ಬೇರೆ ರಾಜ್ಯಗಳಿಗೆ ಆಕ್ಸಿಜನ್ ನೀಡಲು ಆಗಲ್ಲ: ಪ್ರಧಾನಿಗೆ ಕೇರಳ ಸಿಎಂ ಪತ್ರ

ತಿರುವನಂತಪುರಂ, ಮೇ. 11: ಕೇರಳಕ್ಕೆ ಹೆಚ್ಚಿನ ಪ್ರಮಾಣದ ಆಮ್ಲಜನಕ ಅವಶ್ಯಕತೆ ಇದೆ. ಹೀಗಾಗಿ, ಬೇರೆ ರಾಜ್ಯಗಳಿಗೆ ನೀಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

ʻನೆರೆಯ ರಾಜ್ಯಗಳಿಗೆ ಈಗಾಗಲೇ ಆಮ್ಲಜನಕ ಬಫರ್‌ ಸ್ಟಾಕ್‌ಗಳನ್ನು ಸರಬರಾಜು ಮಾಡಲಾಗಿದೆ. ಈಗ ಕೇವಲ 86 ಮೆಟ್ರಿಕ್‌ ಟನ್‌ ಬಫರ್‌ ಉಳಿದಿದೆ. ಹೀಗಾಗಿ, ಹೆಚ್ಚಿನ ಸರಬರಾಜು ಸಾಧ್ಯವಿಲ್ಲʼ ಎಂದು ಪ್ರಧಾನಿ ಮೋದಿ ಅವರಿಗೆ ಪಿಣರಾಯ್‌ ಪತ್ರ ಬರೆದಿದ್ದಾರೆ.

ತಮಿಳುನಾಡು ರಾಜ್ಯಕ್ಕೆ ಮೇ 10ರವರೆಗೂ 40 ಮೆಟ್ರಿಕ್‌ ಟನ್‌ನಷ್ಟು ಆಮ್ಲಜನಕ ಸರಬರಾಜು ಮಾಡಲಾಗಿದೆ. ಪ್ರಸ್ತುತ ಕೇರಳ ರಾಜ್ಯದ ಪರಿಸ್ಥಿತಿ ಅವಲೋಕಿಸಿದರೆ, ಈ ಮಟ್ಟದ ಸರಬರಾಜು ಸಾಧ್ಯವಿಲ್ಲʼ ಎಂದು ವಿಜಯನ್‌ ಸ್ಪಷ್ಟಪಡಿಸಿದ್ದಾರೆ.

Exit mobile version