Bengaluru : ಶಾಲೆಗಳಲ್ಲಿ ಕನ್ನಡ(Kannada) ಭಾಷಾ ಕಲಿಕೆ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯದ ಸಿಬಿಎಸ್ಇ (CBSE ICSE Kannada compulsory) ಮತ್ತು ಐಸಿಎಸ್ಇ
(ICSE) ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿ ಪೋಷಕರು ಹೈಕೋರ್ಟ್(High Court) ಮೆಟ್ಟಿಲೇರಿದ್ದಾರೆ.ಇದೀಗ ಈ ವಿಷಯಕ್ಕೆ
ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ಕಾಕ್ಸ್ಟೌನ್ ನಿವಾಸಿ ಸಿ.ಸೋಮಶೇಖರ್ (C Somashekhar) ಸೇರಿದಂತೆ ಸಿಬಿಎಸ್ಇ ಮತ್ತು ಐಸಿಎಸ್ಇ ಮಾನ್ಯತೆ ಪಡೆದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪೋಷಕರು ಮತ್ತು
ಶಿಕ್ಷಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ (P.B Varale) ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿ ವಿಚಾರಣೆಯನ್ನು ಮುಂದೂಡಿದರು.

ಕೋರ್ಟ್ ಮೊರೆ ಏಕೆ?
ಕರ್ನಾಟಕ ಭಾಷಾ ಕಲಿಕೆಯ ಕಾಯಿದೆ 2015 ರ ಸೆಕ್ಷನ್ 3 ರ ಪ್ರಕಾರ ಮತ್ತು ಕರ್ನಾಟಕ ಭಾಷಾ ಕಲಿಕೆಯ ನಿಯಮಗಳು 2017 ರ ನಿಯಮ 3 ಮತ್ತು ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ (ನಿರಾಕ್ಷೇಪಣ ಪತ್ರ
ನೀಡಿಕೆ ಮತ್ತು ನಿಯಂತ್ರಣ) ನಿಯಮಗಳ 6(2) ಅನ್ವಯ ರಾಜ್ಯದಲ್ಲಿನ ಸಿಬಿಎಸ್ಇ ಮತ್ತು ಐಸಿಎಸ್ಇ ಮಾನ್ಯತೆ ಪಡೆದಿರುವ ಶಾಲೆಗಳು ಕನ್ನಡವನ್ನು ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಕಲಿಸಬೇಕು. ಕನ್ನಡ
ಕಲಿಸದಿದ್ದರೆ ಶಿಕ್ಷಣ ಸಂಸ್ಥೆಗಳಿಗೆ ಸಲ್ಲಿಸಿರುವ ನಿರಾಕ್ಷೇಪಣಾ ಪತ್ರಗಳನ್ನು(Objection Letter) ಹಿಂಪಡೆಯಲಾಗುವುದು ಎಂದು ರಾಜ್ಯ ಸರ್ಕಾರ (Government)ಮೇ 13, 2022 ರಂದು ಅಧಿಸೂಚನೆ ಹೊರಡಿಸಿತ್ತು.
ಇದನ್ನೂ ಓದಿ : 8ನೇ ತರಗತಿಯಿಂದ ಕನ್ನಡ ಪಾಠ ಬೇಡ : ಪ್ರಾಂಶುಪಾಲರ ಬಳಿ ಕೆಲ ಪೋಷಕರ ಆಗ್ರಹ!
ಅರ್ಜಿದಾರರು ಈ ಅಧಿಸೂಚನೆಯನ್ನು ಪ್ರಶ್ನಿಸಿ, ಸಿಬಿಎಸ್ಇ ಮತ್ತು ಐಸಿಎಸ್ಇ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರದ ಈ ನಡೆಯಿಂದ ತುಂಬಾ ಅನಾನುಕೂಲ ಹಾಗೂ ತೊಂದರೆಯಾಗುತ್ತದೆ.
ಕರ್ನಾಟಕದಲ್ಲಿ(Karnataka) ಇಲ್ಲಿಯವರೆಗೆ ತಮ್ಮ ಇಚ್ಛೆಯಂತೆ ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಯನ್ನು ಕಲಿಯುವ ವಿದ್ಯಾರ್ಥಿಗಳ ಹಕ್ಕಿಗೆ ಈ ನಿಯಮದಿಂದ ಧಕ್ಕೆಯಾಗುತ್ತದೆ. ಮಕ್ಕಳ ಶೈಕ್ಷಣಿಕ ಬದುಕಿನ ಮೇಲೆ
ನಿಜವಾಗಿಯೂ ಇದು ಪರಿಣಾಮ ಬೀರಲಿದೆ. ಅವರ ಉದ್ಯೋಗ(Job) ಅವಕಾಶಗಳಿಗೆ ಭವಿಷ್ಯದಲ್ಲಿ ಅಡ್ಡಿ ಉಂಟು ಮಾಡುತ್ತದೆ. ಕನ್ನಡ ಭಾಷೆಯನ್ನು ಹೊರತುಪಡಿಸಿ ಬೇರೆ ವಿಷಯಗಳನ್ನು ಬೋಧಿಸುವ ಶಿಕ್ಷಕರ ಜೀವನಕ್ಕೂ
ಈ ನಿಯಮವು ಸಮಸ್ಯೆಯಾಗಲಿದೆ ಎಂದು ಅರ್ಜಿಯಲ್ಲಿ (CBSE ICSE Kannada compulsory) ಆಕ್ಷೇಪಿಸಲಾಗಿದೆ.

ಸಿಬಿಎಸ್ಇ ಮತ್ತು ಐಸಿಎಸ್ಇ ಮಾನ್ಯತೆ ಪಡೆದ ಶಾಲೆಗಳಿಗೆ ಒಂದು ವೇಳೆ ಕನ್ನಡ ಕಲಿಸದೆ ಹೋದರೆ ನಿರಾಕ್ಷೇಪಣಾ ಪತ್ರ ಹಿಂಡೆಯಲಾಗುವುದು ಎಂದು ಎಚ್ಚರಿಕೆ ನೀಡುವ ಮೂಲಕ ಬೆದರಿಕೆ ಹಾಕಲಾಗುತ್ತಿದೆ.
ಕನ್ನಡ ಭಾಷೆ ಬೋಧನೆ ಕಡ್ಡಾಯ ಎಂದು ಹೊರಡಿಸಿರುವ ನಿಯಮಗಳನ್ನು ಈ ಕೂಡಲೇ ಅಸಾಂವಿಧಾನಿಕವೆಂದು ಘೋಷಿಸಬೇಕು. ಸಿಬಿಎಸ್ಇ ಮತ್ತು ಐಸಿಎಸ್ಇ ಮಾನ್ಯತೆ ಪಡೆದ ಶಾಲೆಗಳಿಗೆ ಆ ನಿಯಮಗಳು
ಅನ್ವಯಿಸುವುದಿಲ್ಲ ಎಂದು ಘೋಷಿಸಬೇಕು. ಸಿಬಿಎಸ್ಸಿ ಮತ್ತು ಐಸಿಎಸ್ಇ ಮಾನ್ಯತೆ ಪಡೆದ ಶಾಲೆಗಳಗೆ ಈ ನಿಯಮ ಜಾರಿಗೊಳಿಸುವಂತೆ ಒತ್ತಾಯ ಮಾಡದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು
ಅರ್ಜಿದಾರರು ಕೋರಿದ್ದಾರೆ.
ರಶ್ಮಿತಾ ಅನೀಶ್