ನಾಯಕನ ಸ್ಥಾನದಿಂದ ಕೆಳಗಿಳಿದ `ಕ್ಯಾಪ್ಟನ್ ಕೂಲ್’ ; ನೂತನ ನಾಯಕನಾಗಿ ರವೀಂದ್ರ ಜಡೇಜಾ!

captain cool

ಇದೇ ಶನಿವಾರ(Saturday) ಮಾರ್ಚ್ 26 ರಂದು ಟಾಟಾ ಐಪಿಎಲ್(Tata IPL) 2022 ಪಂದ್ಯಗಳು ಆರಂಭವಾಗಲಿದೆ. ಮೊದಲ ಪಂದ್ಯ ಆರಂಭವೇ ಧೋನಿ(Mahendra Singh Dhoni) ನಾಯಕತ್ವದ ಚೆನೈ ಸೂಪರ್ ಕಿಂಗ್ಸ್(Chennai Super Kings) ಮತ್ತು ಕೊಲ್ಕತಾ ನೈಟ್ ರೈಡರ್ಸ್(Kolkata Night Riders) ತಂಡಗಳ ನಡುವೆ ಹಣಾಹಣಿ ಕಾದಿದೆ. ಆದರೆ, ಈ ಮಧ್ಯೆ ಧೋನಿ ಅಭಿಮಾನಿಗಳಿಗೆ ಬೇಸರದ ಸಂಗತಿಯೊಂದು ಎದುರಾಗಿದೆ.

ಹೌದು, 12 ಸೀಸನ್ ಗಳನ್ನು ಸಿಎಸ್‍ಕೆ ನಾಯಕನಾಗಿ ಮುನ್ನೆಡೆಸಿಕೊಂಡು ಬಂದಿದ್ದ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರು, ತಮ್ಮ ನಾಯಕತ್ವಕ್ಕೆ ಇಂದು ರಾಜೀನಾಮೆ ಸೂಚಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಅದ್ಭುತ ನಾಯಕತ್ವ ಹೊಂದಿರುವ ಏಕೈಕ ನಾಯಕ ಎಂದು ಘೋಷಣೆ ಕೂಡ ಕೇಳಿಬಂದಿವೆ. ಇಂಥ ನಾಯಕತ್ವವನ್ನು ಇನ್ನು ಮುಂದೆ ಧೋನಿ ಅವರ ಅಭಿಮಾನಿಗಳು ಕಳೆದುಕೊಂಡಿದ್ದಾರೆ ಎನ್ನಬಹುದು. ಮಹೇಂದ್ರ ಸಿಂಗ್ ಧೋನಿ ಅವರು ಇನ್ನು ಮುಂದಿನ ಪಂದ್ಯಗಳಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವುದಿಲ್ಲ, ಬದಲಾಗಿ ತಮ್ಮ ಆಕರ್ಷಕ ಆಟವನ್ನು ಆಡುವ ಮೂಲಕ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸದ್ಯ ಮಹೇಂದ್ರ ಸಿಂಗ್ ಧೋನಿ ಅವರು ನಾಯಕತ್ವಕ್ಕೆ ರಾಜೀನಾಮೆ ಘೋಷಿಸಿದ ಬಳಿಕ ನಾಯಕನಾಗಿ ಸಿಎಸ್‍ಕೆ ತಂಡವನ್ನು ಮುಂದುವರಿಸಲು ಜಡೇಜಾ ಅವರಿಗೆ ನಾಯಕತ್ವ ಹಸ್ತಾಂತರಿಸಿದ್ದಾರೆ ಧೋನಿ. ಒಟ್ಟಾರೆ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಇನ್ನು ಮುಂದೆ ಆಟವನ್ನು ನೋಡಲಾಗುವುದಿಲ್ಲ ಎಂಬ ಬೇಸರವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ಖುಷಿ ಸಂಗತಿ ಎಂದರೆ ಧೋನಿ ಅವರ ಬ್ಯಾಟಿಂಗ್, ಕೀಪಿಂಗ್ ಜೊತೆಗೆ ಅಖಾಡದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದಕ್ಕೆ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Exit mobile version