ಗೌಡರು-ಲಿಂಗಾಯತರು-ಬ್ರಾಹ್ಮಣರು (GiLeBi/ಜಿಲೇಬಿ) ಇವರು ಕರ್ನಾಟಕದ 3 ಪ್ರಬಲ (Chetan Ahimsa – GiLeBi) ಸಮುದಾಯದವರು, ಸಮಾನತಾವಾದಿಗಳಾದ ನಮಗೆ ಇವರು ಶತ್ರುಗಳಲ್ಲ.

ಆದರೆ ಸಮಾನತೆಗಾಗಿ, ಈ GiLeBi ಯ ಜನ್ಮ-ಆಧಾರಿತ ಸವಲತ್ತುಗಳನ್ನು ಕಿತ್ತುಹಾಕಬೇಕು ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಗೌಡರು-ಲಿಂಗಾಯತರು-ಬ್ರಾಹ್ಮಣರು (GiLeBi/ಜಿಲೇಬಿ) ಇವರು ಕರ್ನಾಟಕದ 3 ಪ್ರಬಲ ಸಮುದಾಯದವರು,
ಸಮಾನತಾವಾದಿಗಳಾದ ನಮಗೆ ಇವರು ಶತ್ರುಗಳಲ್ಲ. ಆದರೆ, ಶಿಕ್ಷಣ/ಭೂಮಿ/ಆರ್ಥಿಕತೆ/ರಾಜಕೀಯ ಶಕ್ತಿ/ಇತ್ಯಾದಿಗಳ ವಿಷಯದಲ್ಲಿ ಈ ಗುಂಪುಗಳು ಹೊಂದಿರುವ ಅಸಮಾನ, ಜನ್ಮ-ಆಧಾರಿತ
ಸವಲತ್ತುಗಳೂ ನಮ್ಮ ಶತ್ರು. ಸಮಾನತೆಗಾಗಿ, ಈ GiLeBi ಯ ಜನ್ಮ-ಆಧಾರಿತ (Chetan Ahimsa – GiLeBi) ಸವಲತ್ತುಗಳನ್ನು ಕಿತ್ತುಹಾಕಬೇಕು ಎಂದಿದ್ದಾರೆ.

ಇನ್ನೊಂದು ಪೋಸ್ಟ್ನಲ್ಲಿ, ‘ಜಾತ್ಯಾತೀತತೆ ಎಂದರೆ ಧರ್ಮರಹಿತವಾಗಿರುವುದು ಅಲ್ಲ; ಅದರ ಅರ್ಥ ಎಲ್ಲ ಧರ್ಮಗಳಿಗೂ ಸಮಾನ ಗೌರವ ನೀಡುವುದು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ
ಜೈಶಂಕರ್ ಅವರು ಹೇಳುತ್ತಾರೆ. ಇದು ತಪ್ಪು ವ್ಯಾಖ್ಯಾನ ಮತ್ತು ಭಾರತದ ದೊಡ್ಡ ಸುಳ್ಳು ಜಾತ್ಯಾತೀತತೆಯನ್ನು ಧರ್ಮ ಮತ್ತು ಸರ್ಕಾರದ ಪ್ರತ್ಯೇಕತೆ ಎಂದು ನಿಘಂಟು ವ್ಯಾಖ್ಯಾನಿಸುತ್ತದೆ.
ಜೈಶಂಕರ್ ಅವರ ಈ ದೋಷಪೂರಿತ, ಸ್ವಯಂ-ಲಾಭದಾಯಕ, ಹುಸಿ-ಸೆಕ್ಯುಲರಿಸಂ ಅನ್ನು ಕಿತ್ತುಹಾಕುವವರೆಗೆ, ಭಾರತ ಎಂದಿಗೂ ನಿಜವಾದ ಜಾತ್ಯಾತೀತವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನೊಂದು ಪೋಸ್ಟ್ನಲ್ಲಿ, ಡಿಸೆಂಬರ್ 2023 ರಿಂದ, ಕರ್ನಾಟಕ ಸರ್ಕಾರವು ಕ್ಷೀರ ಭಾಗ್ಯ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಹಾಲಿನ ಜೊತೆಗೆ ರಾಗಿ ಗಂಜಿ ನೀಡಲು ಯೋಜಿಸಿದೆ. ಇದು ಒಳ್ಳೆಯ
ನಿರ್ಧಾರ. ರಾಗಿ ನಮ್ಮ ರಾಜ್ಯದ ಆರೋಗ್ಯಕರ, ವೆಚ್ಚ-ಪರಿಣಾಮಕಾರಿ, ಪರಿಸರ ಸ್ನೇಹಿ ಪ್ರಧಾನ ಆಹಾರವಾಗಿದೆ. ನಮ್ಮ ಮಕ್ಕಳನ್ನು ರಾಗಿಗೆ ಒಡ್ಡುವುದರಿಂದ ಉತ್ತಮ ಅaಲ್ಪಾವಧಿ ಮತ್ತು
ದೀರ್ಘಾವಧಿ ಪ್ರಯೋಜನಗಳಿವೆ ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿ: ಹಾಸನದ ಕುಂತಿ ಬೆಟ್ಟದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಬರ್ಬರ ಹತ್ಯೆ