ಹಿಮಾಚಲ ಮತ್ತು ಗುಜರಾತ್‌ ಚುನಾವಣೆ ವೇಳೆ 7000 ನೀತಿ ಸಂಹಿಂತೆ ಉಲ್ಲಂಘನೆ ಪ್ರಕರಣಗಳು ನಡೆದಿವೆ : ಚುನಾವಣಾ ಆಯೋಗ

New Delhi : ಇತ್ತೀಚೆಗೆ ನಡೆದ ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ನೀತಿ ಸಂಹಿಂತೆ ಉಲ್ಲಂಘನೆಯಡಿ 7000ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ ಎಂದು ಕೇಂದ್ರ ಚುನಾವಣಾ ಆಯೋಗ (Central Election Commission) ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಚುನಾವಣಾ ಆಯೋಗವು, ಗುಜರಾತ್‌ನಿಂದ (Central Election Commission) 6,130 ಮತ್ತು ಹಿಮಾಚಲ ಪ್ರದೇಶದಿಂದ 1,040 ದೂರುಗಳನ್ನು ಸ್ವೀಕರಿಸಲಾಗಿದೆ.

ಹಿಮಾಚಲ ಪ್ರದೇಶದಿಂದ ಕನಿಷ್ಠ 1,000 ದೂರುಗಳು ವರದಿಯಾಗಿವೆ. ಅವುಗಳಲ್ಲಿ 862 ಸರಿಯಾಗಿವೆ ಮತ್ತು ಕ್ರಮ ತೆಗೆದುಕೊಳ್ಳಲಾಗಿದೆ.

580 ಕ್ಕೂ ಹೆಚ್ಚು ಪ್ರಕರಣಗಳು ಅನುಮತಿಯಿಲ್ಲದೆ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಹಾಕಿದ್ದಕ್ಕಾಗಿ ಮತ್ತು 185 ದೂರುಗಳು ಅಕ್ರಮವಾಗಿ ಹಣ ಹಂಚಿಕೆ ಮಾಡಿದ್ದಕ್ಕಾಗಿ ವರದಿಯಾಗಿವೆ ಎಂದು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅದೇ ರೀತಿ ಗುಜರಾತ್‌ನಲ್ಲಿ ಕನಿಷ್ಠ 6,000 ಪ್ರಕರಣಗಳು ವರದಿಯಾಗಿವೆ.

ಇದನ್ನೂ ನೋಡಿ : https://fb.watch/hkdrFJokDj/ COVER STORY | ಬದುಕಲು ಬಿಡಿ !ಅಂತ ಬೇಡಿ ಬೇಡಿ ಕೇಳುತ್ತಿದ್ದಾರೆ ಕರುನಾಡಿನ ಆದಿವಾಸಿಗಳು.

ಅವುಗಳಲ್ಲಿ 5,100 ಪ್ರಕರಣಗಳು ಸರಿಯಾಗಿವೆ ಎಂದು ಕಂಡುಬಂದಿದೆ. ಒಟ್ಟು 3,600 ದೂರುಗಳು ಅನುಮತಿಯಿಲ್ಲದೆ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ಹಾಕಿರುವುದಕ್ಕೆ ಸಂಬಂಧಿಸಿದಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಇನ್ನು ದೂರುಗಳನ್ನು ಕೇಂದ್ರ ಚುನಾವಣಾ ಆಯೋಗದ ಅಪ್ಲಿಕೇಶನ್ cVIGIL ನಲ್ಲಿ ದಾಖಲಿಸಲಾಗಿದೆ.

ಹಿಮಾಚಲ ಪ್ರದೇಶದ ಕಂಗ್ರಾ ಪ್ರದೇಶದಿಂದ (238), ಬಿಲಾಸ್‌ಪುರ್ (213) ಮತ್ತು ಹಮೀರ್‌ಪುರ (149) ದೂರುಗಳನ್ನು ಸ್ವೀಕರಿಸಲಾಗಿದೆ. 644 ದೂರುಗಳನ್ನು 100 ನಿಮಿಷಗಳಲ್ಲಿ 75% ನಿಖರತೆಯೊಂದಿಗೆ ಪರಿಹರಿಸಲಾಗಿದೆ.

ಗುಜರಾತ್‌ನಲ್ಲಿ ಸೂರತ್‌ (2,344), ಅಹಮದಾಬಾದ್‌ (1518) ಮತ್ತು ರಾಜ್‌ಕೋಟ್‌ (333) ಅತಿ ಹೆಚ್ಚು ದೂರುಗಳು ವರದಿಯಾಗಿವೆ.

ಇದನ್ನೂ ಓದಿ : https://vijayatimes.com/himachalpradesh-cm-sukhwinder-singh/

ಒಟ್ಟು ದೂರುಗಳ ಪೈಕಿ, 4,886 ದೂರುಗಳನ್ನು 100 ನಿಮಿಷಗಳಲ್ಲಿ ಪರಿಹರಿಸಲಾಗಿದೆ. ಇದೇ ವೇಳೆ ಚುನಾವಣಾ ಆಯೋಗವು ಎರಡು ರಾಜ್ಯಗಳಲ್ಲಿ ಕ್ರಮವಾಗಿ ₹ 801 ಕೋಟಿ ಮತ್ತು ₹ 57 ಕೋಟಿ ಅಕ್ರಮ ಹಣವನ್ನು ವಶಪಡಿಸಿಕೊಂಡಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
Exit mobile version