ಪ್ರತಿದಿನ ಕಬ್ಬಿನ ಹಾಲನ್ನು ಸೇವಿಸುವುದರಿಂದ ಅನೇಕ ಸಮಸ್ಯೆಗಳಿಂದ ದೂರ ಇರಬಹುದಾಗಿದೆ. ಬಿಸಿಲಿನ ತಾಪವನ್ನು ನಿವಾರಿಸಿ, ಆರೋಗ್ಯಕ್ಕೆ ಬೇಕಾದ ಚೈತನ್ಯ ನೀಡುವಲ್ಲಿ ಕಬ್ಬಿನ ಹಾಲಿನ ಪ್ರಾಮುಖ್ಯತೆ (uses of sugarcane juice) ಅತ್ಯಧಿಕವಾಗಿದೆ. ಕಬ್ಬಿನ ಹಾಲನ್ನು ಕುಡಿಯುವದರಿಂದಾಗುವ ಪ್ರಯೋಜನೆಗಳ ವಿವರ ಇಲ್ಲಿದೆ ನೋಡಿ.
• ಕಬ್ಬಿನ ಹಾಲಿನಲ್ಲಿ ಮೆಗ್ನೀಸಿಯಮ್(Maganesium), ಎಲೆಕ್ಟ್ರೋಲೈಟ್‍ಗಳು(Electrolytes) ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿರುತ್ತದೆ.
ಇವು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ದೇಹದಲ್ಲಿನ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

• ಬಾಯಿಯ ದುರ್ವಾಸನೆ ಪೋಷಕಾಂಶಗಳ ಕೊರತೆಯಿಂದಲೂ ಉಂಟಾಗುತ್ತದೆ. ಪ್ರತಿದಿನ ಕಬ್ಬಿನ ರಸ(Sugarcane Juice) ಕುಡಿಯುವುದರಿಂದ ಈ ಸಮಸ್ಯೆಯನ್ನು ತಡೆಯಬಹುದು.
• ಒಂದು ವೇಳೆ ಅಜೀರ್ಣತೆ ತೊಂದರೆ ಇದ್ದರೆ ನಿತ್ಯವೂ ಕಬ್ಬಿನ ಹಾಲನ್ನು ಸೇವಿಸುವುದು ಒಳ್ಳೆದು. ಇದರ ವಿರೇಚಕ ಗುಣ ಜೀರ್ಣಾಂಗಗಳಲ್ಲಿ ಉಂಟಾಗಿದ್ದ ಉರಿಯೂತವನ್ನು (uses of sugarcane juice) ನಿವಾರಿಸಿ ಮಲಬದ್ಧತೆಯಾಗದಂತೆ ನೋಡಿಕೊಳ್ಳುತ್ತದೆ.
• ಸಾಂಕ್ರಾಮಿಕ ಜ್ವರಗಳಲ್ಲಿ ಕಬ್ಬನ್ನು ದೇಹದ ಬಲ ವೃದ್ಧಿಸಲು ಹಾಗು ಪೋಷಕಾಂಶಗಳ ಕೊರತೆ ನೀಗಿಸಲು ಬಳಸಲಾಗುತ್ತದೆ.
• ಕಬ್ಬಿನ ರಸವನ್ನು ನಿಂಬೆ(Lemon) ಮತ್ತು ಶುಂಠಿ (Ginger) ರಸದೊಂದಿಗೆ ಬೆರೆಸಿ ಕುಡಿದಾಗ , ಮೂತ್ರವನ್ನು ಸುಲಭವಾಗಿ ವಿಸರ್ಜಿಸುವಂತೆ ಮಾಡುತ್ತದೆ.
• ಬೇಸಿಗೆಯಲ್ಲಿ ನೀರಿನಾಂಶ ಕಡಿಮೆಯಾಗುವುದರಿಂದ ಮೂತ್ರ ಸೋಂಕಿನ ಸಮಸ್ಯೆ ಉಂಟಾಗುವುದು ಸಾಮಾನ್ಯವಾಗಿದೆ. ಆದರೆ ಕಬ್ಬಿನ ಜ್ಯೂಸ್ (Sugarcane Juice) ಕುಡಿಯುವುದರಿಂದ ಮೂತ್ರ ಸೋಂಕನ್ನು ತಡೆಗಟ್ಟಬಹುದು,

• ಬೇಸಿಗೆಯಲ್ಲಿ ಕಬ್ಬಿನ ರಸ ಕುಡಿಯುವುದರಿಂದ ಮೊಡವೆ ಸಮಸ್ಯೆ ತಡೆಗಟ್ಟಬಹುದು.
• ಕಬ್ಬಿನ ಹಾಲಿನಲ್ಲಿರುವ ಫ್ಲೇವೊನ್‍ಗಳು ಕ್ಯಾನ್ಸರ್ (Cancer) ಕೋಶಗಳ ಉತ್ಪಾದನೆ ಹಾಗೂ ಹರಡುವಿಕೆಯನ್ನು ನಿಲ್ಲಿಸುವಲ್ಲಿ ಪರಿಣಾಮಕಾರಿಯಾಗಿದೆ. ಹೀಗಾಗಿ ಕಬ್ಬಿನ ಹಾಲನ್ನು ಕ್ಯಾನ್ಸರ್‌ನಿರೋಧಕ ಎನ್ನಲಾಗುತ್ತದೆ.
• ಕಬ್ಬಿ ಹಾಲಿನಲ್ಲಿ ಕಂಡು ಬರುವ ಪೋಲಿಕೋಸನಾಲ್ (Policosanol) ರಕ್ತವನ್ನು ತೆಳುವಾಗಿಸುತ್ತದೆ.
• ಕಬ್ಬಿನ ರಸವು ದೇಹದಲ್ಲಿನ ಗ್ಲೂಕೋಸ್(Glucose) ಪ್ರಮಾಣವನ್ನು ಸಮತೋಲನಗೊಳಿಸುತ್ತದೆ. ಇದು ಮಧುಮೇಹ ರೋಗಿಗಳಿಗೂ ಸುರಕ್ಷಿತವಾಗಿದೆ.
• ಕಬ್ಬನ್ನು ಅಗಿಯುವುದು ಮತ್ತು ಅದರ ರಸವನ್ನು ಹೀರುವುದರಿಂದ ಹಲ್ಲು ಮತ್ತು ಒಸಡುಗಳು ಬಲವಾಗುತ್ತವೆ.
• ದೇಹದ ತೂಕ ಹೆಚ್ಚಿಸಲು ಶ್ರಮ ಪಡುತ್ತಿರುವವರಿಗೆ ಕಬ್ಬು ಅತಿ ಉತ್ತಮ ಆಹಾರ. ಇದು ಆರೋಗ್ಯಕರ ತೂಕವನ್ನು ಪಡೆಯಲು ಸಹಾಯ ಮಾಡುತ್ತದೆ.
• ಹೊಟ್ಟೆಯುಬ್ಬರಿಕೆ ಹಾಗೂ ಹೊಟ್ಟೆಯ ಸೆಡೆತಗಳಿಂದಲೂ ರಕ್ಷಣೆ ನೀಡಿ, ಪೊಟ್ಯಾಶಿಯಂ ಜಠರದಲ್ಲಿ ಪಿಎಚ್ (PH) ಮಟ್ಟವನ್ನು ಸರಿಯಾಗಿರಿಸಲು ನೆರವಾಗುತ್ತದೆ.
• ಕಬ್ಬಿನ ಹಾಲು ಹೊಟ್ಟೆ, ಮೂತ್ರಪಿಂಡಗಳು, ಹೃದಯ, ಕಣ್ಣುಗಳು, ಮೆದುಳು ಮತ್ತು ಲೈಂಗಿಕ ಅಂಗಗಳನ್ನು ಬಲಪಡಿಸುತ್ತದೆ.