Hassan : ಹಾಸನ ತಾಲ್ಲೂಕಿನ ಅಗಿಲೆ ಗ್ರಾಮದ ಸಮೀಪ ಇರುವ ಕುಂತಿ ಬೆಟ್ಟದ ತುದಿಗೆ (engineering student murder case) ಕರೆದೊಯ್ದು ಸುಚಿತ್ರಾ ಎಂಬ ಇಂಜಿನಿಯರ್

ವಿದ್ಯಾರ್ಥಿಯನ್ನು ಆಕೆಯ ಗೆಳೆಯ ತೇಜಸ್ ಎಂಬಾತನೆ ಬರ್ಬರವಾಗಿ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಪ್ರೀತಿ ನಿರಾಕರಿಸಿದ್ದಕ್ಕೆ ಗೆಳತಿಯನ್ನೇ ಕ್ರೂರವಾಗಿ ಕೊಂದ ಪಾಗಲ್ ಪ್ರೇಮಿ. ಮಾತಾನಾಡುವುದಕ್ಕಾಗಿ ಕರೆದೊಯ್ದು ಕುಂತಿ ಬೆಟ್ಟವನ್ನು ಹತ್ತಿಸಿ, ಹತ್ಯೆಗೈದಿದ್ದವ ಈಗ ಅರೆಸ್ಟ್ ಆಗಿದ್ದು,
ಗೆಳೆಯನಿಂದಲೇ ಬಲಿಯಾದ ಚೆಲುವೆ ಇಂಜಿನಿಯರಿಂಗ್ ಓದುತ್ತಿದ್ದಳು. ಆಕೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟ್ ಪಡೆದುಕೊಂಡು ಓದುತ್ತಿದ್ದಳು.
ಗುರುವಾರ (ನ.16) ಮನೆಯಿಂದ ಕಾಲೇಜಿಗೆ ಹೊರಟಿದ್ದಳು, ಮಗಳು ಮಾಮೂಲಿಯಾಗಿ ಸಂಜೆ ಮನೆಗೆ ಮರಳುತ್ತಾಳೆಂಬ ನಿರೀಕ್ಷೆಯಲ್ಲಿದ್ದವರಿಗೆ ಬಂದಿತ್ತು ಅದೊಂದು ಬರ ಸಿಡಿಲ ಕರೆ.
ಆ ಪಾಗಲ್ ಪ್ರೇಮಿ ತನ್ನನ್ನು ಪ್ರೀತಿಸೋದಿಲ್ಲ ಎಂದಾಕೆಯ ಕುತ್ತಿಗೆಯನ್ನೇ ಸೀಳಿಬಿಟ್ಟಿದ್ದ. ಗೆಳೆಯನೇ ಹೀಗೆ ಪಾತಕಿ ಆಗಬಹುದು ಎಂಬ ನಿರೀಕ್ಷೆಯನ್ನೂ ಮಾಡದ ಆ ಚೆಲುವೆ ರಕ್ತದ ಮಡುವಿನಲ್ಲಿ
ಉಸಿರು ಚೆಲ್ಲಿದ್ದು ಸಂಬಂಧಿಕರ (engineering student murder case) ಆಕ್ರಂದನ ಮುಗಿಲು ಮುಟ್ಟಿದೆ.
ಹಾಸನ ಜಿಲ್ಲೆಯೆ ಬೆಚ್ಚಿಬೀಳುವಂತಾ ಬರ್ಬರ ಹತ್ಯೆಯೊಂದು ಹಾಸನ ತಾಲ್ಲೂಕಿನ ಅಗಿಲೆ ಗ್ರಾಮದ ಸಮೀಪ ಇರೋ ಕುಂತಿ ಬೆಟ್ಟದಲ್ಲಿ ನಡೆದಿದ್ದು, ಬೆಟ್ಟದ ತುದಿಗೆ ಕರೆದೊಯ್ದು ಇಂಜಿನಿಯರಿಂಗ್
ವಿದ್ಯಾರ್ಥಿನಿ ಸುಚಿತ್ರಾಳನ್ನ ಆಕೆಯ ಗೆಳೆಯ ತೇಜಸ್ ಎಂಬಾತನೆ ಬರ್ಬರವಾಗಿ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಗುರುವಾರ ಬೆಳಿಗ್ಗೆ 11 ಗಂಟೆಗೆ ಬೈಕ್ ನಲ್ಲಿ ಕರೆದೊಯ್ದು ಬೆಟ್ಟದ ಮೇಲೆ ಕರೆದುಕೊಂಡು ಹೋಗಿದ್ದ ಪಾಪಿ ಅಲ್ಲಿ ತನ್ನ ಪ್ರೀತಿ ನಿವೇದನೆ ಮಾಡಿಕೊಂಡಿದ್ದನಂತೆ, ಆದ್ರೆ ಆಕೆ ಅದಕ್ಕೆ ಒಪ್ಪದಿದ್ದಾಗ ನನಗೆ
ಸಿಗದ ನೀನು ಯಾರಿಗೂ ಸಿಗೋದು ಬೇಡಾ ಎಂದು ಆಕೆಯ ಕುತ್ತಿಗೆ ಸೀಳಿದ್ದಾನೆ ಎನ್ನಲಾಗಿದೆ, ಕೊಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದವನನ್ನ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ವೈದ್ಯಕೀಯ
ಆಸ್ಪತ್ರೆಗ ಸ್ಥಳಾಂತರ ಮಾಡಿದ್ದು ಘಟನೆ ಬಗ್ಗೆ ಪೋಷಕರು ಕಣ್ಣೀರಿಡುತ್ತಿದ್ದಾರೆ.
ಇದನ್ನು ಓದಿ: ವಿಶ್ವದ ಅತೀ ವೇಗದ ಇಂಟರ್ನೆಟ್ ಪ್ರಾರಂಭಿಸಿದ ಚೀನಾ: ಒಂದು ಸೆಕೆಂಡಿನಲ್ಲಿ 150 ಸಿನಿಮಾ ರವಾನೆ
- ಭವ್ಯಶ್ರೀ ಆರ್.ಜೆ