Bengaluru : ಮುಸಲ್ಮಾನರಾಗಿ ಹುಟ್ಟಿದ ಟಿಪ್ಪುವಿನ(Chetan Statement On Tipu) ಮೇಲೆ ಹಿಂದುತ್ವದ ದ್ವೇಷವನ್ನು ನಾವು ಖಂಡಿಸಲೇಬೇಕು ಮತ್ತು,
ಟಿಪ್ಪುವಿನ ಮೇಲೆ ಇಸ್ಲಾಮಿಸ್ಟ್ ಲಾಬಿಗಳ ಇಸ್ಲಾಮಿನ ಹೇರಿಕೆಯನ್ನು ಕೂಡ ನಾವು ವಿರೋಧಿಸಬೇಕು ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್(Chetan Statement On Tipu) ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಮುಸಲ್ಮಾನರಾಗಿ ಹುಟ್ಟಿದ ಟಿಪ್ಪುವಿನ ಮೇಲೆ ಹಿಂದುತ್ವದ ದ್ವೇಷವನ್ನು ನಾವು ಖಂಡಿಸಲೇಬೇಕು ಮತ್ತು ಟಿಪ್ಪುವಿನ ಮೇಲೆ ಇಸ್ಲಾಮಿಸ್ಟ್ ಲಾಬಿಗಳ ಇಸ್ಲಾಮಿನ ಹೇರಿಕೆಯನ್ನು ಕೂಡ ನಾವು ವಿರೋಧಿಸಬೇಕು.
ಜೆಡಿಎಸ್ ರಾಜಕಾರಣಿ ಸಿಎಂ ಇಬ್ರಾಹಿಂ(CM Ibrahim) ಹೇಳುತ್ತಾರೆ ಟಿಪ್ಪು ಸುಲ್ತಾನ್ ಪ್ರತಿಮ ಬೇಡ, ಪ್ರತಿಮೆ ಸ್ಥಾಪಿಸುವುದನ್ನು ಇಸ್ಲಾಂ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ ಇದು ಅವರ ಅವಿವೇಕ ಮತ್ತು ಮೂರ್ಖತನದ ಹೇಳಿಕೆಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ : https://vijayatimes.com/rahul-allegation-over-savarkar/
ಮುಸಲ್ಮಾನರಾಗಿ ಹುಟ್ಟಿದ ಟಿಪ್ಪುವಿನ ಮೇಲೆ ಹಿಂದುತ್ವದ ದ್ವೇಷವನ್ನು ನಾವು ಖಂಡಿಸಲೇಬೇಕು ಮತ್ತು ಟಿಪ್ಪುವಿನ ಮೇಲೆ ಇಸ್ಲಾಮಿಸ್ಟ್ ಲಾಬಿಗಳ ಇಸ್ಲಾಮಿನ ಹೇರಿಕೆಯನ್ನು ಕೂಡ ನಾವು ವಿರೋಧಿಸಬೇಕು. ಟಿಪ್ಪು ಸುಲ್ತಾನ್ ಆಧುನಿಕ ಕರ್ನಾಟಕದ ಐಕಾನ್. ನಾನು ಓದಿರುವ ಇತಿಹಾಸ ಮತ್ತು ವೈಜ್ಞಾನಿಕತೆ ತುಂಬಿರುವ ಪುಸ್ತಕಗಳು ನನ್ನ ಸಮಾನತೆಯೆಡೆಗಿನ ಪಯಣಕ್ಕೆ ದಾರಿ ದೀಪಗಳಾಗಿವೆ ಎಂದು ಹೇಳಿದ್ದಾರೆ.

ಚೇತನ್ ಅವರು ತಮ್ಮ ಇನ್ನೊಂದು ಬರಹದಲ್ಲಿ, ಅಫ್ತಾಬ್ನಿಂದ ಆತನ ಲಿವ್-ಇನ್ ಪಾರ್ಟ್ನರ್ ಆಗಿದ್ದಂತಹ ಶ್ರದ್ಧಾಳ ಕೊಲೆ ನಮ್ಮ ದೇಶದ ನೈತಿಕ ಅಡಿಪಾಯವನ್ನೇ ಅಲ್ಲಾಡಿಸಿದೆ.
ಈ ಬಗ್ಗೆ ನ್ಯಾಯ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟುವ ಕ್ರಮಗಳು ಅತ್ಯಗತ್ಯವಾಗಿದ್ದರೂ,
ಮಹಿಳೆಯರು ತಮ್ಮ ಸಂಗಾತಿಗಳೊಂದಿಗೆ ಸಮ್ಮತಿಯಿಂದ ವಾಸಿಸುವುದಕ್ಕಿರುವ ಸ್ವಾತಂತ್ರ್ಯದ ಕುರಿತು ನಾಚಿಕೆ ಪಡಬಾರದು ಅವರನ್ನು ಈ ಬಗ್ಗೆ ಟೀಕಿಸಬಾರದು ಎಂದು ದೆಹಲಿಯಲ್ಲಿ ನಡೆದ ಶ್ರದ್ದಾ ಹತ್ಯೆ ಕುರಿತು ಮಾತನಾಡಿದ್ದಾರೆ.
- ಮಹೇಶ್.ಪಿ.ಎಚ್