ಚಿಕ್ಕಬಳ್ಳಾಪುರದಲ್ಲಿ ಮತ್ತೆ ಸಂಭವಿಸಿದ ಭೂಕಂಪ

ಚಿಕ್ಕಬಳ್ಳಾಪುರ ಡಿ 23 : ಜಿಲ್ಲೆಯಲ್ಲಿ ಮತ್ತೆ ಭೂಕಂಪ ಸಂಭವಿಸಿದ್ದು ರಿಕ್ಷರ್‌ ಮಾಪಕದಲ್ಲಿಇದರ ತೀವ್ರತೆ 3.6ರಷ್ಟು ದಾಖಲಾಗಿದೆ ಎಂದು NCFS ತಿಳಿಸಿದೆ. ಈ ಕುರಿತು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ ಸ್ಪಷ್ಟನೆ ನೀಡಿದ್ದು, “ಚಿಕ್ಕಬಳ್ಳಾಪುರದಲ್ಲಿ ಗುರುವಾರ ಮತ್ತೆ 3.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ಎರಡು ದಿನಗಳಲ್ಲಿ ಇದು ಮೂರನೇ ಭೂಕಂಪವಾಗಿದೆ ” ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ ವರದಿ ಮಾಡಿದೆ.

ನಿನ್ನೆ ಕೂಡ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಭೂಕಂಪನ ಉಂಟಾಗಿತ್ತು. ಜಿಲ್ಲೆಯ ಬಿಸೇಗಾರಹಳ್ಳಿ, ಶೆಟ್ಟಿಗೆರೆಯಲ್ಲಿ ಭೂಮಿ ಕಂಪಿಸಿತ್ತು. ದಿಢೀರ್ ಉಂಟಾದಂತ ಲಘು ಭೂಕಂಪನದಿಂದಾಗಿ ಜನರು ಬೆಚ್ಚಿಬಿದ್ದಿದ್ದರು. ಬೆಳಿಗ್ಗೆ 7 ಗಂಟೆಗೆ ಉಂಟಾದಂತ ಭೂಕಂಪನದಿಂದ ಭಯಗೊಂಡಿದ್ದರು.

ಇದರ ಬೆನ್ನಲ್ಲೇ ಇಂದು ಮತ್ತೆ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಭೂಕಂಪನ ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ 3.6ರಷ್ಟು ತೀವ್ರತೆ ( magnitude 3.6 on Richter scale ) ದಾಖಲಾಗಿದೆ. ಇದರಿಂದಾಗಿ ಜಿಲ್ಲೆಯ ಜನರನ್ನು ಭಯ ಭೀತಿಗೊಳಿಸಿದೆ.

Exit mobile version