ನಮ್ಮ ಮೆಟ್ರೋ ಕಾಮಗಾರಿ ಹಿನ್ನೆಲೆ, ಇಂದಿನಿಂದ 4 ತಿಂಗಳವರೆಗೆ ಸೆಂಟ್ರಲ್ ಜಂಕ್ಷನ್ ಫ್ಲೈಓವರ್ ಕ್ಲೋಸ್

Bengaluru: ನಗರದಲ್ಲಿ ಇಂದಿನಿಂದ 4 ತಿಂಗಳವರೆಗೆ ನಮ್ಮ ಮೆಟ್ರೋ ಕಾಮಗಾರಿ ಹಿನ್ನೆಲೆ, ಸೆಂಟ್ರಲ್ ಜಂಕ್ಷನ್ ಫ್ಲೈಓವರ್ (Central Junction Flyover) ಭಾಗಶಃ ಬಂದ್ ಆಗಲಿದ್ದು, ಎರಡೂ ಕ್ಯಾರೇಜ್ ಮಾರ್ಗಗಳಲ್ಲಿ 250 ಮೀ. ಭಾಗಶಃ ಬ್ಯಾರಿಕೇಡ್ (Barricade) ಹಾಕಿ ಕ್ಲೋಸ್ ಮಾಡಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

ಸೆಂಟ್ರಲ್ ಸಿಲ್ಕ್ ಬೋರ್ಡ್ (Silkboard) ಜಂಕ್ಷನ್ ಪ್ಲೈಓವರ್ (ಮಡಿವಾಳ ಬದಿ) ಇಂದಿನಿಂದ ನಾಲ್ಕು ತಿಂಗಳವರೆಗೆ ಭಾಗಶಃ ಬಂದ್ ಆಗಲಿದ್ದು, ಗೊತ್ತಿಲ್ಲದೇ ದಿನ ಅಹ್ ಮಾರ್ಗವಾಗಿ ಸಂಚಾರ ಮಾಡುವವರು ಸಿಲ್ಕ್ ಬೋರ್ಡ್ ಜಂಕ್ಷನ್ ಫ್ಲೈ ಓವರ್ ಹತ್ತಿದ್ರೆ ಟ್ರಾಫಿಕ್ ನಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಗ್ಯಾರಂಟಿ.

ಸಿಲ್ಕ್‌ ಬೋರ್ಡ್‌ ಫ್ಲೈಓವರ್‌ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವರೆಗಿನ ಮೆಟ್ರೋ (Metro) ಕಾಮಗಾರಿಗಳು ಆರಂಭವಾಗಿದ್ದು, ಈ ಕಾಮಗಾರಿಯನ್ನು ಆದಷ್ಟು ಬೇಗನೇ ಮುಗಿಸಬೇಕಿರುವ ಒತ್ತಡ ಬಿಎಂಆರ್‌ಸಿಎಲ್‌ ಮೇಲಿದೆ. ಈ ಹಿನ್ನೆಲೆಯಲ್ಲಿ ಸಿಲ್ಕ್‌ ಬೋರ್ಡ್‌ ಫ್ಲೈಓವರ್‌ ಅನ್ನು ಕೆಲ ತಿಂಗಳ ಕಾಲ ಮುಚ್ಚಲೇಬೇಕಿರುವ ಅನಿವಾರ್ಯತೆ ಎದುರಾಗಿದ್ದು ಇಂದಿನಿಂದ ನಾಲ್ಕು ತಿಂಗಳವರೆಗೆ ಬಂದ್ ಮಾಡಿ ಕಾಮಗಾರಿ ಮುಗಿಸಲು ಬಿಎಂಆರ್​ಸಿಎಲ್ ಯೋಜಿಸಿದೆ.

ಸೇಂಟ್ರಲ್‌ ಸಿಲ್ಕ್‌ ಬೋರ್ಡ್‌ ಜಂಕ್ಷನ್ ಮೇಲ್ಸೇತುವೆ ಅಪ್‌ ಮತ್ತು ಡೌನ್‌ ರಾಂಪ್‌ ಕ್ಯಾರೇಜ್‌ ವೇ ( ಮಡಿವಾಳ ಬದಿ ) ಲೂಪ್‌ಗಳು ಮತ್ತು ರಾಂಪ್‌ ಫ್ಲೈಓವರ್‌ ಸ್ಟ್ರೇಜಿಂಗ್‌ ಕಾಮಗಾರಿ ಕೈಗೊಳ್ಳಲು ತಾತ್ಕಾಲಿಕವಾಗಿ ದಿನಾಂಕ 21-10- 2023 ರಿಂದ ( ನಾಲ್ಕು ತಿಂಗಳವರೆಗೂ ಎರಡು ಕ್ಯಾರೇಜ್‌ ಮಾರ್ಗಗಳಲ್ಲಿ 2.50 ಮೀಟರ್‌ ) ಭಾಗಶಃ ಬ್ಯಾರಿಕೇಡ್‌ ಹಾಕಲಾಗುವುದು. ಸಾರ್ವಜನಿಕರು ಸಹಕರಿಸಿ ಇದರಿಂದಾಗುವ ಅನಾನುಕೂಲತೆಗೆ ವಿಷಾಧಿಸುತ್ತೇವೆ’ ಎಂದು ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್‌ (BMRCL) ತಿಳಿಸಿದೆ.

ಭವ್ಯಶ್ರೀ ಆರ್. ಜೆ

Exit mobile version