ಪಾಕಶಾಸ್ತ್ರ : ಸುಲಭವಾಗಿ ತಯಾರಿಸಬಹುದಾದ ಬೆಲ್ಲದ ಬರ್ಫಿ

ಬರ್ಫಿ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಅತೀ ಕಡಿಮೆ ಸಮಯದಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ತಯಾರಿಸಬಹುದಾದ ಅದ್ಬುತ ಸಿಹಿ ತಿಂಡಿಯನ್ನು ಹೇಗೆ ಮಾಡುವುದು ಎಂದು ನೀವೂ ತಿಳಿದುಕೊಳ್ಳಬೇಕಾ ಹಾಗಾದ್ರೆ ನೋಡಿ

ಬೆಲ್ಲದ ಬರ್ಫಿ ಮಾಡಲು ಬೇಕಾಗುವ ಸಾಮಗ್ರಿಗಳು

ಬೆಲ್ಲದ ಬರ್ಫಿ ಮಾಡುವ ವಿಧಾನ :

ಒಂದು ಬಾಣಲೆಗೆ ಕಾಲು ಕಪ್ ಅಷ್ಟು ತುಪ್ಪವನ್ನು ಸುರಿಯಿರಿ, ನಂತರ ತುಪ್ಪವನ್ನು ಕರಗಲು ಬಿಡಿ. ತುಪ್ಪ ಕರಗಿದ ನಂತರ ಒಂದು ಕಪ್ ಅಷ್ಟು ಗೋಧಿ ಹಿಟ್ಟು ಸೇರಿಸಿ, ಕಡಿಮೆ ಬೆಂಕಿಯಲ್ಲಿ ಸುಮಾರು ಇಪ್ಪತ್ತು ರಿಂದ ಮೂವತ್ತು ನಿಮಿಷಗಳ ಕಾಲ ಚನ್ನಾಗಿ ಮಿಕ್ಸ್ ಮಾಡಿ. ಇಲ್ಲಿ ತುಪ್ಪ ಕಡಿಮ ಎನಿಸಿದರೆ ಸ್ವಲ್ಪ ಸೇರಿಸಿ, ತಳುವಾದ ಹಿಟ್ಟಿನ ತರ ಭರ್ಪಿಯ ಹಿಟ್ಟು ತಯಾರು ಮಾಡಿ, ನಂತರ ಅದಕ್ಕೆ ಕಾಲು ಚಿಕ್ಕ ಚಮಚ ದಷ್ಟು ಕೊತ್ತಂಬರಿ ಪೌಡರ್ ಅನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ, ಅದೇ ರೀತಿ ಅರ್ಧ ಕಪ್  ಹುಡಿ ಮಾಡಿದ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮಿಕ್ಸ್ ಮಾಡಿ ಇಟ್ಟು ಬರ್ಫಿ ಅನ್ನು ಒಂದು ತಟ್ಟೆಗೆ ಹಾಕಿ, ಸೌಟ್ ನಿಂದಾ ಒತ್ತಿ ಜೊತೆಗೂಡಿಸಿ ನಂತರ ಬರ್ಫಿಯನ್ನು ಯಾವ ಆಕಾರಕ್ಕೆ ಬೇಕು ಹಾಗೆ ಕಟ್ ಮಾಡಿದರೆ ತುಂಬಾ ಚೆನ್ನಾಗಿರುತ್ತದೆ .ಕೊನೆಗೆ ಅದನ್ನು ತಂಪು ಆಗಲು ಫ್ರೀಜ್ ಅಲ್ಲಿ ಇಡಿ. ಸುಮಾರು ಹದಿನೈದು ನಿಮಿಷಗಳ ನಂತರ ನೀವೂ ಕಟ್ ಮಾಡಿದ ಬರ್ಫಿ ಯನ್ನೂ ತೆಗೆದು ಸವಿಯಿರಿ.

Exit mobile version