ನಿಮಗಿದು ಗೊತ್ತಾ? ಪ್ರತೀ ಮನೆಯೆದುರು ಸ್ಮಶಾನ ಹೊಂದಿರುವ ವಿಚಿತ್ರ ಗ್ರಾಮ!

cemetery in front

ನಮ್ಮಲ್ಲಿ ಸಾಮಾನ್ಯವಾಗಿ ಪ್ರತಿ ಊರಿನಲ್ಲಿ ಒಂದೊಂದು ಸ್ಮಶಾನ (the cemetery) ಇರುತ್ತದೆ. ಕೆಲವೆಡೆ ತಾಲೂಕಿಗೊಂದು, ಸಮುದಾಯಕ್ಕೊಂದು, ಧರ್ಮಕ್ಕೊಂದು ಸ್ಮಶಾನಗಳು ಇರುತ್ತವೆ.

ಆದರೆ ಈ ಪ್ರದೇಶದಲ್ಲಿ ಪ್ರತಿ ಮನೆ ಮನೆಯೆದುರು ಸ್ಮಶಾನ ಇದೆ! ಆಶ್ಚರ್ಯವಾದರೂ ಇದು ಸತ್ಯ. ಹೌದು, ಆಂಧ್ರ ಪ್ರದೇಶ(Andhra Pradesh) ಪ್ರಸಿದ್ಧ ಸ್ಥಳ ತಿರುಪತಿಯ (Tirupati) ಸಮೀಪದ ಹಳ್ಳಿಯೊಂದರಲ್ಲಿ ಪ್ರತಿ ಮನೆಯೆದುರು ಸ್ಮಶಾನ ಇದೆ.

ಈ ಹಳ್ಳಿಯ ಜನರು ತಮ್ಮ ಅಗಲಿದ ಕುಟುಂಬದ ಸದಸ್ಯರ (Family member)ಶವವನ್ನು ತಮ್ಮ ಮನೆಯ ಆವರಣದಲ್ಲಿಯೇ ಹೂಳುವುದೇ ಇದಕ್ಕೆ ಕಾರಣ. ಹೀಗಾಗಿ ಪ್ರತಿ ಮನೆಯ ಮುಂದೆ ಆ ಮನೆಯ ಅಳಿದ ಸದಸ್ಯರ ಸಮಾಧಿ ಕಾಣಸಿಗುತ್ತದೆ.

https://vijayatimes.com/gaalipata-2-success-meet/

ಮೃತರ ಅಂತಿಮ ಸಂಸ್ಕಾರಕ್ಕೆ (Last rites) ಸ್ಥಳ ಮಂಜೂರು ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಕಾರಣ, ಗ್ರಾಮಸ್ಥರು ಸ್ವಂತ ಮನೆಯ ಅಂಗಳವನ್ನೇ ಸ್ಮಶಾನವನ್ನಾಗಿ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.


ಅಷ್ಟಕ್ಕೂ, ಈ ಹಳ್ಳಿಯ ಹೆಸರು ತಿಮ್ಮನಾಯ್ಡು ಪಾಳ್ಯಂ. (Thimmanaidu Palyam) ಕರಕಂಬಾಡಿ ಸಮೀಪದ ಈ ಗ್ರಾಮವು ಆಂಧ್ರಪ್ರದೇಶದ ಪ್ರಸಿದ್ಧ ಯಾತ್ರಾ ಕೇಂದ್ರ ತಿರುಪತಿಗೆ ಬಹಳ ಸಮೀಪವಿದೆ.

1984ರಲ್ಲಿ ಅಂದಿನ ರಾಜ್ಯ ಸರಕಾರ ತಿಮ್ಮನಾಯ್ಡು ಪಾಳ್ಯಂ ವ್ಯಾಪ್ತಿಯಲ್ಲಿ ಎಸ್‌ಸಿ ಕಾಲೋನಿ(SC Colony) ಮತ್ತು ಬಂಗಾರಮ್ಮ ಕಾಲೋನಿ ಸ್ಥಾಪಿಸಿತ್ತು. ಈ ಕಾಲೋನಿಯಲ್ಲಿ ಸುಮಾರು 61 ಕುಟುಂಬಗಳಿಗೆ ಸರ್ಕಾರ ಪಕ್ಕಾ ಮನೆಗಳನ್ನು ನಿರ್ಮಿಸಿದೆ.

ಜನಸಂಖ್ಯೆ ಹೆಚ್ಚಾದಂತೆ ಬಂಗಾರಮ್ಮ ಕಾಲೋನಿ ಸ್ಥಾಪನೆಯಾಯಿತು. ಆದರೆ ಈ ಸ್ಥಳದಲ್ಲಿ ಸ್ಮಶಾನ ಇಲ್ಲದ ಕಾರಣ, ಗ್ರಾಮಸ್ಥರು ಖಾಸಗಿ ಜಮೀನನ್ನು ಗುತ್ತಿಗೆ ಪಡೆದು ಅಲ್ಲಿ ಮೃತರ ಅಂತಿಮ ಸಂಸ್ಕಾರ ನಡೆಸುತ್ತಿದ್ದರು.


ಆದರೆ ಸುಮಾರು, ಎರಡು ದಶಕಗಳ ಹಿಂದೆ ಖಾಸಗಿ ಜಮೀನು ಮಾಲೀಕರು (land Owner) ತಮ್ಮ ಜಮೀನನ್ನು ವಾಪಸ್ ಪಡೆದು, ವಸತಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ನಿವೇಶನಗಳನ್ನು ಮಾರಾಟ ಮಾಡಿದ್ದಾರೆ.

ಹಾಗಾಗಿ, ಟಿಎನ್ ಎಸ್ ಸಿ ಕಾಲೋನಿ ನಿವಾಸಿಗಳಿಗೆ ಸ್ಮಶಾನವಿಲ್ಲದಂತಾಯಿತು. ತಮ್ಮ ಗ್ರಾಮಕ್ಕೆ ಸ್ಮಶಾನ ಭೂಮಿ ಮಂಜೂರು ಮಾಡುವಂತೆ, ಗ್ರಾಮಸ್ಥರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಮನವಿ ಸಲ್ಲಿಸಿದ್ದಾರೆ,

ಆದರೆ ಅವರ ಪ್ರಯತ್ನಗಳೆಲ್ಲಾ ವ್ಯರ್ಥವಾದವು. ಹಾಗಾಗಿ ತಿರುಪತಿಯ ಸ್ಮಶಾನದಲ್ಲಿ ಅಂತಿಮ ವಿಧಿಗಳನ್ನು ಮಾಡಲು ಪ್ರಾರಂಭಿಸಿದರು, ಆದರೆ ಮೃತದೇಹವನ್ನು ತಿರುಪತಿಗೆ ತೆಗೆದುಕೊಂಡು ಹೋಗುವುದು ಕಷ್ಟದ ಕೆಲಸವಾಗಿತ್ತು.

https://vijayatimes.com/gaalipata-2-success-meet/


ತಿರುಪತಿಗೆ ಶವ ತೆಗೆದುಕೊಂಡು ಹೋಗುವುದಕ್ಕೆ ಬಹಳ ಹಣ ಖರ್ಚಾಗುತ್ತಿತ್ತು, ಹೀಗಾಗಿ ಗ್ರಾಮಸ್ಥರು ಮೃತ ದೇಹಗಳನ್ನು ತಮ್ಮ ಮನೆಯ ಆವರಣದಲ್ಲಿಯೇ ಹೂಳಲು ಪ್ರಾರಂಭಿಸುತ್ತಾರೆ.

ಶವವನ್ನು ತಮ್ಮ ಮನೆಯ ಆವರಣದಲ್ಲಿ ಹೂಳುವ ವೇಳೆ ನೆರೆಹೊರೆಯವರೊಂದಿಗೆ ಜಗಳವಾಡಿ ದೈಹಿಕ ಹಲ್ಲೆಗೆ ಮುಂದಾದ ಉದಾಹರಣೆಗಳೂ ಇವೆ. ಗ್ರಾಮಸ್ಥರ(Villagers) ಪ್ರಕಾರ,

ತಮ್ಮ ಮನೆಯಂಗಳದಲ್ಲಿ ಇದುವರೆಗೂ ಸುಮಾರು 20 ಸತ್ತ ವ್ಯಕ್ತಿಗಳಿಗೆ ಅಂತಿಮ ವಿಧಿಗಳನ್ನು ಮಾಡಿದ್ದಾರೆ. ಹಾಗಾಗಿ, ಈ ಹಳ್ಳಿಯಲ್ಲಿ ಪ್ರತಿ ಮನೆಯೆದುರು ಸ್ಮಶಾನವಿದೆ. ಪ್ರತಿ ಮನೆಯ ಮುಂದೆ ಆ ಮನೆಯ ತೀರಿಕೊಂಡ ಸದಸ್ಯರ ಸಮಾಧಿ ಕಾಣಸಿಗುತ್ತದೆ.

ಗ್ರಾಮಸ್ಥರಿಗೂ ಕೂಡ ಮನೆಯಂಗಳದಲ್ಲಿ ಸಮಾಧಿ ಮಾಡುವುದು ಇಷ್ಟವಿಲ್ಲದ ಕಾರಣ, ಆದಷ್ಟು ಬೇಗ ಸ್ಮಶಾನಕ್ಕಾಗಿ ಸ್ಥಳ ಮಂಜೂರು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.

ಆದರೆ, ಅಲ್ಲಿಯವರೆಗೂ ಯಾರಾದರೂ ಸತ್ತರೆ ಮನೆಯಂಗಳದಲ್ಲೇ ಅವರ ಸಮಾಧಿ ಮಾಡುವುದು ಅನಿವಾರ್ಯವಾಗಿದೆ.

ಪವಿತ್ರ

Exit mobile version