನ್ಯಾಯಾಲಯಗಳು ಏಕೆ ಬೇಕು ಎಂದು ಸಂಸದ ಬ್ರಿಜ್ ಭೂಷಣ್ (Brij Bhushan) ಕುಸ್ತಿಪಟುಗಳನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿರುವ ಅವರು, ಕುಸ್ತಿಪಟುಗಳ (Wrestlers) ತಾವೇ ಹೇಳಿದ್ದೇ ನ್ಯಾಯ ಎನ್ನುತ್ತಿದ್ದಾರೆ. ಅವರ ಮಾತಿನ ಆಧಾರದ ಮೇಲೆಯೇ ತೀರ್ಮಾನಕ್ಕೆ ಬರುವುದಾದರೆ, ನ್ಯಾಯಾಲಯಗಳ ಅವಶ್ಯಕತೆಯೇ ಇರುವುದಿಲ್ಲ. ಇನ್ನು ಈ ಕುಸ್ತಿಪಟುಗಳು ಅನವಶ್ಯಕ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಪ್ರತಿಭಟನಾನಿರತ ಕುಸ್ತಿಪಟುಗಳು ಕಾಂಗ್ರೆಸ್ನ ಮಡಿಲಲ್ಲಿ ಕುಳಿತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ (BJP) ಸಂಸದ ಬ್ರಿಜ್ ಭೂಷಣ್ ಸಿಂಗ್ ಶರಣ್ ಅವರ ಆಪ್ತ ಸಂಜಯ್ ಸಿಂಗ್ ( Sanjay Sing ) ಅವರನ್ನು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಮುಖ್ಯಸ್ಥರಾಗಿ ಆಯ್ಕೆ ಮಾಡುವುದನ್ನು ಕುಸ್ತಿಪಟುಗಳು ವಿರೋಧಿಸುವುದನ್ನು ಮುಂದುವರೆಸಿದ ನಂತರ, ಬ್ರಿಜ್ ಭೂಷಣ್ ಅವರು, ಪ್ರತಿಭಟನಾನಿರತ ಕುಸ್ತಿಪಟುಗಳು ಕಾಂಗ್ರೆಸ್ನ ಮಡಿಲಲ್ಲಿ ಕುಳಿತಿರುವುದರಿಂದ ಪ್ರತಿಭಟನಾಕಾರರನ್ನು ಯಾರೂ ಬೆಂಬಲಿಸುತ್ತಿಲ್ಲ. ಕುಸ್ತಿಯ ಬೆಳವಣಿಗೆಯು 11 ತಿಂಗಳುಗಳಿಂದ ಪ್ರಭಾವಿತವಾಗಿದೆ. ನ್ಯಾಯಯುತ ಚುನಾವಣೆ ನಡೆದು ನಮ್ಮ ಪಾಳಯದಿಂದ ಸಂಜಯ್ ಸಿಂಗ್ ಅವರು ಬಹುಮತದೊಂದಿಗೆ ಆಯ್ಕೆಯಾದರು. ಅವರ ಅಭ್ಯರ್ಥಿಯು 33 ಮತಗಳಿಂದ ಸೋತರು. ಪ್ರಜಾತಾಂತ್ರಿಕ ವಿಧಾನದ ಮೂಲಕ ಆಯ್ಕೆಯನ್ನು ವಿರೋಧಿಸುವ ಹಕ್ಕು ಕುಸ್ತಿಪಟುಗಳಿಗೆ ಇಲ್ಲ. ಇನ್ನುಸಾಕ್ಷಿ ಮಲಿಕ್ ಅವರು ಕ್ರೀಡೆಗೆ ವಿದಾಯ ಹೇಳಿದರೆ, ನಾನು ಸಹಾಯ ಮಾಡಲು ಏನು ಮಾಡಬಹುದು..? ಎಂದು ಪ್ರಶ್ನಿಸಿದ್ದಾರೆ.
ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟನೆ ಏಕೆ?
ವಿನೇಶ್ ಫೋಗಟ್,(Vinesh Phogat) ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಸೇರಿದಂತೆ ಟಾಪ್ ಒಲಿಂಪಿಯನ್ಗಳು ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಕುಸ್ತಿಪಟುಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಮೇಲೆ ಸಂಸದ ಬ್ರಿಜ್ ಭೂಷಣ್ ಅವರ ಬಂಧನಕ್ಕೆ ಒತ್ತಾಯಿಸಿದರು. ಬ್ರಿಜ್ ಭೂಷಣ್ ಸಿಂಗ್ ಶರಣ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ನಂತರ ಅವರು ಜೂನ್ನಲ್ಲಿ ಐದು ತಿಂಗಳ ನಂತರ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದರು.