ಬಾಲ್ಯವಿವಾಹವಾದ ಪುರುಷರನ್ನು ಶೀಘ್ರ ಬಂಧಿಸುತ್ತೇವೆ : ಸಿಎಂ ಹಿಮಂತ ಬಿಸ್ವಾ ಶರ್ಮಾ

Assam : ಮುಂದಿನ ಒಂದು ವಾರದಲ್ಲಿ ಅಸ್ಸಾಂನಲ್ಲಿ(Assam) ಅಪ್ರಾಪ್ತ ಬಾಲಕಿಯರನ್ನು ಮದುವೆಯಾದ ಸಾವಿರಾರು ಪುರುಷರನ್ನು ಬಂಧಿಸಲಾಗುವುದು(Child marriage men arrest) ಎಂದು ಅಸ್ಸಾಂ ರಾಜ್ಯದ ಸಿಎಂ ಹಿಮಂತ ಬಿಸ್ವಾ ಶರ್ಮಾ(Himanta Biswa Sarma) ಘೋಷಿಸಿದ್ದಾರೆ.

ಗುರುವಾರ ನಾಗಾವ್ ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಈ ಹೇಳಿಕೆ ನೀಡಿದ್ದು, ಬಾಲ್ಯವಿವಾಹದ ವಿರುದ್ಧ ಅವರ ಸರ್ಕಾರವು ಆರಂಭಿಸಿರುವ ಶಿಸ್ತುಕ್ರಮದ ಹಿನ್ನೆಲೆಯಲ್ಲಿ ಈ ಬಗ್ಗೆ ಉಲ್ಲೇಖಿಸಿ ಹೇಳಿದ್ದಾರೆ.

ನಾಳೆಯಿಂದ ಬಾಲ್ಯವಿವಾಹದಲ್ಲಿ ತೊಡಗಿರುವ ಸಾವಿರಾರು ಜನರನ್ನು ಬಂಧಿಸಲಾಗುವುದು, ಮುಂದಿನ ಆರು-ಏಳು ದಿನಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ

ಹುಡುಗಿಯರನ್ನು ಮದುವೆಯಾದ ಸಾವಿರಾರು ಯುವಕರು ಮತ್ತು ಪುರುಷರನ್ನು ಬಂಧಿಸಲಾಗುವುದು ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಈ ಹಿಂದೆ ಬಾಲ್ಯವಿವಾಹದಲ್ಲಿ ತೊಡಗಿರುವವರ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು! 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳನ್ನು ಮದುವೆಯಾದವರನ್ನು ಪೋಕ್ಸೋ ಕಾಯಿದೆಯಡಿಯಲ್ಲಿ(Pocso Act) ಬಂಧಿಸಲಾಗುವುದು ಎಂದು ನಾಗಾಂವ್‌ನಲ್ಲಿ ಸಿಎಂ ಹೇಳಿದರು.

ಗುರುವಾರ ಹಿಮಂತ ಬಿಸ್ವಾ ಶರ್ಮಾ ಅವರ ಘೋಷಣೆಯು ಬಾಲ್ಯ ವಿವಾಹದ ವಿರುದ್ಧ ಸರ್ಕಾರದ ಅಭಿಯಾನದ ಭಾಗವಾಗಿದೆ ಎಂಬುದನ್ನು ತಿಳಿಸಿದೆ,

ಇದು ಮಗುವಿನ ಗರ್ಭಧಾರಣೆಯ ಹಿಂದಿನ ಕಾರಣ ತಿಳಿಯಲು ಇಟ್ಟಿರುವ ಮಹತ್ವದ ಹೆಜ್ಜೆ! ಇದು ಅಸ್ಸಾಂನಲ್ಲಿ ಹೆಚ್ಚಿನ ತಾಯಿ ಮತ್ತು ಶಿಶು ಮರಣ ದರಗಳಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 2019 ರಿಂದ ಪ್ರಧಾನಿ ಮೋದಿಯ 21 ವಿದೇಶ ಪ್ರವಾಸಗಳಿಗೆ ಖರ್ಚು ಮಾಡಿದ ಹಣ 22.76 ಕೋಟಿ ರೂ!

ಬಾಲ್ಯವಿವಾಹದ ತಡೆಗೆ ಅಸ್ಸಾಂ ಸರ್ಕಾರ ದಿಟ್ಟ ಹೆಜ್ಜೆ : ಜನವರಿಯಲ್ಲಿ ರಾಜ್ಯ ಸರ್ಕಾರವು ಬಾಲ್ಯ ವಿವಾಹದ(Child marriage men arrest) ವಿರುದ್ಧ ಶಿಸ್ತುಕ್ರಮವನ್ನು ಪ್ರಾರಂಭಿಸಿದ ಬೆನ್ನಲ್ಲೇ,

ಅಸ್ಸಾಂ ಪೊಲೀಸರು ಬಾರ್ಪೇಟಾ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ವಿವಾಹವನ್ನು ಏರ್ಪಡಿಸಿದ ಆರೋಪದಲ್ಲಿ ವರ ಮತ್ತು ಇಮಾಮ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

29 ವರ್ಷದ ಯುವಕ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಲು ಯೋಜಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲ್ಯ ವಿವಾಹದ ವಿರುದ್ಧ ಅಸ್ಸಾಂನಲ್ಲಿ ಒಟ್ಟು 4,004 ಪ್ರಕರಣಗಳು ದಾಖಲಾಗಿವೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ಪ್ರಕಟಣೆಯಲ್ಲಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಕಾನೂನಿನ ಹೊರತಾಗಿಯೂ, ಬಾಲ್ಯವಿವಾಹವು ದೇಶದ ಭಾಗಗಳಲ್ಲಿ ವ್ಯಾಪಕವಾಗಿ ಉಳಿದಿದೆ. ಕೆಲವು ರಾಜ್ಯಗಳಲ್ಲಿ ಹೆಚ್ಚಿನ ಶೇಕಡಾವಾರು ಹುಡುಗಿಯರು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗುತ್ತಿದ್ದಾರೆ ಎಂದು ಹೇಳಿದರು.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (NFHS-5) 2019-21 ರ ಪ್ರಕಾರ, ಅಸ್ಸಾಂನಲ್ಲಿ 15-19 ವರ್ಷ ವಯಸ್ಸಿನ ಸುಮಾರು 11.7

ಪ್ರತಿಶತ ಮಹಿಳೆಯರು ಸಮೀಕ್ಷೆಯ ಸಮಯದಲ್ಲಿ ಈಗಾಗಲೇ ತಾಯಂದಿರು ಅಥವಾ ಗರ್ಭಿಣಿಯಾಗಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.

Exit mobile version