Bengaluru , ಆಗಸ್ಟ್ 07; 2023-24ನೇ ಸಾಲಿಗೆ ಕರ್ನಾಟಕ (about private quota medical) ಸರ್ಕಾರ ರಾಜ್ಯದಲ್ಲಿನ ವೈದ್ಯಕೀಯ (Medical) ಹಾಗೂ ದಂತ ವೈದ್ಯಕೀಯ (Dental)
ಸರ್ಕಾರಿ, ಖಾಸಗಿ ಹಾಗೂ ಡೀಮ್ಡ್ ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಕಾಲೇಜುಗಳಲ್ಲಿನ ಸ್ನಾತಕ ಕೋರ್ಸುಗಳ ಸೀಟುಗಳ ಪ್ರವೇಶ ಶುಲ್ಕವನ್ನು ನಿಗದಿಪಡಿಸುವ ಬಗ್ಗೆ ಇದೀಗ ಆದೇಶ ಒಂದನ್ನು ಹೊರಡಿಸಿದೆ.
ಧಾರ್ಮಿಕ ಮತ್ತು ಭಾಷಾ ಅಲ್ಪ ಸಂಖ್ಯಾತ ವೈದ್ಯಕೀಯ, ಮತ್ತು ಅಲ್ಪ ಸಂಖ್ಯಾತ, ದಂತ ವೈದ್ಯಕೀಯ ಕಾಲೇಜುಗಳನ್ನು ಹೊರತುಪಡಿಸಿ ಉಳಿದ ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಮತ್ತು ಖಾಸಗಿ
ವೈದ್ಯಕೀಯ ಕಾಲೇಜುಗಳಲ್ಲಿ ಶೇ 10ರಷ್ಟು ಖಾಸಗಿ ಕೋಟಾದ (Private Quota) ಸೀಟುಗಳ ಶುಲ್ಕವನ್ನು ಹೆಚ್ಚಳ ಮಾಡಲು ಅನುಮತಿ ನೀಡಲಾಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆ ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಆದೇಶ ಹೊರಡಿಸಿದ್ದಾರೆ. 17/7/2023ರಂದು ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ
ನಡಾವಳಿಯನ್ನು (about private quota medical) ಇದರಲ್ಲಿ ಸೇರಿಸಲಾಗಿದೆ.
ಇದನ್ನೂ ಓದಿ : ವೈಟ್ ಬೋರ್ಡ್ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದುಗೊಳಿಸಲಾಗುವುದು : ಆಹಾರ ಮತ್ತು ನಾಗರಿಕ ಸಚಿವ ಕೆಎಚ್ ಮುನಿಯಪ್ಪ ಘೋಷಣೆ
ಖಾಸಗಿ ಕೋಟಾದ ಸೀಟುಗಳಿಗೆ ಮಾತ್ರ ಅನ್ವಯಿಸುವಂತೆ Karnataka Professional College’s Foundation (KPCF) ಅವರು ಪರಸ್ಪರ ಒಡಂಬಡಿಕೆಯಂತೆ ಶೇ.10ರಷ್ಟು ಶುಲ್ಕವನ್ನು ಹೆಚ್ಚಿಸಿ ಸ್ನಾತಕ
ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸುಗಳ ಸೀಟುಗಳಿಗೆ ಶುಲ್ಕವನ್ನು ನಿಗದಿ ಮಾಡಲಾಗಿದೆ.

ಸರ್ಕಾರದ ಆದೇಶ;
ಸರ್ಕಾರಿ ಸ್ವಾಯತ್ತ ವೈದ್ಯಕೀಯ/ ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕ ಕೋರ್ಸುಗಳ ಸೀಟುಗಳಿಗೆ 27/7/2023ರ ಸರ್ಕಾರಿ ಆದೇಶ ಸಂಖ್ಯೆ ಪ್ರಕಾರ 2023-24ನೇ ಸಾಲಿನಲ್ಲಿ ಶುಲ್ಕ ಹೀಗಿದೆ.
2022-23ನೇ ಸಾಲಿನ ಎಂಬಿಬಿಎಸ್(MBBS) ಶುಲ್ಕ 9,81,956 ರೂ.ಗಳು. ಆದರೆ 2023-24ನೇ ಸಾಲಿನಲ್ಲಿ ಪಾವತಿಸಬೇಕಾದ ಒಟ್ಟು ಶುಲ್ಕ 10,80,152 ರೂ.ಗಳು. ಸರ್ಕಾರಿ ಕೋಟಾದಡಿ ಕೆಇಎ(KEA)
ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ 2023-24ನೇ ಸಾಲಿನ ಶುಲ್ಕ 1,28,746 ರೂ.ಗಳು.
2022-23ನೇ ಸಾಲಿನಲ್ಲಿ ಬಿಡಿಎಸ್ (BDS)ಶುಲ್ಕ 6,66,023 ರೂ.ಗಳು.ಆದರೆ 2023-24ನೇ ಸಾಲಿನ ಶುಲ್ಕ 7,32,625 ರೂ.ಗಳು. ಸರ್ಕಾರಿ ಕೋಟಾದಡಿ ಕೆಇಎ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ
2023-24ನೇ ಸಾಲಿನ ಶುಲ್ಕ 83,358 ರೂ.ಗಳು.
ಪ್ರಸ್ತಾವನೆ ಏನಿತ್ತು?;
ಸರ್ಕಾರವು ರಾಜ್ಯದ ಖಾಸಗಿ ಕಾಲೇಜುಗಳ ಸಂಘಗಳಾದ ಕರ್ನಾಟಕ ಅಲ್ಪಸಂಖ್ಯಾತರ ವೃತ್ತಿಪರ ಕಾಲೇಜುಗಳ ಸಂಘ (AMPCK),ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನ (KPCF), ಹಾಗೂ ಕರ್ನಾಟಕ
ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಕಾಲೇಜುಗಳ ಸಂಘ (KRLMPCA)ಸಂಸ್ಥೆಗಳೊಂದಿಗೆ 2023-24ನೇ ಸಾಲಿನ ಸ್ನಾತಕ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸುಗಳ ಸೀಟು ಹಂಚಿಕೆ &
ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಪರಸ್ಪರ ಒಪ್ಪಂದದ ಒಡಂಬಡಿಕೆಯನ್ನು ಮಾಡಿಕೊಳ್ಳಬೇಕಾಗಿದೆ.
ಇದನ್ನೂ ಓದಿ : ವೇಗವಾಗಿ ಹರಡುತ್ತಿದೆ ಕೊರೊನಾ ರೂಪಾಂತರಿ EG.5.1 ಭಾರತಕ್ಕಿದೆಯೇ ಆತಂಕ? ತಜ್ಞರು ಹೇಳಿದ ಸತ್ಯವೇನು?ಏನಿದರ ಲಕ್ಷಣ?
ಖಾಸಗಿ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಸಂಘಗಳೊಂದಿಗೆ 2023-24ನೇ ಸಾಲಿನ ಸ್ನಾತಕ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಪರಸ್ಪರ
ಒಡಂಬಡಿಕೆ ಮಾಡಿಕೊಳ್ಳುವ ಕುರಿತು ಖಾಸಗಿ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಸಂಘಗಳು ಶುಲ್ಕ ಹೆಚ್ಚಳ ಹಾಗೂ ಇನ್ನಿತರೆ ಕೆಲವು ಬೇಡಿಕೆಗಳನ್ನು ವೈದ್ಯಕೀಯ ಶಿಕ್ಷಣ ಸಚಿವರ
ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಸಲ್ಲಿಸಿದ್ದರು.
ರಶ್ಮಿತಾ ಅನೀಶ್