ChatGPT : ಮಾನವ ನಿರ್ಮಿತ ಕೃತಕ ಬುದ್ಧಿಮತ್ತೆ; ಮಾನವನಿಗೇ ಶಾಪವಾಗಲಿದೆಯಾ?

2022 ರ ನವೆಂಬರ್ ಮಾಸದಲ್ಲಿ ಓಪನ್ ಎಐ ನ ಪ್ರಯೋಗಾಲಯದಿಂದ ‘ಟ್ರೈ ಇಟ್’ ಎಂಬ ಬಟನ್ ಅಡಿಯಲ್ಲಿ ಬಿಡುಗಡೆಯಾದ ಜನರೇಟಿವ್ ಅಪ್ಲಿಕೇಶನ್ (Generative application) ಇದಾಗಿದ್ದು, ಭವಿಷ್ಯದಲ್ಲಿ ತಂತ್ರಜ್ಞಾನ ವಲಯದಲ್ಲಿ ಇದೊಂದು(ChatGPT Application) ಪ್ರವಾಹವನ್ನೇ ಸೃಷ್ಟಿಸಲಿದೆ ಎಂದು ಆರಂಭದಲ್ಲಿ ಯಾರೂ ಊಹಿಸಿರಲಿಲ್ಲ.

ಇದು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಜನಪ್ರಿಯವಾಗತೊಡಗಿತು. ಗೂಗಲ್ (Google) ನಂತಹ ಬೃಹತ್ ಸಂಸ್ಥೆಯೇ ಬೆಚ್ಚಿಬೀಳುವಂತಹ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದೆ.

ಯಾಕೆಂದರೆ ಇದು ಸಮಸ್ಯೆಗಳಿಗೆ ನೀಡಿದ ಪರಿಹಾರ, ಕೇಳಿದ ಪ್ರಶ್ನೆಗಳಿಗೆ ನೀಡಿದ ಉತ್ತರದ ನಿಖರತೆ ತಂತ್ರಜ್ಞಾನ ವಲಯದಲ್ಲಿ ಬೆರಗನ್ನು ಉಂಟುಮಾಡಿದೆ.

ಏನಿದು Chat GPT ?

‘ಚಾಟ್ ಜಿಪಿಟಿ’ ಎಂಬುದು ಒಂದು ಜನರೇಟಿವ್ ಎಐ ಆಗಿದ್ದು ಕೇಳಿದ ಪ್ರಶ್ನೆಗಳಿಗೆ ಅಂತರ್ಜಾಲದಲ್ಲಿ ಹುಡುಕಾಡಿ ನಿಖರವಾದ ಉತ್ತರವನ್ನು ನೀಡುವ ಒಂದು ಅಪ್ಲಿಕೇಶನ್,

ಕೇಳಿದ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸುವ ಸಾಮರ್ಥ್ಯವೇ ಇದರ ಹೆಗ್ಗಳಿಕೆ, ಇದನ್ನು ಹುಟ್ಟು ಹಾಕಿದ್ದು ಓಪನ್ ಏಐ (Open AI) ಎಂಬ ಸಂಸ್ಥೆ.

ಇದನ್ನೂ ಓದಿ : https://vijayatimes.com/meta-job-shock/

‘ಚಾಟ್ ಜಿ ಪಿ ಟಿ’ ಬಂದ ನಂತರ ಜನರು ಇದರ ಸೆಳೆತಕ್ಕೆ ಒಳಗಾಗಲು ಕಾರಣವೇನೆಂದರೆ; ಗೂಗಲ್ ನಲ್ಲಿ ನಮಗೆ ಬೇಕಾದ ಒಂದು ಮಾಹಿತಿಯನ್ನು ಕೇಳಿದರೆ ವಿವಿಧ ವೆಬ್ಸೈಟ್ (Website) ಗಳಲ್ಲಿ ಮಾಡಿದ ಪಟ್ಟಿಗಳು

ನಮ್ಮ ಕಣ್ಣ ಮುಂದೆ ಬರುತ್ತವೆ ಅವೆಲ್ಲವನ್ನೂ ಓದಿ ನಮಗೆ ಹೊಂದುವುದನ್ನ ಹುಡುಕುವ ಕೆಲಸ ನಮ್ಮದೇ ಆಗಿರುತ್ತದೆ ಆದರೆ ಇದೇ (ChatGPT Application)ಪ್ರಶ್ನೆಯನ್ನು ಚಾಟ್ ಜಿಪಿಟಿ ಗೆ ಕೇಳಿದರೆ

ಅದು ಎಲ್ಲ ವೆಬ್ಸೈಟ್ ಗಳನ್ನು ಹುಡುಕಿ ತಂದು ನಮಗೆ ನಿಖರವಾದ ಒಂದೇ ಉತ್ತರವನ್ನು ನೀಡುತ್ತದೆ.

ಉದ್ಯಮದ ಮೇಲೆ ಪರಿಣಾಮ:

ಮೊದಲಿಗೆ ಇದು ಭಾದಿಸುವುದು ಸರ್ಚ್ ಇಂಜಿನ್ ಗಳನ್ನು, ಈಗಾಗಲೇ ಆ ಕೆಲಸವನ್ನು ಚಾಟ್ ಜಿಪಿಟಿ ಮುಂದುವರಿಸಿದೆ ಇದನ್ನು ಹೊರತುಪಡಿಸಿ ಸಾಫ್ಟ್ ವೇರ್ ಕೋಡಿಂಗ್,

ವೀಡಿಯೋ ಎಡಿಟಿಂಗ್, ಮಾರ್ಕೆಟಿಂಗ್, ಕಾಪಿರೈಟಿಂಗ್, ಗ್ರಾಹಕಸೇವೆ, ಸಿನಿಮಾ ನಿರ್ಮಾಣ, ಕಾನೂನು ವಿಷಯಗಳು,

ವೈಜ್ಞಾನಿಕ ಸಂಶೋಧನೆ ಸೇರಿದಂತೆ ಬಹುತೇಕ ಎಲ್ಲಾ ವಲಯಗಳಲ್ಲೂ ಜನರೇಟಿವ್ ಏಐ ಬಳಕೆಯಾಗಲಿದೆ.

ಹೀಗಾಗಿ ಈ ಎಲ್ಲಾ ವಲಯಗಳಲ್ಲಿ ಕೆಲಸ ನಿರ್ವಹಿಸುವ ಕೆಲ ಉದ್ಯೋಗಿಗಳ ಕೆಲಸವನ್ನು ಕಿತ್ತುಕೊಳ್ಳುವ ಸಾಧ್ಯತೆಗಳೂ ಹೆಚ್ಚಾಗಿವೆ.

ಇದನ್ನೂ ಓದಿ : https://vijayatimes.com/kumaraswamy-tweet-for-bjp/

ಮಾನವನಿಗೆ ಇದು ಉಪಕಾರಿಯಾಗಲಿದಿಯಾ? ಅಪಾಯಕಾರಿಯಾಗಲಿದಿಯಾ?

ಜಗತ್ತಿನಲ್ಲಿ ಕೈಗಾರಿಕಾ ಕ್ರಾಂತಿಯ ಮೂಲಕ ಜನರ ದೈಹಿಕ ಶ್ರಮವನ್ನು ಕಡಿಮೆಗೊಳಿಸಲು ಯಂತ್ರಗಳ ಆವಿಷ್ಕಾರಕ್ಕೆ ಒತ್ತು ನೀಡಲಾಯಿತು.

ಅದೇ ರೀತಿ ಮನುಷ್ಯ ಮೆದುಳಿನ ಮೂಲಕ ಮಾಡುವ ಕೆಲಸಗಳನ್ನು ಕಡಿಮೆ ಮಾಡುವ ಕೆಲಸವನ್ನು ಚಾಟ್ ಜಿಪಿಟಿ ಮಾಡಲಿದೆ ಎಂಬುದನ್ನು ಯಾವುದೇ ಸಂಶಯವಿಲ್ಲದೆ ಒಪ್ಪಿಕೊಳ್ಳಬಹುದಾಗಿದೆ,

ಈ ತಂತ್ರಜ್ಞಾನದ ಆವಿಷ್ಕಾರ ಒಂದುಕಡೆ: ಮನುಷ್ಯನ ಕೆಲಸವನ್ನು ಕಿತ್ತುಕೊಂಡರೆ ಇನ್ನೊಂದು ಕಡೆ:

ಮನುಷ್ಯ ಮಾಡುವ ಕೆಲಸಗಳನ್ನು ಯಂತ್ರಗಳು ಮಾಡಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಲು ಸಮಯವನ್ನು ನೀಡುತ್ತವೆ ಮತ್ತು ಕೆಲಸದ ಒತ್ತಡಗಳನ್ನು ಕಡಿಮೆ ಮಾಡುತ್ತವೆ. ಹಾಗಾಗಿ ಜನರೇಟಿವ್ ಎಐ ನಿಂದ ಎಷ್ಟು ಅನುಕೂಲಗಳಿವೆಯೋ ಅಷ್ಟೇ ಅನಾನುಕೂಲಗಳಿವೆ.

Exit mobile version