ಚಲ್ಲಘಟ್ಟ – ವೈಟ್‌ಫೀಲ್ಡ್‌ ಪರ್ಪಲ್ ಲೈನ್ ಮೆಟ್ರೋ ಸಂಚಾರ ಆರಂಭ: 3 ನಿಮಿಷಕ್ಕೊಂದು ರೈಲು ಓಡಾಟ

Bengaluru: ಜನರ ಬಹು ನಿರೀಕ್ಷಿತ ವಾಣಿಜ್ಯ ಸಂಚಾರವನ್ನು ನಮ್ಮ ಮೆಟ್ರೋ ಆರಂಭಿಸಿದ್ದು ಯಾವುದೇ (Challaghatta – Whitefield Metro Service) ಉದ್ಘಾಟನೆ ಕಾರ್ಯಕ್ರಮ ಇಲ್ಲದೆ

ವಾಣಿಜ್ಯ ಸಂಚಾರವನ್ನು ನಮ್ಮ ಮೆಟ್ರೋ ಆರಂಭಿಸಿದೆ. ನೇರಳೆ ಮಾರ್ಗದ ಪೂರ್ಣ ಮೆಟ್ರೋ ಸಂಚಾರವು ಸೋಮವಾರ ಬೆಳಿಗ್ಗೆ ಆರಂಭವಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಮಾರ್ಗದ ಮೂಲಕ ಚಲಘಟ್ಟ-ವೈಟ್‌ಫೀಲ್ಡ್‌ (Challaghatta – Whitefield) (ಕಾಡುಗೋಡಿ) ನಿಲ್ದಾಣಗಳ ನಡುವಿನ 43.49 ಕಿ.ಮೀ. ಮಾರ್ಗದ ಸಂಪೂರ್ಣ ಪ್ರಯೋಜನ ಸಾರ್ವಜನಿಕರಿಗೆ

ಲಭ್ಯವಾಗಲಿದ್ದು ಬೆಳಿಗ್ಗೆ 5ಕ್ಕೆ ಚಲ್ಲಘಟ್ಟ ಹಾಗೂ ವೈಟ್‌ಫೀಲ್ಡ್‌ ನೇರ ಸಂಚಾರ ಮಾಡಿ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಮೆಟ್ರೋ ತಲುಪಲು ಬರೋಬ್ಬರಿ 1 ಗಂಟೆ 40 ನಿಮಿಷ ತೆಗೆದುಕೊಂಡಿತು.

ಕೆಂಗೇರಿ-ಚಲ್ಲಘಟ್ಟ (2.10 ಕಿ.ಮೀ.) ಹಾಗೂ ನೇರಳೆ ಮಾರ್ಗದಲ್ಲಿ ಬಾಕಿ ಉಳಿದಿದ್ದ ಬೈಯಪ್ಪನಹಳ್ಳಿ – ಕೆ.ಆರ್‌.ಪುರ (Baiyappanahalli – K.R. Puram) (2.10 ಕಿ.ಮೀ.) ಮಾರ್ಗದಲ್ಲಿ ಸೋಮವಾರ

(ಅ.9)ಕ್ಕೆ ಬೆಳಿಗ್ಗೆ 5 ಗಂಟೆಯಿಂದಲೇ ಮೆಟ್ರೋ ವಾಣಿಜ್ಯ (Challaghatta – Whitefield Metro Service) ಸಂಚಾರ ಆರಂಭವಾಗಿದೆ.

ಚಲ್ಲಘಟ್ಟದಿಂದ – ವೈಟ್‌ಫೀಲ್ಡ್‌ಗೆ 60 ರೂಪಾಯಿ. ದರ ನಿಗದಿಪಡಿಸಲಾಗಿದ್ದು ಈ ಮಾರ್ಗ ಒಟ್ಟು 37 ನಿಲ್ದಾಣಗಳನ್ನು ಒಳಗೊಂಡಿದೆ ಮತ್ತು ಪ್ರಸ್ತುತ ನಮ್ಮ ಮೆಟ್ರೋ 69.66 ಕಿ.ಮೀ. ಮಾರ್ಗದಲ್ಲಿ ಸಂಚರಿಸುತ್ತಿದ್ದು,

ಅ.9ರಿಂದ ಮೆಟ್ರೋ (Metro) ಜಾಲ 73.81 ಕಿ.ಮೀ.ಗೆ ವಿಸ್ತಾರವಾಗಲಿದೆ. ಒಟ್ಟು 66 ನಿಲ್ದಾಣ ಒಳಗೊಳ್ಳಲಿದೆ ಎನ್ನಲಾಗಿದೆ.

ಐದು ನಿಮಿಷಕ್ಕೊಂದು ರೈಲು?
ಮೆಜೆಸ್ಟಿಕ್‌ (Majestic) ನಿಲ್ದಾಣದಿಂದ ಎಂ.ಜಿ.ರಸ್ತೆವರೆಗೆ ಹೆಚ್ಚು ಜನಸಂದಣಿ ಇರುವ ಬೆಳಗಿನ ಅವಧಿಯಲ್ಲಿ ಪ್ರತಿ 3 ನಿಮಿಷಕ್ಕೊಂದು ರೈಲು ಸಂಚರಿಸಲಿದೆ.ವೈಟ್‌ಫೀಲ್ಡ್‌ನಿಂದ (Whitefield) ಪಟ್ಟಂದೂರು

ಅಗ್ರಹಾರ ನಡುವೆ ಹಾಗೂ ಮೈಸೂರು ರಸ್ತೆಯಿಂದ ಚಲ್ಲಘಟ್ಟದವರೆಗೆ ಪ್ರತಿ 10 ನಿಮಿಷಕ್ಕೊಂದು ರೈಲು ಸಂಚರಿಸಿದರೆ, ಪಟ್ಟಂದೂರು ಅಗ್ರಹಾರದಿಂದ ಮೈಸೂರು ರಸ್ತೆಯವರೆಗೆ ಪ್ರತಿ 5 ನಿಮಿಷಕ್ಕೊಂದು

ಮೆಟ್ರೋ ರೈಲು ಸಂಚರಿಸಲಿವೆ.

70 ಸಾವಿರ ಜನರಿಗೆ ಅನುಕೂಲ
ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ವೈಟ್‌ಫೀಲ್ಡ್‌- ಕೆ.ಆರ್‌.ಪುರ ನಡುವಿನ 13.71 ಕಿ.ಮೀ. ಮಾರ್ಗ ಉದ್ಘಾಟನೆ ಮಾಡಿದ್ದರೂ ಬೈಯಪ್ಪನಹಳ್ಳಿ- ಕೆ.ಆರ್‌.ಪುರ ನಡುವಿನ 2.10 ಕಿ.ಮೀ. ಮಾರ್ಗ

ನಿರ್ಮಾಣ ಮಾಡುವುದು ಬಾಕಿ ಇತ್ತು. ಪ್ರಸ್ತುತ ಈ ಮಾರ್ಗದ ಕಾಮಗಾರಿ ಮುಕ್ತಾಯವಾಗಿ ಸಂಚಾರ ಶುರುವಾಗಿದ್ದು 70 ಸಾವಿರಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಿದೆ.

ಪ್ರತಿದಿನ 7.50 ಲಕ್ಷ ಜನ ನಿರೀಕ್ಷೆ
ಪೂರ್ವದಿಂದ ಪಶ್ಚಿಮಕ್ಕೆ ಸಂಪರ್ಕಿಸುವ (ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೆ) ಸಂಪೂರ್ಣ ನೇರಳೆ ಮಾರ್ಗದ ಕಾರ್ಯಾರಂಭ ನಂತರ ಪ್ರತಿ ದಿನ ಈಗ ಈ ಮಾರ್ಗದಲ್ಲಿ ಪ್ರತಿ ದಿನ 6.50 ಲಕ್ಷ ಜನರು

ಪ್ರಯಾಣ ಮಾಡುತ್ತಿದ್ದು. ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ಗೆ ತಲುಪಲು ಅಂದಾಜು ಒಂದು ಗಂಟೆ 40 ನಿಮಿಷ ಸಮಯ ಬೇಕಾಗಲಿದೆ 7.50 ಲಕ್ಷ ಜನ ಪ್ರಯಾಣಿಸುವ ನಿರೀಕ್ಷೆ ಇದ್ದು

ಪ್ರತಿ ದಿನದ ಕೊನೆಯ ರೈಲು
ಎಲ್ಲಾ ಟರ್ಮಿನಲ್‌ (Terminal) ನಿಲ್ದಾಣದಿಂದ ರೈಲು ಸೇವೆಗಳು ಬೆಳಗ್ಗೆ 5 ಗಂಟೆಯಿಂದ ಆರಂಭವಾಗಿ ಕೊನೆಯ ರೈಲು ವೈಟ್‌ಫೀಲ್ಡ್‌ನಿಂದ ರಾತ್ರಿ 10.45ಕ್ಕೆ ಹಾಗೂ ಉಳಿದ ಟರ್ಮಿನಲ್‌ನಿಂದ

ರಾತ್ರಿ 11.05ಕ್ಕೆ ಹೊರಡಲಿವೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಮೆಟ್ರೋ ಆರಂಭ ವಿಳಂಬಕ್ಕೆ ಅಸಮಾಧಾನ
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕೂಡ ಬಿಎಂಆರ್‌ಸಿಎಲ್‌ ವಿರುದ್ಧ ಜನರ ಆಕ್ರೋಶ ಬಾಕಿ ಉಳಿದಿರುವ ಮಾರ್ಗದ ಸುರಕ್ಷತಾ ಪರೀಕ್ಷೆ ಮುಗಿದು ವಾರಗಳು ಕಳೆದರೂ ಸಂಚಾರ

ಆರಂಭಿಸದೇ ಇರುವುದರಿಂದ ಬಿಎಂಆರ್‌ಸಿಎಲ್‌ ವಿರುದ್ಧ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನು ಓದಿ: ವಿಶ್ವ ದಾಖಲೆ: ದಾಖಲೆಗಳ ಮೇಲೆ ದಾಖಲೆ ಸೃಷ್ಠಿಸಿದ ವಿರಾಟ್ ಕೊಹ್ಲಿ

Exit mobile version