ಚಿಕ್ಕಬಳ್ಳಾಪುರದಲ್ಲಿ ಕಂಪಿಸಿದ ಭೂಮಿ

ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದ್ದು ಈ ಹಿನ್ನಲೆಯಲ್ಲಿ ಜನರು ಭಯ ಭೀತರಾಗಿದ್ದಾರೆ. ಭಯ ಭೀತರಾಗಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಬುಧವಾರ ಮುಂಜಾನೆ ಭೂಮಿ ನಡುಗಿದೆ. ಬಂಡಹಳ್ಳಿ, ಆರೂರು, ದೊಡ್ಡಹಳ್ಳಿ, ಭೋಗಪರ್ತಿ ಮುಂತಾದ ಕಡೆ ಭೂಮಿ ಕಂಪಿಸಿದೆ.

ಬುಧವಾರ ಬೆಳಗ್ಗೆ 7.10ರ ಸುಮಾರಿಗೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 2.9 ಮತ್ತು 3.0 ತೀವ್ರತೆಯ ಕಂಪನ ದಾಖಲಾಗಿದೆ. ಭೂಮಿ ಕಂಪಿಸಿದ ಅನುಭವ ಆಗುತ್ತಲೇ ಜನರು ಮನೆಯಿಂದ ಹೊರಗೋಡಿ ಬಂದಿದ್ದಾರೆ. ಭೂಮಿ ಕಂಪಿಸಿದ ಅನುಭವವಾಯಿತು. ಪಾತ್ರೆಗಳು ಅಲುಗಾಡಿದವು ಎಂದು ದೊಡ್ಡಹಳ್ಳಿ ಗ್ರಾಮಸ್ಥರು ಹೇಳಿದ್ದಾರೆ. ಬಂಡಹಳ್ಳಿಯಲ್ಲಿ ಕೆಲವು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಶೆಟ್ಟಿಗೆರೆ, ಪಿಲ್ಲಗುಂಡ್ಲಹಳ್ಳಿ, ಬೈಯಪ್ಪನಹಳ್ಳಿ, ಆದನ್ನಗಾರಹಳ್ಳಿ, ರೆಡ್ಡಿಗೊಲ್ಲವಾರಹಳ್ಳಿ, ಪರೇಸಂದ್ರ ಗ್ರಾಮದ ಸುತ್ತ-ಮುತ್ತ ಸ್ಫೋಟದ ಸದ್ದು ಸಹ ಕೇಳಿ ಬಂದಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ರಾಷ್ಟ್ರೀಯ ಭೂಕಂಪ ಕೇಂದ್ರ (ಎನ್‌ಸಿಎಸ್‌) ಈ ಕುರಿತು ಟ್ವೀಟ್ ಮಾಡಿದೆ, 3.1 ತೀವ್ರತೆಯ ಭೂಕಂಪನ ಡಿಸೆಂಬರ್ 22ರಂದು ಬೆಳಗ್ಗೆ 7.09ರ ವೇಳೆಗೆ ಸಂಭವಿಸಿದೆ. ಬೆಂಗಳೂರಿನ ಉತ್ತರ ಈಶಾನ್ಯ ಭಾಗದ 70 ಕಿ. ಮೀ. ದೂರದಲ್ಲಿ 11 ಕಿ. ಮೀ. ಆಳದಲ್ಲಿ ಭೂಕಂಪ ಉಂಟಾಗಿದೆ ಎಂದು ಹೇಳಿದೆ. ಮಂಡಿಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2.9 ಮತ್ತು ಭೋಗಪರ್ತಿ ಗ್ರಾಮದ ಬಳಿ 3.0 ತೀವ್ರತೆಯ ಸಣ್ಣ ಪ್ರಮಾಣದ ಭೂಕಂಪವಾಗಿದೆ. “ಜನರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ” ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಆರ್. ಹೇಳಿದ್ದಾರೆ.


Exit mobile version