ಭಯೋತ್ಪಾದನೆಯನ್ನು ಉದ್ದನೆಯ ಗಡ್ಡ ಮತ್ತು ಸ್ಕಲ್-ಕಾಪ್ಗೆ ಸೀಮಿತಗೊಳಿಸಲಾಗುವುದಿಲ್ಲ : ನಟ ಚೇತನ್

chethan

Bengaluru : ಭಯೋತ್ಪಾದನೆಯನ್ನು(Chethan Ahimsa Reacts To PFI Ban) ಉದ್ದನೆಯ ಗಡ್ಡ ಮತ್ತು ಸ್ಕಲ್-ಕಾಪ್ ಗೆ ಸೀಮಿತಗೊಳಿಸಲಾಗುವುದಿಲ್ಲ.

ಅನೇಕ ಬಾರಿ, ಭಯೋತ್ಪಾದನೆಯು ಕೇಸರಿ ಶಾಲು, ತಿಲಕ, ಅಥವಾ ಸಿಐಎ ಸೂಟ್ ಅನ್ನು ಧರಿಸಿ ಬರುತ್ತದೆ ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್‌(Chethan Ahimsa Reacts To PFI Ban) ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್‌(Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಸಾಬೀತಾಗಿಲ್ಲದ ಆರೋಪಗಳ ಮೇಲೆ ಪಿಎಫ್‌ಐ(PFI) ಅನ್ನು ನಿಷೇಧಿಸಲಾಗಿದೆ.

ಗೌರಿ ಲಂಕೇಶ್ ಹತ್ಯೆಗೆ ಉಗ್ರ ಹಿಂದುತ್ವ ಸಂಘಟನೆ ಸನಾತನ ಸಂಸ್ಥೆ ಕಾರಣ ಎಂದು ವಾದಿಸಿ ಎಸ್ಐಟಿ(SIT) 9 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ.

ಇದನ್ನೂ ಓದಿ : https://vijayatimes.com/mallikarjun-kharge-to-contest/

ಸನಾತನ ಸಂಸ್ಥೆಯನ್ನು ಎಂದಾದರೂ ನಿಷೇಧಿಸಲಾಗುತ್ತದೆಯೇ? ಭಯೋತ್ಪಾದನೆಯನ್ನು ಉದ್ದನೆಯ ಗಡ್ಡ ಮತ್ತು ಸ್ಕಲ್-ಕಾಪ್ ಗೆ ಸೀಮಿತಗೊಳಿಸಲಾಗುವುದಿಲ್ಲ.

ಅನೇಕ ಬಾರಿ, ಭಯೋತ್ಪಾದನೆಯು ಕೇಸರಿ ಶಾಲು, ತಿಲಕ, ಅಥವಾ ಸಿಐಎ ಸೂಟ್ ಅನ್ನು ಧರಿಸಿ ಬರುತ್ತದೆ ಎಂದು ಅಭಿಪ್ರಾಯಟ್ಟಿದ್ದಾರೆ.

ಇನ್ನು ಕೇಂದ್ರ ಸರ್ಕಾರ(Central Government) ಇತ್ತೀಚೆಗೆ ಪಿಎಫ್‌ಐ ಮತ್ತು ಅದರ ಎಂಟು ಅಂಗ ಸಂಸ್ಥೆಗಳಾದ ರಿಹಬ್ ಇಂಡಿಯಾ ಫೌಂಡೇಶನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್,.

ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್, ಕೇರಳ ಸಂಸ್ಥೆಗಳನ್ನು ನಿಷೇಧಿಸಲಾಗಿದೆ.

https://youtu.be/Q3d-exudhek COVER STORY PROMO | ಪೋಷಕರೇ ಎಚ್ಚರ!

ಇನ್ನು ಸೆಪ್ಟೆಂಬರ್ 22ರಂದು, ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ ಜಂಟಿಯಾಗಿ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಅಸ್ಸಾಂ, ಮಧ್ಯಪ್ರದೇಶದ ರಾಜ್ಯಗಳ 93 ಸ್ಥಳಗಳಲ್ಲಿ ಶೋಧ ನಡೆಸಿತ್ತು.

ಸುಮಾರು 106 ಪಿಎಫ್‌ಐ ಸದಸ್ಯರು ಬಂಧಿಸಲಾಗಿತ್ತು.

ರಾಜ್ಯದಲ್ಲಿಯೂ ಅನೇಕ ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಕೇಂದ್ರ ಸರ್ಕಾರದ ಈ ನಡೆಯನ್ನು ನಟ ಚೇತನ್‌ ಟೀಕಿಸಿದ್ದಾರೆ.

Exit mobile version