21ನೇ ಶತಮಾನದ ಅಸ್ಪೃಶ್ಯತೆಯು ನಾವು ಅಂಬೇಡ್ಕರ್ ಅವರ ಕನಸಿನಿಂದ ದೂರವಾಗಿದ್ದೇವೆ ಎಂದು ಸಾಬೀತುಪಡಿಸುತ್ತದೆ : ನಟ ಚೇತನ್

Bengaluru : ಬಾಬಾಸಾಹೇಬ್ ಅವರು ಮಾಹಡ್ ನಲ್ಲಿ ನೀರಿನ ಹಕ್ಕುಗಳಿಗಾಗಿ(Chetan Speaks About Untouchability) ಹೋರಾಡಿದರು(1927),

ಈ ರೀತಿಯ 21ನೇ ಶತಮಾನದ ನಾವು ಅವರ ಕನಸಿನಿಂದ ದೂರವಾಗಿದ್ದೇವೆ ಎಂದು ಸಾಬೀತುಪಡಿಸುತ್ತದೆ ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ(Chetan Speaks About Untouchability) ಚೇತನ್ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ದಲಿತ ಮಹಿಳೆಯು(Dalit Woman) ಲಿಂಗಾಯತ ಜನರ ಪ್ರದೇಶದಲ್ಲಿದ್ದ ನೀರಿನ ಟ್ಯಾಂಕ್ ನಿಂದ ನೀರು ಕುಡಿದ ಕಾರಣಕ್ಕೆ ಸ್ಥಳೀಯರು ಆ ನೀರಿನ ಟ್ಯಾಂಕ್ ನ್ನು ಬರಿದಾಗಿಸಿ ಅದನ್ನು ಮರುಪೂರಣ ಮಾಡುವ ಮೊದಲು ಗೋಮೂತ್ರದಿಂದ ಶುದ್ಧೀಕರಿಸಿದ ಘಟನೆ ಶುಕ್ರವಾರ ಚಾಮರಾಜನಗರದಲ್ಲಿ ನಡೆದಿದೆ.

ಬಾಬಾಸಾಹೇಬ್ ಅವರು ಮಾಹಡ್ ನಲ್ಲಿ ನೀರಿನ ಹಕ್ಕುಗಳಿಗಾಗಿ ಹೋರಾಡಿದರು (1927), ಈ ರೀತಿಯ 21ನೇ ಶತಮಾನದ ಅಸ್ಪೃಶ್ಯತೆಯು ನಾವು ಅವರ ಕನಸಿನಿಂದ ದೂರವಾಗಿದ್ದೇವೆ ಎಂದು ಸಾಬೀತುಪಡಿಸುತ್ತದೆ ಎಂದು ಚೇತನ್ ಅಭಿಪ್ರಾಯಪಟ್ಟಿದ್ದಾರೆ. ಕುವೆಂಪು ಅವರ ‘ವಿಶ್ವಮಾನವ’ವನ್ನು ಕರ್ನಾಟಕದಲ್ಲಿ ನಾವು ಪಾಲಿಸಬೇಕು. 

https://fb.watch/gX2zCLlZO2/ ಧೂಳಿನಿಂದ ಕೂಡಿದ ವನಹಟ್ಟಿ ರಸ್ತೆ!

ನಮ್ಮ ಸರ್ಕಾರವೂ ಸೇರಿದಂತೆ ಎಲ್ಲಾ ಸರ್ಕಾರಗಳ ತಪ್ಪುಗಳನ್ನೂ ಕೂಡ ನಾವು ವಿರೋಧಿಸಬೇಕು. ಆದರೆ ಬೇರೆಲ್ಲಾ ದೇಶದ ಜನರು ಒಳ್ಳೆಯವರು, ತಮ್ಮದೇ ಆದ ರೀತಿಯಲ್ಲಿ ಹೋರಾಡುತ್ತಿದ್ದಾರೆ ಎಂಬ ನಂಬಿಕೆಯನ್ನು ನಾವು ಉಳಿಸಿಕೊಳ್ಳಬೇಕು. ನಮ್ಮ ಮಾನವೀಯತೆಯನ್ನು ರಾಜಕೀಯ ಗಡಿಗಳು ಅಥವಾ ಡೆಮೋಗಾಗರೀ ಮಿತಿಗೊಳಿಸಬಾರದು.

ಇದನ್ನೂ ಓದಿ : https://vijayatimes.com/dalit-woman-water-issue/

ನಾನು ಪಾವಗಡದಲ್ಲಿ ನಡೆದ ಬುದ್ಧ – ಬಸವ – ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿದೆ. 3 ವರ್ಷಗಳ ಹಿಂದೆ, ಪಾವಗಡದಲ್ಲಿ ಈ 21ನೇ ಶತಮಾನದಲ್ಲಿಯೂ ಕೂಡ ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದ ಬಹುಜನ ಕಾಲೋನಿಗೆ, ಸ್ಥಳೀಯ ದಲಿತ ಸಂಸದರನ್ನು ಪ್ರವೇಶಿಸಲು ಅವಕಾಶ ನೀಡುವಂತೆ ನಾನೊಂದು ಅಭಿಯಾನವನ್ನು ನಡೆಸಿದೆ.

ನಮ್ಮ ಯುವಕರು ನಮ್ಮ ನಾಯಕರ ಸಮಾನತೆಯನ್ನು ಮೈಗೂಡಿಸಿಕೊಳ್ಳುತ್ತಿರುವುದನ್ನು ನೋಡಿ ಸಂತೋಷವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

Exit mobile version