Nandyala (Andhrapradesh): ಭ್ರಷ್ಟಾಚಾರದ ಆರೋಪದಡಿ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು (Chandrababu Naidu Arrested) ಅವರನ್ನು ಇಂದು ಮುಂಜಾನೆ
ಆಂಧ್ರ ಸಿಐಡಿ ಅಧಿಕಾರಿಗಳು ಬಂದಿಸಿದ್ದಾರೆ. ಚಂದ್ರಬಾಬು ನಾಯ್ಡು (Chandrababu Naidu) ಅವರ ಪುತ್ರ ನರಾ ಲೋಕೇಶ್ ಅವರನ್ನೂ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು (ಸೆ.9)
ಮುಂಜಾನೆ ವೇಳೆಗೆ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ನಿವಾಸಕ್ಕೆ ಆಗಮಿಸಿದ ಸಿಐಡಿ (CID) ಅಧಿಕಾರಿಗಳು ಅವರನ್ನು ಬಂಧಿಸಿ, ವಶಕ್ಕೆ ಪಡೆದುಕೊಂಡಿದ್ದಾರೆ.

ತದ ನಂತರ ಅವರನ್ನು ನಂಧ್ಯಾಲ (Nandhyala) ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಅಲ್ಲಿ ಅವರಿಗೆ ವೈದ್ಯಕೀಯ ತಪಾಸಣೆ ನಡೆಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸುವುದಾಗಿ ಮೂಲಗಳು ತಿಳಿಸಿವೆ.
ದಿಢೀರ್ ಬೆಳವಣಿಗೆಯೊಂದರಲ್ಲಿ ಇವರನ್ನು ಪೊಲೀಸರು ಬಂಧಿಸಲಾಗಿದ್ದು, ಆಂಧ್ರಪ್ರದೇಶದ ನಂಧ್ಯಾಲದಲ್ಲಿರುವ ಆರ್.ಕೆ. ಫಂಕ್ಷನ್ ಹಾಲ್ (R K Function Hall) ಗೆ ಬೆಳಗಿನ ಜಾವ ಸುಮಾರು 3 ಗಂಟೆಗೆ
ಆಗಮಿಸಿದ ದೊಡ್ಡ ಪೊಲೀಸ್ ಪಡೆಯು ಫಂಕ್ಷನ್ ಹಾಲ್ ನಲ್ಲಿದ್ದ ಚಂದ್ರಬಾಬು ನಾಯ್ಡು ಅವರನ್ನು ವಶಕ್ಕೆ ಪಡೆದುಕೊಂಡಿದೆ. ಇವರನ್ನು ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ಪ್ರಕರಣವೊಂದಕ್ಕೆ ಬಂಧಿಸಲಾಗಿದೆ ಎಂದು
ಮೂಲಗಳು ತಿಳಿಸಿವೆ.
ಈಸ್ಟ್ ಗೋದಾವರಿ (Godavari) ಜಿಲ್ಲೆಯಲ್ಲಿ ಚಂದ್ರಬಾಬು ನಾಯ್ಡು ಅವರ ಪುತ್ರ ನರಾ ಲೋಕೇಶ್ (Nara Lokesh) ಅವರನ್ನೂ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನರಾ ಲೋಕೇಶ್ ಟಿಡಿಪಿ (TDP)
ಕಾರ್ಯಕರ್ತರೊಂದಿಗೆ ತಮ್ಮ ತಂದೆ ಚಂದ್ರಬಾಬು ನಾಯ್ಡು ಅವರ ಬಂಧನವನ್ನು ವಿರೋಧಿಸಿ ದಿಢೀರ್ ಪ್ರತಿಭಟನೆಗೆ ಮುಂದಾಗಿದ್ದರಿಂದ ಇವರನ್ನು ಸಹ ವಶಕ್ಕೆ ಪಡೆಯಲಾಗಿದೆ. ಆರ್.ಕೆ. ಫಂಕ್ಷನ್
ಹಾಲ್ ನಲ್ಲಿ ನಾಯ್ಡು ಅವರ ಬಂಧನವಾದ ಕೂಡಲೇ ಮುಂಜಾನೆ ಸಮಯದಲ್ಲೇ ದೊಡ್ಡ ಹೈಡ್ರಾಮಾ (Highdrama) ನಡೆದಿದ್ದು, ನಾಯ್ಡು ಹಾಗೂ ಅವರ ಬೆಂಬಲಿಗರು ಆ ಫಂಕ್ಷನ್ ಹಾಲ್ ನಲ್ಲಿರುವುದನ್ನು
ತಿಳಿದಿದ್ದ ಪೊಲೀಸರು ಅಲ್ಲಿಯೇ ವಶಕ್ಕೆ ಪಡೆಯಲು (Chandrababu Naidu Arrested) ನೇರವಾಗಿ ಧಾವಿಸಿದ್ದರು.

ಇನ್ನು ಇವರ ಬೆಂಬಲಿಗರು ಜೊತೆಗಿರುವಾಗ ನಾಯ್ಡು ಅವರನ್ನು ಬಂಧಿಸುವುದು ಅಷ್ಟು ಸುಲಭವಲ್ಲ ಎಂಬುದನ್ನು ಅರಿತಿದ್ದ ನಂಧ್ಯಾಲ ವಲಯದ ಡಿಐಜಿ (DIG) ರಘುರಾಮಿ ರೆಡ್ಡಿ (Raghurami Reddy)
ಹಾಗೂ ಸಿಐಡಿ ನಿರ್ದೇಶಕರ ನೇತೃತ್ವದಲ್ಲಿ ಪೊಲೀಸರ ದೊಡ್ಡ ಪಡೆಯನ್ನೇ ರಚಿಸಲಾಗಿದ್ದು, ಫಂಕ್ಷನ್ ಹಾಲ್ ಗೆ ಆಗಮಿಸಿದ್ದರು. ಟಿಡಿಪಿ ಕಾರ್ಯಕರ್ತರ ದೊಡ್ಡ ಪಡೆಯು ಪೊಲೀಸರನ್ನು ಅವರ ಹತ್ತಿರಕ್ಕೂ
ಹೋಗುವುದಕ್ಕು ಬಿಡಲಿಲ್ಲ.
ಸರ್ಕಾರದ ಆದೇಶದಂತೆ ನಾವು ನಾಯ್ಡು ಅವರನ್ನು ವಶಕ್ಕೆ ಪಡೆಯಬೇಕಾಗಿದೆ ಎಂಬುದನ್ನು ಪೊಲೀಸರು ಅವರಿಗೆ ಮನವರಿಕೆ ಮಾಡಿದ್ದು, ಈ ಸಮಯದಲ್ಲಿ ನಾಯ್ಡು ಅವರಿಗೆ ಸರ್ಕಾರದಿಂದಲೇ
ಒದಗಿಸಲಾಗಿರುವ ವಿಶೇಷ ರಕ್ಷಣಾ ಪಡೆಯ (ಎಸ್ಪಿಜಿ) ಸಿಬ್ಬಂದಿಯೇ ಅಡ್ಡಬಂದಿದ್ದರು. ಬೆಳಗಿನ ಜಾವ 5.30ರ ಒಳಗೆ ನಿಯಮಗಳ ಪ್ರಕಾರ ವಿಐಪಿಗಳನ್ನು (VIP) ಬಂಧಿಸುವ ಹಾಗಿಲ್ಲ ಎಂದು
ನಾಯ್ಡು ಬಂಧನಕ್ಕೆ ಅವಕಾಶವನ್ನೇ ಕೊಡದಿದ್ದ ಕಾರಣ 5.30ರ ನಂತರ ಅವರನ್ನು ವಶಕ್ಕೆ ಪಡೆದರು.
ಇದನ್ನು ಓದಿ: KSOU Exam Scam: ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಲಂಚಾವತಾರ, ಹಣ ಕೊಟ್ಟರೆ ಪರೀಕ್ಷೆಯಲ್ಲಿ ಕಾಪಿಗೆ ಅವಕಾಶ
- ಭವ್ಯಶ್ರೀ ಆರ್.ಜೆ