ನಾನ್‌‌ವೆಜ್ ಪ್ರಿಯರೇ ಗಮನಿಸಿ: ಪ್ರತಿನಿತ್ಯ ಚಿಕನ್ ತಿನ್ನೋದ್ರಿಂದ ಅನಾರೋಗ್ಯ ಕಟ್ಟಿಟ್ಟಬುತ್ತಿ

ಸಸ್ಯಾಹಾರವನ್ನು ಹೆಚ್ಚಾಗಿ ತಿನ್ನುವುದಕ್ಕಿಂತ ಮಾಂಸಾಹಾರವನ್ನು ತಿನ್ನಲು ಇಷ್ಟಪಡುವವರೇ ಹೆಚ್ಚಾಗಿದ್ದು, ಪ್ರತಿದಿನವೂ ಚಿಕನ್ (Chicken) ಸೇವನೆ ಮಾಡುವುದರಿಂದ ಆರೋಗ್ಯಕ್ಕಿಂತ ಅನಾರೋಗ್ಯ ಸಮಸ್ಯೆಗಳೇ ಹೆಚ್ಚಾಗುತ್ತೆ. ಹಾಗಾದ್ರೆ ಯಾವೆಲ್ಲಾ ಕಾಯಿಲೆಗಳು ಉಂಟಾಗುತ್ತದೆ ಎಂದು ತಿಳಿಯೋಣ….

ಅಡ್ಡಪರಿಣಾಮಗಳು
ಚಿಕನ್ ನಲ್ಲಿ ಪ್ರೋಟೀನ್ (Protien) ಅಂಶ ಹೆಚ್ಚಾಗಿದ್ದು, ಕೆಂಪು ಮಾಂಸಕ್ಕಿಂತಹ ಬಿಳಿ ಮಾಂಸ ಎಂದು ಕರೆಯಲಾಗುವ ಚಿಕನ್ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷ ಅನ್ನುವಂತೆ ಪ್ರತಿದಿನ ಚಿಕನ್ ಸೇವನೆ ಮಾಡಿದರೆ ಆರೋಗ್ಯಕ್ಕೆ ಅಡ್ಡಪರಿಣಾಮಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.

ದೇಹದ ತೂಕದಲ್ಲಿ ಹೆಚ್ಚಳ
ಚಿಕನ್ ಇಂದ ತಯಾರಿಸಿದ ಯಾವುದೇ ಬಗೆಯ ಚಿಕನ್ ರೆಸಿಪಿಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳನ್ನು (Calories) ಒಳಗೊಂಡಿರುವ ಕಾರಣ, ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಮೂತ್ರನಾಳದ ಸೋಂಕಿನ ಸಮಸ್ಯೆ
ಮಾರುಕಟ್ಟೆಯಲ್ಲಿ ಸಿಗುವ ಕೋಳಿ ಮಾಂಸದಲ್ಲಿ ಇ.ಕೊಲೈ (E.coli) ಎಂಬ ಬ್ಯಾಕ್ಟೀರಿಯ ಹೆಚ್ಚಾಗಿ ಕಂಡು ಬರುತ್ತದೆ. ಇದರಿಂದಾಗಿ ಮೂತ್ರನಾ ಳದ ಸೋಂಕಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ

ಹೃದಯಘಾತ ಸಂಭವಿಸಬಹುದು
ಮೊದಲೇ ಹೇಳಿದ ಹಾಗೆ, ದಿನಾ ಚಿಕನ್ ಸೇವನೆ ಮಾಡುವುದರಿಂದ ರಕ್ತ ದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (Cholesterol) ಮಟ್ಟಗಳೂ ಹೆಚ್ಚಾಗಿ ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಅಧಿಕ ಪ್ರಮಾಣದ ಪ್ರೋಟೀನ್
ಈ ಮಾಂಸದಲ್ಲಿ ಅಧಿಕ ಪ್ರಮಾಣದಲ್ಲಿ ಪ್ರೋಟೀನ್ ಇರುವುದರಿಂದ ಪ್ರತಿದಿನ ಚಿಕನ್ ತಿನ್ನುವ ಅಭ್ಯಾಸ ಮಾಡಿಕೊಂಡರೆ, ದೇಹದಲ್ಲಿ ಹೆಚ್ಚುವರಿ ಪ್ರೋಟೀನ್ ಸಂಗ್ರಹಣೆಗೊಳ್ಳುತ್ತದೆ. ಇದರಿಂದಾಗಿ ದೇಹದ ತೂಕವು ಕೂಡ ಹೆಚ್ಚಾಗುತ್ತದೆ.

ಕೊಲೆಸ್ಟ್ರಾಲ್ ಜಾಸ್ತಿಯಾಗಬಹುದು
ಎಣ್ಣೆಯಲ್ಲಿ ಕರಿದ ಅಥವಾ ಡೀಪ್ ಫ್ರೈಡ್ (Deep Fried) ಮಾಡಿರುವ ಚಿಕನ್ ಅನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ, ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ಎಣ್ಣೆಯಲ್ಲಿ ಕರಿದ ಚಿಕನ್ ಕಬಾಬ್, ಚಿಕನ್ ಫ್ರೈ ಇತ್ಯಾದಿ

ಭವ್ಯಶ್ರೀ ಆರ್ ಜೆ

Exit mobile version