ಪ್ರಪಂಚದ ಅತ್ಯಂತ ಬಡ ದೇಶ ಯಾವುದು ಗೊತ್ತಾ? ಇಲ್ಲಿದೆ ನೋಡಿ ಕುತೂಹಲಕಾರಿ ವರದಿ!

burundi

ಹಿಂದುಳಿದ ರಾಷ್ಟ್ರಗಳಲ್ಲಿ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಬಹುದೊಡ್ಡ ಸವಾಲೆಂದರೆ ಅದು ಬಡತನ. ಅದು ಕೇವಲ ಆರ್ಥಿಕ ವಿಚಾರವಾಗಿರದೆ ಮಾನವನ ಪರಿಸ್ಥಿತಿಯೂ ಆಗಿದೆ. ಬಡತನವು ನೋವು, ಹಸಿವು, ನರಳುವಿಕೆ ಮತ್ತು ಹತಾಶೆಯ ಪರಿಸ್ಥಿತಿಯಾಗಿದೆ. ಭಾರತ ಅಷ್ಟೇ ಅಲ್ಲ ಬಹುತೇಕ ರಾಷ್ಟ್ರಗಳಲ್ಲಿ ಬಡತನ ಎಂಬುದು ಒಂದು ಜ್ವಲಂತ ಸಮಸ್ಯೆಯಾಗಿದೆ. ಇಡೀ ವಿಶ್ವದಲ್ಲಿ ಇರುವ ಬಡ ರಾಷ್ಟ್ರಗಳನ್ನ ಲೆಕ್ಕಕ್ಕೆ ತೆಗೆದುಕೊಂಡ್ರೆ ನಾವು ಭಾರತದಲ್ಲಿ ಹುಟ್ಟಿರುವುದಕ್ಕೆ ತುಂಬಾನೆ ಖುಷಿ ಪಡಬೇಕು.

ಭಾರತದಲ್ಲಿ ಹುಟ್ಟಿರುವುದೇ ಸೌಭಾಗ್ಯ ಎನಿಸುತ್ತೆ. ಯಾಕಂದ್ರೆ ಕೇವಲ ಅಭಿವೃದ್ಧಿಯಾಗಿರುವ ದೇಶಗಳಿಗೆ ಹೋಲಿಸಿದ್ರೆ ರೂಪಾಯಿ ಮೌಲ್ಯ ಕಡಿಮೆಯಿದೆ. ಆದ್ರೆ ಭಾರತಕ್ಕಿಂತ 99 ಪಟ್ಟು ಕಡಿಮೆ ಕರೆನ್ಸಿ ಮೌಲ್ಯವಿರುವ , ಆರ್ಥಿಕವಾಗಿ ಬಹಳ ಹಿಂದುಳಿದ ರಾಷ್ಟ್ರಗಳಿವೆ.
ಹೌದು, ಇಡೀ ವಿಶ್ವದಲ್ಲಿ ಒಂದು ಹೊತ್ತಿನ ಊಟಕ್ಕೂ ಜನರು ಒದ್ದಾಡುತ್ತಿರುವ ಅದೆಷ್ಟೋ ದೇಶಗಳಿವೆ, ಅವುಗಳನ್ನು ಇಲ್ಲಿ ತಿಳಿಸಲಾಗಿದೆ ಮುಂದೆ ಓದಿ.

ಮೊದಲಿಗೆ ಯಾವುದೇ ದೇಶದ ಆರ್ಥಿಕ ಪರಿಸ್ಥಿತಿಯನ್ನ ಆ ದೇಶದ GDP ಅನುಸಾರ ಅಳೆಯಲಾಗುತ್ತದೆ ಎಂಬುದನ್ನ ನಾವು ಅರ್ಥ ಮಾಡಿಕೊಳ್ಳಬೇಕು. ಇದರ ಆಧಾರದ ಮೇಲೆ ‘ಬುರುಂಡಿ’ ದೇಶವನ್ನು ಅತ್ಯಂತ ಬಡ ದೇಶ ಅಂತ ಪರಿಗಣಿಸಲಾಗಿದೆ.
ಪೂರ್ವ ಆಫ್ರಿಕಾಗೆ ಸೇರುವ ಬುರುಂಡಿ, ಅಧಿಕೃತವಾಗಿ ಬುರುಂಡಿ ಗಣರಾಜ್ಯವಾಗಿದೆ. ಇದು ಗ್ರೇಟ್ ರಿಫ್ಟ್ ಕಣಿವೆ ಪ್ರದೇಶದಲ್ಲಿದ್ದು, ಹಿಂಸಾಚಾರ ಮತ್ತು ಅಪಾರ ತೊಂದರೆಗಳಿಗೆ ಒಳಗಾದ ರಾಷ್ಟ್ರವಾಗಿದೆ ಹಾಗೂ ವ್ಯಾಪಕ ಬಡತನ ಹೊಂದಿರುವ ರಾಷ್ಟ್ರವಾಗಿದೆ. ಇಲ್ಲಿ ಅಸಮರ್ಪಕ ದೇಶೀಯ ಉತ್ಪಾದನೆಯು ನಾಗರೀಕರ ಅಪೌಷ್ಠಿಕತೆಗೆ ಕಾರಣವಾಗಿದೆ.

2019ರಲ್ಲಿ ಅಂಕಿ-ಅಂಶಗಳ ಪ್ರಕಾರ, ಬುರುಂಡಿಯಲ್ಲಿ 1 ಕೋಟಿ 17 ಲಕ್ಷದ 45,876 ಕೋಟಿ ಜನರಿದ್ದಾರೆ. 1962 ರಲ್ಲಿ ಸ್ವಾತಂತ್ರ್ಯ ಪಡೆದ ಈ ದೇಶದಲ್ಲಿ ಕಿತ್ತು ತಿನ್ನುವ ಬಡತನವಿದ್ದು, ಬಹುತೇಕ ಜನರು ನಿರುದ್ಯೋಗಿಗಳಾಗಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಕೇವಲ 13.4 ಪರ್ಸೆಂಟ್ ಜನರು ನಗರದಲ್ಲಿ ವಾಸಿಸುತ್ತಿದ್ದು ಉಳಿದವರು ಹಳ್ಳಿಗಳಲ್ಲೇ ವಾಸಿಸುತ್ತಿದ್ದಾರೆ. ಪೂರ್ವ ಆಫ್ರಿಕಾದಲ್ಲಿನ ಈ ದೇಶದಲ್ಲಿ 80% ಗಿಂತಲೂ ಅಧಿಕ ಜನಸಂಖ್ಯೆಯ ಜೀವನ ಬಡತನ ರೇಖೆಗಿಂತಲೂ ಕೆಳಗಿದೆ. 64 % ಗಿಂತಲೂ ಹೆಚ್ಚಿನ ಜನರು ದಿನಕ್ಕೆ 1 ಡಾಲರ್ ಗಿಂತಲೂ ಕಡಿಮೆ ಹಣ ಸಂಪಾದಿಸುತ್ತಾರೆ. ಇಲ್ಲಿನ 2020ರ ವರದಿಯ ಪ್ರಕಾರ ಇಲ್ಲಿನ ಜಿಡಿಪಿ ರೇಟ್ – 2015 ಡಾಲರ್.


ಬುರುಂಡಿ “ಕಪ್ಪು” ಖಂಡದ ರಾಜ್ಯ, ದೊಡ್ಡ ಆಫ್ರಿಕನ್ ಸರೋವರಗಳ ವಲಯದಲ್ಲಿದೆ. ಇದು ವಿಶ್ವದ ಹಸಿವಿನ ದೇಶ! ಬುರುಂಡಿಯು ಶಾಶ್ವತ ಭ್ರಷ್ಟಾಚಾರ, ಮಿಲಿಟರಿ ಸಂಘರ್ಷಗಳನ್ನು ಸಹಿಸಿಕೊಂಡು ದುರ್ಬಲಗೊಂಡಿದೆ. ಇಲ್ಲಿನ ಜನರು ಅನಕ್ಷರಸ್ಥರು ಮತ್ತು ಅಸಹ್ಯಕರ ಆರೋಗ್ಯವನ್ನು ಹೊಂದಿದ್ದಾರೆ. ಆದಷ್ಟು ಬೇಗ ಬುರುಂಡಿ ಈ ಬಡತನದ ಕೂಪದಿಂದ ಹೊರಬಂದು ಅಭಿವೃದ್ಧಿ ಕಾಣಲಿ ಅಂತ ನಾವೂ ಆಶಿಸೋಣ.

Exit mobile version