60 ವರ್ಷ ಪೂರೈಸಿದ್ದೇನೆ, ಈಗ ನಾನು ತಾತನಾಗಿರುವೆ : ಜಗ್ಗೇಶ್ ಪದವಿಪೂರ್ವ ಚಿತ್ರಕ್ಕೆ ಶುಭಹಾರೈಸಿ, ಹಳೆಯ ನೆನಪುಗಳ ಮೇಲುಕು

Sandalwood : ‘ನಾನು ತಾತನಾಗಿರುವೆ, ನನಗೀಗ 60 ವರ್ಷ. ಈ ಚಿತ್ರ ನನ್ನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ಹಾಗೆ ಮಾಡಿದೆ’ ಅಂತ ಕನ್ನಡ ಚಿತ್ರರಂಗ ನವರಸ ನಾಯಕ ಜಗ್ಗೇಶ್‌(childwood memories jaggesh) ತಿಳಿಸಿದರು. ಹರಿಪ್ರಸಾದ್ ನಿರ್ದೇಶನದ ‘ಪದವಿಪೂರ್ವ’ (Padavi poorva) ಚಿತ್ರದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡಕ್ಕೆ ಶುಭ ಹಾರೈಸಿದ ಕ್ಷಣವನ್ನು ಸ್ಮರಿಸಿ,

ಜಗ್ಗೇಶ್‌ ತಮ್ಮ ಫೇಸ್ಬುಕ್ನಲ್ಲಿ ಹಳೆಯ ನೆನಪುಗಳ ಮೆಲುಕು ಹಾಕಿ, ಬರಹವೊಂದನ್ನು ಬರೆದುಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ನೋಡಿ.

“ಸ್ನೇಹಿತರೇ, ನಿನ್ನೆ ಯೋಗರಾಜಭಟ್ಟರ (Yogaraj bhat) ಶಿಷ್ಯ ಹಾಗೂ ನನ್ನ ಆತ್ಮೀಯ ಸ್ನೇಹಿತ ಪದವಿಪೂರ್ವ ಚಿತ್ರದ ನಿರ್ದೇಶಕ ಹರಿಪ್ರಸಾದ್ರವರ (Hariprasad) ಪ್ರೆಸ್ ಮಿಟ್ ಇತ್ತು.

ಆ ಚಿತ್ರ ಸಂಪೂರ್ಣ 17-18 ವಯಸ್ಸಿನ ಎಳೆಮನಸ್ಸುಗಳ ಕಥೆಯನ್ನಾಧರಿಸಿದೆ. ಆ ಚಿತ್ರಕ್ಕೆ ನಾನು ಶುಭಹಾರೈಸಲು ಹೋಗಿದ್ದೆ. ಆಗ ಈ ಚಿತ್ರದ ಕಥೆಯಂತೆ ನನ್ನ ಬಾಲ್ಯದ ಬದುಕಿನ ಅನೇಕ ಪ್ರಸಂಗವನ್ನು ಚಿತ್ರತಂಡದೊಂದಿಗೆ ಹಂಚಿಕೊಂಡಿದ್ದೆ.

ಅದನ್ನು ಕೇಳಿದ ಚಿತ್ರತಂಡ ಹಾಗೂ ಮಾಧ್ಯಮ ಮಿತ್ರರು ಗಹಗಹಿಸಿ ನಕ್ಕು ಆನಂದಿಸುತ್ತಿದ್ದರು,

ಇದನ್ನೂ ಓದಿ : https://vijayatimes.com/population-control-biswa-sarma/

ಅದಕ್ಕೆ ಕಾರಣ ನನ್ನ ಬದುಕಿನಲ್ಲಿ ನಡೆದ ಘಟನಾವಳಿಗಳಾಗಿದ್ದವು. 42 ವರ್ಷದ ನನ್ನ ಬದುಕಿನ ಪಯಣದ ಜೊತೆಗೆ ಅಪ್ಪ- ಅಮ್ಮ, ಬಂಧು-ಮಿತ್ರರ ನೆನೆದು ಭಾವುಕನಾಗಿಬಿಟ್ಟೆ.

ಕಾರಣ ಬಹುತೇಕರು ನನ್ನ ಜೀವನದಲ್ಲಿ ಬಿಟ್ಟು ಹೋಗಿದ್ದಾರೆ , ಈಗ 60 ವರ್ಷಕ್ಕೆ ಕಾಲಿಟ್ಟು ತಾತನಾಗಿರುವೆ.

ನನ್ನ ಇಂದಿನ ಮನಸ್ಥಿತಿ ಒಂದೇ ‘ಯುವ ಜೀವಗಳು ಅವರವರ ಇಷ್ಟದ ಕ್ಷೇತ್ರದಲ್ಲಿ ಬೆಳೆಯಬೇಕು. ದೇವರು ನನಗೆ ಕೊಟ್ಟ ಅದೃಷ್ಟದಂತೆ ಎಲ್ಲರಿಗೂ ಅದೃಷ್ಟ ಸಿಗಬೇಕು.

ಆ ಮೂಲಕ ಅವರು ಉನ್ನತ ಮಟ್ಟಕ್ಕೆ ಬೆಳೆದು ಉತ್ತಮ ಸಾಧಕರಾಗಬೇಕು ಎಂಬ ಬಯಕೆ ನನ್ನದು.

ಇದನ್ನೂ ನೋಡಿ : https://fb.watch/hjRbTXMq8_/ ಮೂಲಭೂತ ಸೌಕರ್ಯಗಳನ್ನು ಕಾಣದ ಗಂಗಾವತಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್.

ನನ್ನ ಬಾಲ್ಯದ ಗೆಳೆಯ ಚಂದ್ರು ಆರಾಧ್ಯ ನನ್ನ ಜೊತೆಗಿದ್ದ ಹಳೆಯ ಫೋಟೋವೊಂದನ್ನು ಹಂಚಿಕೊಂಡಿದ್ದ. ಈಗ ಆತ ಅಮೇರಿಕದಲ್ಲಿ ವಾಸವಾಗಿದ್ದಾನೆ.

ಅವನು ನನಗಿಂತ 1ವರ್ಷ ಕಿರಿಯವನು, ಆ ದಿನಗಳಲ್ಲಿ ನಾನು ಆರ್ಕೇಸ್ಟ್ರಾದಲ್ಲಿ ಹಾಡಲು ಹೋಗುತ್ತಿದ್ದೆ. ಜೊತೆಗೆ ಮಿಮಿಕ್ರಿ ಮಾಡುತ್ತಿದ್ದೆ.

ಆಗ ಒಂದು ಕಾರ್ಯಕ್ರಮಕ್ಕೆ 20ರೂ ಕೊಡುತ್ತಿದ್ದರು. ಆ ಹಣ ಸಂಪೂರ್ಣ ಸಿನಿಮಾ ಟಿಕೆಟ್‌ ಹಾಗೂ ಗುಂಡಿಗೆ ಸಾಕಾಗುತ್ತಿತ್ತು. ಯಾವ ಕಾರಣಕ್ಕೂ ಸಿಗದ ಅಂದಿನ ನನ್ನ ಫೋಟೋ ಇಂದು ನೋಡಿ ಅತೀವ ಸಂತೋಷ ನೀಡಿತು.

ಈ ಫೋಟೊ ಹಾಗೂ ನಿನ್ನೆ ಮಾಧ್ಯಮದಲ್ಲಿ ಆಡಿದ ಮಾತಿಗೆ ತಳುಕು ಹಾಕಿದಾಗ 1980ರಲ್ಲಿ ಜಗ್ಗೇಶ್‌ ಹೇಗಿದ್ದ ಈಗ ಹೇಗಾದ ಅರಿವಾಗುತ್ತದೆ.

ಶ್ರಮಕ್ಕೆ, ಪ್ರತಿಭೆಗೆ, ಶ್ರದ್ಧೆಗೆ ಖಂಡಿತ ಪ್ರತಿಯೊಬ್ಬ ಮನುಜನಿಗೂ ಬದುಕಲ್ಲಿ ಅವನದೆ ದಿನಗಳುಂಟು. ಆಶಾಭಾವನೆ ಇರಲಿ ಗೆದ್ದೆ ಗೆಲ್ಲುತ್ತೇವೆ ಒಂದುದಿನ ಎಂದು. ಶುಭಹಾರೈಕೆ“ ಅಂತ ಜಗ್ಗೇಶ್‌ ಟ್ವೀಟ್‌(Tweet) ಮಾಡಿದರು,

Exit mobile version