20 ಸಾವಿರ ರೂಪಾಯಿಯೊಳಗಿನ 5ಜಿ ಸ್ಮಾರ್ಟ್‌ಫೋನ್‌ಗಳು ಲಭ್ಯ: ಹಾಗಾದ್ರೆ ಮತ್ತೇಕೆ ತಡ ಇಂದೇ ಖರೀದಿಸಿ

ಈಗಿನ ಕಾಲದಲ್ಲಿ ಫೋನ್ (Phone) ಇಲ್ಲವಾದರೆ ಯಾವ ಕೆಲಸವು ಆಗೋದಿಲ್ಲ ಹಾಗಂತ ತುಂಬಾ ದುಬಾರಿ ಬೇಡ ಅಂದರು ಬಜೆಟ್ (budget friendly 5g smartphone) ಸ್ನೇಹಿ ಇರುವಂತಹ ಯಾವ

ಫೋನ್ ಖರೀದಿಸಿದರೆ ಉತ್ತಮ ಎಂಬ ಪ್ರಶ್ನೆಗಳು ಮೂಡಿದ್ದರೆ ಅದಕ್ಕಾಗಿ ಉಪಯುಕ್ತವಾಗುವಂತಹ (budget friendly 5g smartphone) ಕೆಲ ಫೋನ್‌ಗಳ ಮಾಹಿತಿ ಇಲ್ಲಿವೆ.

ಫೋನ್‌ಗಳು ಈಗ ಬರೀ ಕರೆ ಮಾಡುವ ಸಾಧನ ಮಾತ್ರವಲ್ಲದೆ. ಸ್ಮಾರ್ಟ್‌ ಫೋನ್‌ಗಳು (Smart Phone) ಈಗ ಬಹುತೇಕರ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಹಣ ವರ್ಗಾವಣೆ, ಹಣ ಪಾವತಿ,

ಮನರಂಜನೆ, ಹೀಗೆ ಅನೇಕ ನಮ್ಮ ದೈನಂದಿನ ಚಟುವಟಿಕೆಗಳಿಗೆ ಸ್ಮಾರ್ಟ್‌ ಫೋನ್‌ಗಳು ಆಧಾರವಾಗಿವೆ. ಈ ಸ್ಮಾರ್ಟ್‌ಫೋನ್‌ಗಳು ನಮ್ಮ ಬದುಕಿನಲ್ಲಿ ಅದೆಷ್ಟು ಹಾಸುಹೊಕ್ಕಾಗಿದೆ ಎಂದರೆ ಒಂದು

ಕ್ಷಣ ಫೋನ್ ಕಾಣಿಸದೇ ಇದ್ದರೂ ನಮ್ಮ ಮುಂದಿರುವವರ ಮೇಲೆ ಕೋಪ, ಚಡಪಡಿಕೆ ಒಂದೇ ಸಮಯಕ್ಕೆ ಶುರುವಾಗುತ್ತದೆ.

ಭಾರತೀಯ ಮಾರುಕಟ್ಟೆಯಲ್ಲಿ ಜನರ ಬೇಡಿಕೆಗೆ ಅನುಗುಣವಾಗಿ ಬೇರೆ ಬೇರೆ ರೀತಿಯ ಸಾಕಷ್ಟು ಮಾದರಿಯ ಸ್ಮಾರ್ಟ್‌ಫೋನ್‌ಗಳು ಈಗ ಲಗ್ಗೆ ಇಡುತ್ತಿದ್ದು, ನಮ್ಮ ಬಜೆಟ್ ಗೆ ಅನುಗುಣವಾದ

ಮೌಲ್ಯದ ಫೋನ್‌ನಿಂದ ಹಿಡಿದು ದುಬಾರಿ ಬೆಲೆಯ ಫೋನ್‌ನ ತನಕ ಸಾಕಷ್ಟು ಬಗೆಯ, ಹಲವು ವೈಶಿಷ್ಟ್ಯಗಳಿರುವ ಫೋನ್‌ಗಳು ಈಗ ಸಿಗುತ್ತಿವೆ. ಬಜೆಟ್ ಸ್ನೇಹಿಯಾದ ಹಾಗೂ 20 ಸಾವಿರ

ರೂಪಾಯಿಯೊಳಗೆ ಸಿಗುವ ಕೆಲವು 5ಜಿ (5G) ಸ್ಮಾರ್ಟ್‌ಫೋನ್‌ಗಳ ಮಾಹಿತಿ ಇಲ್ಲಿದೆ.

ಲಾವಾ ಬ್ಲೇಜ್ 5ಜಿ
ಈಗ ನಾವು ಪರಿಚಯಿಸುತ್ತಿರುವ ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ (Mediatech Dimensionity) 700 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, ಎಂ.ಎಂ ಆಡಿಯೋ ಜಾಕ್‌ಅಲ್ಲದೆ 5000mAh

ಬ್ಯಾಟರಿ ಹಾಗೂ 3.5 ಲಾವಾ ಬ್ಲೇಜ್ 5ಜಿ ಫೋನ್‌ನ ಬೆಲೆ 11,999 ರೂಪಾಯಿಯಾಗಿದೆ.

ನೋಕಿಯಾ 5ಜಿ ಫೋನ್
ಇದು ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, ಈ ಫೋನ್‌ ಕೂಡಾ 5000mAh ಬ್ಯಾಟರಿ (Battery) ಹೊಂದಿದೆ. ಅಲ್ಲದೆ ಇದು 3.5 ಎಂಎಂ ಆಡಿಯೋ (Audio) ಜಾಕ್‌ನೊಂದಿಗೆ

ಲಭ್ಯವಿದ್ದು, ನೋಕಿಯಾ ಜಿ42, 5ಜಿ ಸ್ಮಾರ್ಟ್‌ ಫೋನ್‌ನ ಬೆಲೆ 12,999 ರೂಪಾಯಿಯಾಗಿದೆ.

ಟೆಕ್ನೋ ಪೋವಾ 5 ಪ್ರೋ
ಪ್ರಸಿದ್ಧ ಟೆಕ್ನೋ ಕಂಪನಿಯ ಟೆಕ್ನೋ ಪೋವಾ (Techno Poa) 5 ಪ್ರೋ ಸ್ಮಾರ್ಟ್‌ಫೋನ್ 14,999 ರೂಪಾಯಿಗೆ ಸಿಗುತ್ತದೆ. ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6080 ಚಿಪ್‌ಸೆಟ್‌ನಿಂದ

ಚಾಲಿತವಾಗಿದ್ದು, ಈ ಫೋನ್ 5000mAh ಬ್ಯಾಟರಿ ಹಾಗೂ 3.5 ಎಂಎಂ ಹೆಡ್‌ಫೋನ್ ಜಾಕ್‌ನೊಂದಿಗೆ ಸಿಗುತ್ತದೆ.

ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 810 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, ಈ ಫೋನ್ ಕೂಡಾ 5000mAh ಬ್ಯಾಟರಿ ಹಾಗೂ 3.5 ಎಂಎಂ ಹೆಡ್‌ಫೋನ್ ಜಾಕ್‌ನೊಂದಿಗೆ ಗ್ರಾಹಕರಿಗೆ

ಲಭಿಸುತ್ತದೆ. ರೆಡ್ಮಿ ನೋಟ್ 11ಟಿ 5ಜಿ ಫೋನ್‌ನ ಬೆಲೆ 17,999 ರೂಪಾಯಿಗಳು. ಇನ್ನು ರಿಯಲ್ ಮಿ ನರ್ಝೋ 60 5ಜಿ ಫೋನ್‌ನ ಬೆಲೆ 17,999 ರೂಪಾಯಿ. ಈ ಫೋನ್ 6.4 ಇಂಚಿನ

AMOLED ಡಿಸ್‌ಪ್ಲೇ ಹೊಂದಿದ್ದು, 5000mAh ಬ್ಯಾಟರಿ (Battery) ಹಾಗೂ 3.5 ಎಂಎಂ ಹೆಡ್‌ಫೋನ್ ಜಾಕ್‌ನೊಂದಿಗೆ ಸಿಗುತ್ತದೆ.

ಸ್ಯಾಮ್‌ಸಂಗ್ 5ಜಿ ಗ್ಯಾಲಕ್ಸಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ14 5ಜಿ ಫೋನ್‌ನ ಬೆಲೆ 18,999 ರೂಪಾಯಿ. ಇದು 6.6 ಇಂಚಿನ ಎಫ್‌ಎಚ್‌ಡಿ ಪ್ಲಸ್,ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಈ ಫೋನ್ 5000mAh ಬ್ಯಾಟರಿ ಹೊಂದಿದ್ದು,

ಇದು 3.5 ಎಂಎಂ ಆಡಿಯೋ ಜಾಕ್‌ನೊಂದಿಗೆ ಸಿಗಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ34 5ಜಿ
ಇದು 6.5 ಇಂಚಿನ ಸೂಪರ್ AMOLED ಡಿಸ್‌ಪ್ಲೇ ಹೊಂದಿದ್ದು, 6000mAh ಬ್ಯಾಟರಿ ಹಾಗೂ 3.5 ಎಂಎಂ ಆಡಿಯೋ ಜಾಕ್‌ನೊಂದಿಗೆ ಸಿಗುತ್ತಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ34 5ಜಿ

ಸ್ಮಾರ್ಟ್‌ಫೋನ್‌ನ ಬೆಲೆ 19,999 ರೂಪಾಯಿ.ಹಾಗಾದ್ರೆ ಮತ್ಯಾಕೆ ತಡ ನಿಮ್ಮ ಬಜೆಟ್ ಗೆ ಅನುಗುಣವಾದ ಫೀಚರ್ ಹೊಂದಿರುವ ಮೊಬೈಲ್ ಇಂದೇ ಖರೀದಿಸಿ.

ಇದನ್ನು ಓದಿ : ವಿದ್ಯುತ್ ವ್ಯತ್ಯಯ: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ

Exit mobile version