ಪಠ್ಯಪುಸ್ತಕಗಳಲ್ಲಿ ಮೊಘಲರ ಅಧ್ಯಯನಕ್ಕೆ ಕತ್ತರಿ ಹಾಕಿದ ಯೋಗಿ ಸರ್ಕಾರ

Lucknow : ಯೋಗಿ ಆದಿತ್ಯನಾಥ್‌ (Yogi Adityanath) ನೇತೃತ್ವದ ಉತ್ತರಪ್ರದೇಶ ರಾಜ್ಯ ಸರ್ಕಾರ (Uttar Pradesh State Govt) ಪಠ್ಯಪುಸ್ತಕಗಳಲ್ಲಿ ಮೊಘಲರ ಅಧ್ಯಯನಕ್ಕೆ ಕತ್ತರಿ ಹಾಕಿದೆ. ಯೋಗಿ ಸರ್ಕಾರ 12ನೇ ತರಗತಿಯ (Change in Class 12 Syllabus) ಪಠ್ಯಕ್ರಮದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದ್ದು,

ಇತಿಹಾಸ ಪುಸ್ತಕದಿಂದ ಮೊಘಲ್ ಅಧ್ಯಾಯವನ್ನು ತೆಗೆದುಹಾಕಲಾಗಿದೆ. ಇದಲ್ಲದೇ 11ನೇ ತರಗತಿಯಲ್ಲಿ ಇಸ್ಲಾಂ ಧರ್ಮದ ಉದಯ, ಸಂಸ್ಕೃತಿಗಳ ಘರ್ಷಣೆ ಮತ್ತು ಕೈಗಾರಿಕಾ ಕ್ರಾಂತಿಯ ಪಾಠಗಳನ್ನು ತೆಗೆದುಹಾಕಲಾಗಿದೆ.

ಇದರೊಂದಿಗೆ ಅಮೆರಿಕದ ಮೇಲುಗೈ ಮತ್ತು ಶೀತಲ ಸಮರದ ಪಾಠವನ್ನೂ ನಾಗರಿಕ ಪುಸ್ತಕದಿಂದ ತೆಗೆದುಹಾಕಲಾಗಿದೆ.

ಇತಿಹಾಸದ ಪಠ್ಯಕ್ರಮದಲ್ಲಾದ ಬದಲಾವಣೆಗಳು :

2023-24ರ ಶೈಕ್ಷಣಿಕ ಅವಧಿಯಲ್ಲಿ ಇಂಟರ್ಮೀಡಿಯೇಟ್ನಲ್ಲಿ ಕಲಿಸಬೇಕಾದ ಇತಿಹಾಸ ಪುಸ್ತಕದಲ್ಲಿ ಮೊಘಲ್‌ ಆಡಳಿತಗಾರರು ಮತ್ತು ಮೊಘಲ್

ನ್ಯಾಯಾಲಯ ಎಂಬ ಅಧ್ಯಾಯವನ್ನು ‘ಭಾರತೀಯ ಇತಿಹಾಸದ ಕೆಲವು ವಿಷಯಗಳು-II’ ನಿಂದ ತೆಗೆದುಹಾಕಲಾಗಿದೆ. ಯುಪಿ ಬೋರ್ಡ್ನ (UP Board) 12ನೇ ತರಗತಿ ಪಠ್ಯಕ್ರಮದಲ್ಲಿ,

ಇದನ್ನೂ ಓದಿ : https://vijayatimes.com/release-of-congress-files/

ಸ್ವತಂತ್ರ ಭಾರತದ ರಾಜಕೀಯ ಎಂಬ ಪುಸ್ತಕದಿಂದ ಸಾಮೂಹಿಕ ಚಳುವಳಿಗಳ ಕಾಲ ಮತ್ತು ಏಕಪಕ್ಷೀಯ ಪ್ರಾಬಲ್ಯದ ಯುಗ ಎಂಬ ಅಧ್ಯಾಯವನ್ನು ತೆಗೆದುಹಾಕಲಾಗಿದೆ.

ಇದಲ್ಲದೆ, 10ನೇ ತರಗತಿಯ ರಾಜಕೀಯ ಪುಸ್ತಕದಿಂದ ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆ, ಹೋರಾಟ ಮತ್ತು ಚಳುವಳಿ, ಪ್ರಜಾಪ್ರಭುತ್ವದ ಸವಾಲುಗಳು ಎಂಬ ಅಧ್ಯಾಯಗಳನ್ನು ತೆಗೆಯಲಾಗಿದೆ.

ಮತ್ತೊಂದೆಡೆ, ವಿದ್ಯಾರ್ಥಿಗಳ ಪಠ್ಯಕ್ರಮದಿಂದ ಇತಿಹಾಸದ ಅಧ್ಯಾಯಗಳನ್ನು ತೆಗೆದುಹಾಕುವ ಈ ಹಂತವನ್ನು (Change in Class 12 Syllabus) ಚುನಾವಣೆಗೆ ಜೋಡಿಸಬಾರದ.

ನಮ್ಮ ಮಕ್ಕಳಿಗೆ ಇತಿಹಾಸದ ಬಗ್ಗೆ ಕಲಿಸುವ ವಿಧಾನವನ್ನು ಬದಲಾಯಿಸುವ ಅಗತ್ಯವಿದೆ. ಹೊಸ ಪಠ್ಯಕ್ರಮವು ಮಕ್ಕಳ ದೃಷ್ಟಿಕೋನವನ್ನು ಬದಲಾಯಿಸುತ್ತದೆ.

ಇಂದು ತುಷ್ಟೀಕರಣ, ಜಾತೀಯತೆ, ಕುಟುಂಬ ವಾದದ ರಾಜಕಾರಣ ಕೊನೆಗೊಂಡಿದ್ದು, ಇದರಿಂದ ರಾಷ್ಟ್ರಕ್ಕೆ ಲಾಭವಾಗುತ್ತಿದೆ ಎಂದು ಉತ್ತರಪ್ರದೇಶದ ಉಪಮುಖ್ಯಮಂತ್ರಿ ಹೇಳಿದ್ದಾರೆ.

ಪಠ್ಯಪುಸ್ತಕದಲ್ಲಿ ಮಾಡಲಾಗಿರುವ ಎಲ್ಲ ಬದಲಾವಣೆಗಳನ್ನು ಮುಂಬರುವ ಅಧಿವೇಶನದಲ್ಲಿ ಚರ್ಚೆಗೆ ಒಳಪಡಿಸಿ, ನಂತರ ಅಂತಿಮ ಅನುಮೋದನೆ ನೀಡುವ ಸಾಧ್ಯತೆಯಿದೆ.

ಇದನ್ನೂ ಓದಿ : https://vijayatimes.com/uses-of-sugarcane-juice/

ಈಗಾಗಲೇ ಅಧಿವೇಶನದಲ್ಲಿ ಪಠ್ಯಪುಸ್ತಕದ ಬದಲಾವಣೆಯ ಕುರಿತು ಚರ್ಚೆ ನಡೆಸಲು ಬಿಜೆಪಿ (BJP) ಸಿದ್ದತೆ ನಡೆಸಿದೆ. ಖುದ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಅವರೇ,

ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿ, ಪಠ್ಯಪುಸ್ತಕ ಬದಲಾವಣೆಗೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಮೊಘಲರ ಆಡಳಿತವು ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯವಾಗಿದ್ದು,

ಅದನ್ನು ವೈಭವೀಕರಿಸಿ ನಮ್ಮ ಮಕ್ಕಳಿಗೆ ಕಲಿಸುವ ಅಗತ್ಯವಿಲ್ಲ.

ಮೊಘಲರ ಆಡಳಿತವನ್ನು ಕೇವಲ ಇತಿಹಾಸದ ದೃಷ್ಟಿಕೋನದಿಂದ ಮಾತ್ರ ಅಧ್ಯಯನ ಮಾಡಬೇಕಿದೆ ಎಂದು ಯೋಗಿ ಆದಿತ್ಯನಾಥ್‌ಅವರು ಈ ಹಿಂದೆ ಅಭಿಪ್ರಾಯಪಟ್ಟಿದ್ದರು.

Exit mobile version