ಅಶ್ಲೀಲ ಚಿತ್ರಗಳಿಗೆ ಸಂಬಂಧಿಸಿದ ಪ್ರಕರಣ: ಉದ್ಯಮಿ ರಾಜ್ ಕುಂದ್ರಾ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಪೂನಂ ಪಾಂಡೆ,‌ ಶೆರ್ಲಿನ್ ಚೋಪ್ರಾ

ಮುಂಬೈ, ಜು. 21: ಅಶ್ಲೀಲ ಚಿತ್ರಗಳಿಗೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಜೈಲು ಪಾಲಾಗಿರುವ ಬೆನ್ನಲ್ಲೇ ಬ್ರಿಟನ್ ಮೂಲದ ಉದ್ಯಮಿ ವಿರುದ್ಧ ನಟಿ ಪೂನಂ ಪಾಂಡೆ ಹಾಗೂ ಶೆರ್ಲಿನ್ ಚೋಪ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಸ್ಪೋಟಕ ಮಾಹಿತಿ ಹೊರ ಹಾಕಿದ್ದಾರೆ.

ಪ್ರಕರಣದ ಕುರಿತು ಮಾಹಿತಿ ನೀಡಿರು ಮಾಡೆಲ್ ಆರೋಪ ಮಾಡಿರುವ ಪೂನಂ ಪಾಂಡೆ ಹಾಗೂ ಶೆರ್ಲಿನ್ ಚೋಪ್ರಾ, 2019ರಲ್ಲಿ ನಾನು ಆಫ್ಟರ್ ಮೀ ಎಂಬ ಅಪ್ಲಿಕೇಶನ್ ಜೊತೆ ಕೆಲಸ ಮಾಡಿದ್ದೆ. ಒಪ್ಪಂದದ ವೇಳೆಯಲ್ಲಿ ನಾನು ಈ ಆಪ್ ಮಾಲೀಕರ ಜೊತೆ ಆದಾಯ ಹಂಚಿಕೆಯ ಬಗ್ಗೆಯೂ ಮಾತನಾಡಿದ್ದೆ.

ಆದರೆ ಒಪ್ಪಂದದ ಪ್ರಕಾರ ಆದಾಯ ಹಂಚಿಕೆ ಆಗುತ್ತಿಲ್ಲ ಎಂಬುದು ನನಗೆ ತಿಳಿದ ಬಳಿಕ ನಾನು ಈ ಒಪ್ಪಂದದಿಂದ ಹೊರನಡೆದಿದ್ದೆ. ನಾನು ಈ ವ್ಯವಹಾರದಿಂದ ಹೊರಬಂದ ಬಳಿಕವೂ ನನ್ನ ವಿಡಿಯೋ ಹಾಗೂ ಫೋಟೋಗಳನ್ನ ಅಪ್ಲಿಕೇಶನ್‌ನಲ್ಲಿ ಪೋಸ್ಟ್ ಮಾಡುವ ಕೆಲಸವನ್ನ ಮುಂದುವರಿಸಿದ್ದರು ಎಂದು ಪೂನಂ ಪಾಂಡೆ ಹೇಳಿದ್ದಾರೆ.

Exit mobile version