ತಮಿಳುನಾಡಿಗೆ ಹರಿದ ಕಾವೇರಿ: ಸರ್ಕಾರದ ಈ ನಡೆಗೆ ರಾಜ್ಯದ ರೈತರ ತೀವ್ರ ಆಕ್ರೋಶ

Karnataka : ನೀರಾವರಿ ಇಲಾಖೆಯು ಕರ್ನಾಟಕದ (Cauvery water flowd TamilNadu) ಜಲಾನಯನ ಪ್ರದೇಶಗಳಿಗೆ ಕೆಆರ್‌ಎಸ್ (KRS) ಮತ್ತು ಕಬಿನಿ (Kabini) ಜಲಾಶಯಗಳಿಂದ ನೀರು

ಬಿಡುವುದನ್ನು ನಿಲ್ಲಿಸಿ ಇದೀಗ ತಮಿಳುನಾಡಿಗೆ (Tamilnadu) ನೀರು ಹರಿಸಿದೆ. ಎರಡೂ ಜಲಾಶಯಗಳ ಜಲಾನಯನ ಪ್ರದೇಶದ ರೈತರು ಇದರಿಂದ ಕೋಪಗೊಂಡಿದ್ದಾರೆ. 5,270 ಕ್ಯೂಸೆಕ್ ಒಳಹರಿವು

ಕೆಆರ್ ಎಸ್ ಜಲಾಶಯಕ್ಕೆ ದಾಖಲಾಗಿದ್ದರಿಂದ 5,356 ಕ್ಯೂಸೆಕ್ ನೀರನ್ನು ಅಧಿಕಾರಿಗಳು ನದಿಗೆ ಬಿಟ್ಟಿದ್ದಾರೆ. 46 ಟಿಎಂಸಿ (TMC) ಅಡಿ ನೀರು ಕಳೆದ ವರ್ಷ ಇದೇ ಅವಧಿಯಲ್ಲಿ ಸಂಗ್ರಹವಾಗಿತ್ತು

ಆದರೆ ಈ ವರ್ಷ ಜಲಾಶಯದಲ್ಲಿ ಈಗ 35.235 ಟಿಎಂಸಿ ಅಡಿ ನೀರು (Cauvery water flowd TamilNadu) ಸಂಗ್ರಹ ಇದೆ.

ಎರಡು ಜಲಾಶಯಗಳ ಜಲಾನಯನ ಪ್ರದೇಶಗಳಾದ ಕೇರಳದ (Kerala) ವಯನಾಡು ಪ್ರದೇಶದಲ್ಲಿ ಮತ್ತು ಕೊಡಗು (Kodagu) ಪ್ರದೇಶದಲ್ಲಿ ನೀರು ಬಿಡುವ ನಿರ್ಧಾರ ಮುಂಗಾರು ದುರ್ಬಲವಾಗಿರುವ

ಸಂದರ್ಭದಲ್ಲಿ ಕೈಗೊಳ್ಳಲಾಗಿದೆ. ರಾಜ್ಯದ ಕಾವೇರಿ (Kaveri) ಜಲಾನಯನ ಪ್ರದೇಶದಲ್ಲಿರುವ ಜಲಾಶಯಗಳು ಒಳಹರಿವಿನ ಕೊರತೆಯಿಂದಾಗಿ ಇನ್ನೂ ಭರ್ತಿಯಾಗಿಲ್ಲ. ತಮಿಳುನಾಡಿಗೆ ಕಾವೇರಿ ನೀರು

ಬಿಡಲು ಕರ್ನಾಟಕ ಇದೇ ಕಾರಣಕ್ಕೆ ವಿಳಂಬ ಮಾಡುತ್ತಿದೆ.

Cauvery water

ಕಾಲುವೆಗಳಿಗೆ ನೀರು ಹರಿಸಲು ಆಗ್ರಹ

ತಮಿಳುನಾಡಿಗೆ ನೀರು ಹರಿಸಿರುವ ಅಧಿಕಾರಿಗಳು ಕರ್ನಾಟಕದ ರೈತರ ಬೆಳೆಗಳಿಗೆ ನೀರು ಬಿಡುವ ವಿಚಾರದಲ್ಲಿ ಇದೀಗ ಮೌನ ವಹಿಸಿದ್ದಾರೆ.ರೈತರು ರಾಜ್ಯ ಸರ್ಕಾರದ ಈ ನಡೆಗೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಬೇಡಿಕೆಗಳನ್ನು ಕಡೆಗಣಿಸಿ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ (Shantha Kumar)

ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : 2023-24ನೇ ಸಾಲಿನ ಖಾಸಗಿ ಕೋಟಾದ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಶುಲ್ಕ ಹೆಚ್ಚಳ; ಎಷ್ಟು ಶುಲ್ಕ ಪಾವತಿ?

”ಅಲ್ಪ ಮಳೆಯಿಂದ ಬಿತ್ತನೆ ಮಾಡಲು ಸಾಧ್ಯವಾಗದ ರೈತರ ಹಿತ ಕಾಪಾಡುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಈ ಕೂಡಲೇ ನಾಲೆಗಳಿಗೆ ನೀರಾವರಿಗೆ ನೀರು ಬಿಡಬೇಕು”

ಎಂದು ರೈತರು ಒತ್ತಾಯಿಸಿದ್ದಾರೆ. ಸುಪ್ರೀಂ ಕೋರ್ಟ್ (Supreme Court) ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿನ ನೀರು ಕಳೆದ ಮೂರು ವರ್ಷಗಳಲ್ಲಿ ತಮಿಳುನಾಡಿಗೆ ಹರಿದಿದೆ ಎಂದು ಹೇಳಿದ ಅವರು,

ಹೆಚ್ಚುವರಿ ನೀರನ್ನು ಸಂಗ್ರಹಿಸಲು ಸಂಕಷ್ಟದ ಸಮಯದಲ್ಲಿ ಬಳಸಲು ಮೇಕೆದಾಟು ನಲ್ಲಿ (Mekedatu) ಸಮತೋಲನ ಜಲಾಶಯವನ್ನು ನಿರ್ಮಿಸಿದರೆ ರಾಜ್ಯಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.

ಪ್ರಧಾನಿಗೆ ಪತ್ರ ಬರೆದಿದ್ದ ಸ್ಟಾಲಿನ್

ತಮಿಳುನಾಡು ಸರ್ಕಾರ ಕರ್ನಾಟಕ ನೀರು ಬಿಡುವುದನ್ನು ವಿಳಂಬ ಮಾಡಿದ ಬೆನ್ನಲ್ಲೇ ನೀರು ಬಿಡಲು ಒತ್ತಾಯಿಸಿತ್ತು. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ತಮಿಳುನಾಡು ಸಿಎಂ ಸ್ಟಾಲಿನ್

(Stalin) ಪತ್ರ ಬರೆದು ನೀರು ಬಿಡುವಂತೆ ಸೂಚಿಸಲು ಒತ್ತಾಯಿಸಿದ್ದರು.

ಬುಧವಾರ ನೀರಾವರಿ ಸಮಾಲೋಚನಾ ಸಮಿತಿ ಸಭೆಯನ್ನು ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಬಿಡುವ ಕುರಿತು ನಡೆಸಲಾಗುವುದು ಎಂದು ಕೃಷಿ ಸಚಿವ

ಎನ್.ಚಲುವರಾಯಸ್ವಾಮಿ (N Chaluvaraya Swamy) ತಿಳಿಸಿದ್ದರು.

ರಶ್ಮಿತಾ ಅನೀಶ್

Exit mobile version