ಬಿಜೆಪಿ ನಾಯಕರ ಹೆಣ್ಣುಮಕ್ಕಳು ಮುಸ್ಲಿಮರನ್ನು ಮದುವೆಯಾದ್ರೆ ಅದು ಪ್ರೀತಿ, ಇತರರು ಮದುವೆಯಾದ್ರೆ ಜಿಹಾದ್ : ಛತ್ತೀಸ್‍ಘಡ್ ಸಿಎಂ

Chattisgarh : ಬಿಜೆಪಿ (BJP) ನಾಯಕರ ಹೆಣ್ಣುಮಕ್ಕಳು ಮುಸ್ಲಿಮರನ್ನು ಮದುವೆಯಾದರೆ ಅದನ್ನು ಪ್ರೀತಿ ಎಂದು ಕರೆಯುತ್ತಾರೆ. ಅದೇ ಇತರರು ಮದುವೆಯಾದರೆ ಅದನ್ನು ಜಿಹಾದ್ (Chhattisgarh CM Statement) ಎಂದು ಕರೆಯಲಾಗುತ್ತದೆ ಎಂದು ಛತ್ತೀಸ್‍ಘಡ್ ಸಿಎಂ ಭೂಪೇಶ್ ಬಘೇಲ್ (Chhattisgarh CM Bhupesh Baghel) ನೇರವಾಗಿ ಆರೋಪಿಸಿದ್ದಾರೆ.

ಬಿಜೆಪಿ ನಾಯಕರ ಹೆಣ್ಣುಮಕ್ಕಳು ಮುಸ್ಲಿಮರನ್ನು ಮದುವೆಯಾದಾಗ ಅದನ್ನು ಪ್ರೀತಿ ಎಂದು ಕರೆಯುತ್ತಾರೆ,

ಆದರೆ ಬೇರೆಯವರು ಹಾಗೆ ಮಾಡಿದರೆ ಅದನ್ನು ಜಿಹಾದ್ ಎಂದು ಉಲ್ಲೇಖಿಸಿ ಕರೆಯುತ್ತಾರೆ ಎಂದು ಭೂಪೇಶ್

ಬಘೇಲ್ ಕೇಸರಿ ಪಕ್ಷವನ್ನು ಲವ್ ಜಿಹಾದ್‌ ವಿಚಾರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.


ಭೂಪೇಶ್ ಬಘೇಲ್ ಅವರು ಬುಧವಾರ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದು, ಬಿಜೆಪಿ ಪಕ್ಷವು ತೀವ್ರ ದ್ವಿಗುಣವನ್ನು ಹೊಂದಿದೆ ಎಂದು ಆರೋಪಿಸಿದರು.

ರಾಜ್ಯದ ಬಿಲಾಸ್‌ಪುರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ಬೆಮೆತಾರಾ ಜಿಲ್ಲೆಯ ಬಿರಾನ್‌ಪುರ ಗ್ರಾಮದಲ್ಲಿ ಕಳೆದ ವಾರ ನಡೆದ ಕೋಮುಗಲಭೆಯ ರಾಜಕೀಯ ಲಾಭ ಪಡೆಯಲು ಕೇಸರಿ ಪಕ್ಷ ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ : https://vijayatimes.com/somanna-entry-to-varuna/


ಕೆಲವು ಅಂತರ್ಜಾತಿ ವಿವಾಹಗಳ ನಂತರ ಬಿರಾನ್‌ಪುರದಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂಬ ಬಿಜೆಪಿಯ ಹೇಳಿಕೆಗಳ ಬಗ್ಗೆ ಪ್ರಶ್ನಿಸಿದಾಗ ಧ್ವನಿ ಎತ್ತಿದ ಸಿಎಂ ಬಾಘೇಲ್,

ಬಿಜೆಪಿಯು ಈ ವಿಷಯವನ್ನು (ಘರ್ಷಣೆ) ಪರಿಶೀಲಿಸಲಿಲ್ಲ ಅಥವಾ ಬಂದ್‌ಗೆ ಕರೆ ನೀಡುವ ಮೊದಲು (Chhattisgarh CM Statement) ಯಾವುದೇ ವರದಿಯನ್ನು ನೀಡಲಿಲ್ಲ.

ಇಬ್ಬರು ಮಕ್ಕಳ ನಡುವಿನ ಜಗಳಕ್ಕೆ ಕಾರಣವಾಯಿತು.

ಒಬ್ಬ ವ್ಯಕ್ತಿಯ ಜೀವವನ್ನು ಬಲಿತೆಗೆದುಕೊಂಡ ಘರ್ಷಣೆ ಅತ್ಯಂತ ದುಃಖಕರವಾಗಿದೆ. ಇದನ್ನು ಸಮರ್ಥಿಸಲು ಸಾಧ್ಯವಿಲ್ಲ,

ಆದರೆ ಬಿಜೆಪಿ ತನ್ನ ರಾಜಕೀಯ ಮೈಲೇಜ್ ಪಡೆಯಲು ಪ್ರಯತ್ನಿಸುತ್ತಿದೆ. ಅವರು ಲವ್ ಜಿಹಾದ್ (Love Jihad) ಬಗ್ಗೆ ಮಾತನಾಡುತ್ತಾರೆ.

ಬಿಜೆಪಿಯ ಹಿರಿಯ ನಾಯಕರ ಬಗ್ಗೆ ಮಾತನಾಡುವುದಾದರೆ ಅವರ ಹೆಣ್ಣು ಮಕ್ಕಳು ಮುಸ್ಲಿಮರನ್ನು ಮದುವೆಯಾಗಿದ್ದಾರೆ.

ಇದು ಲವ್ ಜಿಹಾದ್ ವರ್ಗಕ್ಕೆ ಸೇರುವುದಿಲ್ಲವೇ? ಛತ್ತೀಗಢದ ಬಿಜೆಪಿಯ ದೊಡ್ಡ ನಾಯಕನ ಮಗಳು ಎಲ್ಲಿ ಹೋದಳು ಎಂದು ಕೇಳುತ್ತೀರಿ.

ಅದು ಲವ್ ಜಿಹಾದ್ ಅಲ್ಲವೇ? ಅವರ ಮಗಳು ಮಾಡಿದರೆ ಅದು ಪ್ರೀತಿ! ಆದರೆ ಬೇರೆಯವರು ಮಾಡುತ್ತಾರೆ, ಆಗ ಅದು ಜಿಹಾದ್?

ಇದನ್ನು ತಡೆಯಲು ಬಿಜೆಪಿ ಏನು ಮಾಡಿದ್ದಾರೆ? ಬಿಜೆಪಿಯವರು ಇದರಿಂದ ರಾಜಕೀಯ ಲಾಭ ಪಡೆಯಲು ಬಯಸುತ್ತಾರೆ.

ಅವರು ತಮ್ಮ ಅಳಿಯರನ್ನು ಮಂತ್ರಿ ಮತ್ತು ಸಂಸದರನ್ನಾಗಿ ಮಾಡುತ್ತಾರೆ ಮತ್ತು ಇತರರನ್ನು ವಿವಿಧ ಕಾನೂನುಗಳ (Chhattisgarh CM Statement) ಅಡಿಯಲ್ಲಿ ನಡೆಸಿಕೊಳ್ಳುತ್ತಾರೆ ಎಂದು ಹೇಳಿದರು.

ಇತ್ತೀಚೆಗೆ ಬಿರಾನ್ಪುರ ಊರಿನಲ್ಲಿ ಕೋಮುಗಲಭೆ ಉಂಟಾಗಿದ್ದು, ಸ್ಥಳೀಯ ನಿವಾಸಿ 22 ವರ್ಷದ ಭುನೇಶ್ವರ್ ಸಾಹು ಸಾವನ್ನಪ್ಪಿದರು. ಘಟನೆಯ ಮೂರು ದಿನಗಳ ನಂತರ,

ಬಿರಾನ್‌ಪುರ ನಿವಾಸಿಗಳಾದ ರಹೀಮ್ ಮೊಹಮ್ಮದ್ (55) ಮತ್ತು ಅವರ ಮಗ ಇದುಲ್ ಮೊಹಮ್ಮದ್ (35) ಎಂದು ಗುರುತಿಸಲಾದ ವ್ಯಕ್ತಿ,

ಇದನ್ನೂ ಓದಿ : https://vijayatimes.com/jagdishshetter-meet-jp-nadda/

ಗ್ರಾಮದಿಂದ ಕೆಲವು ಕಿಮೀ ದೂರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಗ್ರಾಮಕ್ಕೆ ತೆರಳುವ ಎಲ್ಲ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್‌ ಹಾಕಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಗ್ರಾಮ ಹಾಗೂ ಸುತ್ತಮುತ್ತ ಸುಮಾರು 1,000 ಪೊಲೀಸರನ್ನು ನಿಯೋಜಿಸಲಾಗಿದೆ.

ಮೃತ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರಿ ನೌಕರಿ ಹಾಗೂ ಕುಟುಂಬಕ್ಕೆ 10 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಸಿಎಂ ಬಘೇಲ್ ಮಂಗಳವಾರ ಘೋಷಿಸಿದ್ದಾರೆ.

Exit mobile version