ಇನ್ಮುಂದೆ ಕರೆ ಮಾಡಿದವರ ನಂಬರ್ ಅಲ್ಲ ಹೆಸರು ಕಾಣಲಿ ಎಂದ ಟ್ರಾಯ್‌ !

New Delhi: ಅನಪೇಕ್ಷಿತ ಕರೆಗಳನ್ನು ನಿಗ್ರಹಿಸಲು ಮತ್ತು (Caller name on Display-TRAI) ಅಪೇಕ್ಷಿಸದ ಕರೆಗಳನ್ನು ಪರಿಶೀಲಿಸಲು ಎಲ್ಲ ನೆಟ್‌ವರ್ಕ್‌ ಅಪರೇಟರ್‌ಗಳು

ಮೊಬೈಲ್‌ಗ‌ಳಲ್ಲಿ ಕರೆ ಮಾಡಿದವರ ಹೆಸರುಗಳು ಡಿಸ್ಪೇ ಆಗುವ ಸೇವೆಯನ್ನು ಅನುಷ್ಠಾನ ಗೊಳಿಸಬೇಕು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌)

ಶಿಫಾರಸು ಮಾಡಿದೆ. ಈ ವೈಶಿಷ್ಟ್ಯವನ್ನು ಕಾಲಿಂಗ್ ನೇಮ್ ಪ್ರೆಸೆಂಟೇಶನ್ (CNAP )ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಭಾರತೀಯ ದೂರಸಂಪರ್ಕ ನೆಟ್ವರ್ಕ್ನಲ್ಲಿ ಮತ್ತು

ಭಾರತದಲ್ಲಿ ಮಾರಾಟವಾಗುವ ಎಲ್ಲಾ ಸಾಧನಗಳಲ್ಲಿ ಪೂರಕ ಸೇವೆಯಾಗಿ (Caller name on Display-TRAI) ಹೊರತರುವಂತೆ ಟ್ರಾಯ್ ಹೇಳಿದೆ.

ಇದೇ ವೇಳೆ ಎಲ್ಲ ಸ್ಮಾರ್ಟ್‌ ಫೋನ್‌ (Smartphone) ತಯಾರಕರು ನಿಗದಿತ ಅವಧಿಯೊಳಗೆ ಈ ವೈಶಿಷ್ಟವನ್ನು ಕಡ್ಡಾಯವಾಗಿ ಸಕ್ರಿಯಗೊಳಿಸಬೇಕು ಎಂದು ನಿರ್ದೇಶಿಸಿದೆ.

ದೇಶದಲ್ಲಿ ಮಾರಾಟ ವಾಗುವ ಎಲ್ಲ ಸ್ಮಾರ್ಟ್‌ ಫೋನ್‌ಗಳಲ್ಲಿ ಕಾಲಿಂಗ್‌ ನೇಮ್‌ ಪ್ರಸೆಂಟೇಶನ್‌ (Calling Name Presentation) ಸೇವೆ ಹೊಂದಿರಬೇಕು. ಈ ಸೇವೆ

ಅನುಷ್ಠಾನಗೊಳಿಸಲು ಕೇಂದ್ರ ಸರಕಾರ ನಿಗದಿತ ಅವಧಿಯ ಮಿತಿಯನ್ನು ಹೇರಬೇಕು. ಭಾರತಾ ದ್ಯಂತ ಎಲ್ಲ ನೆಟ್‌ವರ್ಕ್‌ ಅಪರೇಟರ್‌ಗಳು ಈ ನಿಯಮಗಳನ್ನು ಪಾಲಿಸ

ಬೇಕು ಎಂದು ಹೇಳಿರುವ ಟ್ರಾಯ್‌, ಈ ಕುರಿತು ಸರಕಾರಕ್ಕೆ ಶಿಫಾರಸು ಮಾಡಿದೆ.

ಫೋನ್ ಸಂಖ್ಯೆಯನ್ನು ಪಡೆದ ನಂತರ ವ್ಯಕ್ತಿಯ ಹೆಸರು ಬದಲಾಗಿದ್ದರೆ, “ಸರ್ಕಾರ ನೀಡಿದ ಪರಿಶೀಲಿಸಬಹುದಾದ ಗುರುತಿನ ದಾಖಲೆಗಳನ್ನು” ಬಳಸಿಕೊಂಡು ಹೆಸರುಗಳನ್ನು

ತಿದ್ದುಪಡಿ ಮಾಡಲು ದೂರಸಂಪರ್ಕ ಇಲಾಖೆ ಟಿಎಸ್ಪಿಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಟ್ರಾಯ್ (TRAI) ಸೂಚಿಸಿದೆ.ನಮಗೆ ಕರೆ ಮಾಡುತ್ತಿರುವವರು

ಯಾರು ಎಂಬುದು ವ್ಯಕ್ತಿಗೆ ತಿಳಿಯಬೇಕು.

ಸಾಮಾನ್ಯ ವಾಯ್ಸ ಕಾಲ್‌, ವಾಟ್ಸ್‌ಆಪ್‌ ಕಾಲ್‌ (WhatsApp Call), ಫೇಸ್‌ಟೈಮ್‌ ಅಥವಾ ಒಟಿಟಿ ಕಾಲ್‌ ಎಲ್ಲದಕ್ಕೂ ಇದು ಅನ್ವಯವಾಗಬೇಕು. ಇದರಿಂದ ನಮ್ಮನ್ನು

ಸಂಪರ್ಕಿಸಲು ಬಯಸುವವರು ಯಾರು ಎಂದು ತಿಳಿಯುತ್ತದೆ ಇದರಿಂದ ಹಲವಾರು ಅನುಕೂಲಗಳಿವೆ ಎಂದು ಇತ್ತೀಚೆಗೆ ದೂರಸಂಪರ್ಕ ಸಚಿವ ಅಶ್ವಿ‌ನಿ ವೈಷ್ಣವ್‌ ಹೇಳಿದ್ದಾರೆ.

ಇದನ್ನು ಓದಿ: ಜ್ಞಾನವಾಪಿಯಲ್ಲಿ ಪೂಜೆಗೆ ತಡೆ ನೀಡಲು ಹೈಕೋರ್ಟ್ ನಕಾರ; ಮುಸ್ಲಿಂ ಸಂಘಟನೆಗಳಿಗೆ ಹಿನ್ನಡೆ

Exit mobile version