ಮತ್ತೆ ಕ್ಯಾತೆ ತೆಗೆದ ಚೀನಾ: ಅರುಣಾಚಲದ 30 ಪ್ರದೇಶಗಳಿಗೆ ಹೊಸ ಹೆಸರುಗಳನ್ನಿಡಲು ತಯಾರಿ ನಡೆಸಿದ ಡ್ರ್ಯಾಗನ್!

Beijing: ಅರುಣಾಚಾಲ ಪ್ರದೇಶದ (Arunachala Pradesh) ವಿಚಾರವಾಗಿ ಮತ್ತೆ ಮೂಗು ತೂರಿಸಿರುವ ಚೀನಾ ಇಲ್ಲಿನ 30 ಸ್ಥಳಗಳ ಹೆಸರು ಬದಲು ಮಾಡಲು ಹೊರಟಿದೆ. ಪರ್ವತ , ಸರೋವರ ಸೇರಿ ವಿವಿಧ ಸ್ಥಳಗಳ 30 ಹೊಸ ಹೆಸರುಗಳ ನಾಲ್ಕನೇ ಪಟ್ಟಿಯನ್ನು ಚೀನಾ ಬಿಡುಗಡೆ ಮಾಡಿದೆ. ಅರುಣಾಚಲ ಪ್ರದೇಶದಲ್ಲಿನ ಸ್ಥಳಗಳಿಗೆ ಚೀನಾ (China)  ಮರುನಾಮಕರಣ ಮಾಡುವುದನ್ನು ಭಾರತ ತಿರಸ್ಕರಿಸಿದ್ದು, ಪ್ರಸ್ತುತ ರಾಜ್ಯವು ದೇಶದ ಅವಿಭಾಜ್ಯ ಅಂಗವಾಗಿದೆ ಎಂದು ಪ್ರತಿಪಾದಿಸುತ್ತದೆ.

ಹೀಗೆ ಹೊಸ ಹೆಸರುಗಳನ್ನಿಡುವುದರಿಂದ ಈ ವಾಸ್ತವತೆಯನ್ನು ಬದಲಾಗುವುದಿಲ್ಲ ಎಂದು ಭಾರತ ಹೇಳಿದೆ. ಚೀನಾದ (China) ನಾಗರಿಕ ವ್ಯವಹಾರಗಳ ಸಚಿವಾಲಯವು ಜಂಗ್ನಾನ್‌ನಲ್ಲಿನ ಆರು ಸ್ಥಳಗಳ ಪ್ರಮಾಣಿತ ಹೆಸರುಗಳ ಮೊದಲ ಪಟ್ಟಿಯನ್ನು 2017 ರಲ್ಲಿ ಬಿಡುಗಡೆ ಮಾಡಿತು. ಆಮೇಲೆ 15 ಸ್ಥಳಗಳ ಎರಡನೇ ಪಟ್ಟಿಯನ್ನು 2021 ರಲ್ಲಿ ನೀಡಲಾಯಿತು. ನಂತರ 2023 ರಲ್ಲಿ 11 ಸ್ಥಳಗಳಿಗೆ ಹೆಸರುಗಳೊಂದಿಗೆ ಮತ್ತೊಂದು ಪಟ್ಟಿಯನ್ನು ನೀಡಿತ್ತು.

ಅರುಣಾಚಲ ಪ್ರದೇಶದಲ್ಲಿ 13,000 ಅಡಿ ಎತ್ತರದಲ್ಲಿ ನಿರ್ಮಿಸಲಾದ ಸೇಲಾ ಸುರಂಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ ಬೀಜಿಂಗ್ ಭಾರತದೊಂದಿಗೆ ರಾಜತಾಂತ್ರಿಕ ಪ್ರತಿಭಟನೆಯನ್ನು ಮಾಡಿತ್ತು.  ಈ ಸುರಂಗವು ಆಯಕಟ್ಟಿನ ಸ್ಥಳದಲ್ಲಿರುವ ತವಾಂಗ್‌ಗೆ ಎಲ್ಲಾ ಹವಾಮಾನ ಸಂಪರ್ಕವನ್ನು ಒದಗಿಸುತ್ತದೆ ಮತ್ತು ಗಡಿ ಪ್ರದೇಶದ ಉದ್ದಕ್ಕೂ ಸೈನ್ಯದ ಉತ್ತಮ ಚಲನೆಯನ್ನು ಖಚಿತಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಅರುಣಾಚಲ ಪ್ರದೇಶವನ್ನು ಝೋಂಗ್ನಾನ್ ಮತ್ತು ದಕ್ಷಿಣ ಟಿಬೆಟ್ ಎಂದು ಕರೆದಿತ್ತು. ಅಲ್ಲದೆ, ಇತ್ತೀಚಿಗಷ್ಟೇ ಅರುಣಾಚಲ ಪ್ರದೇಶ ಭಾರತದ ಭೂಪ್ರದೇಶ ಎಂಬ ಅಮೆರಿಕದ ಘೋಷಣೆಯಿಂದ ಕಣ್ಣು ಕೆಂಪಾಗಿಸಿಕೊಂಡಿದ್ದ ಚೀನಾ, ಭಾರತವನ್ನು ಕೆರಳಿಸಲು ಅರುಣಾಚಲದ 30 ಪ್ರದೇಶಗಳ ಹೆಸರನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.ಮಾರ್ಚ್ (March) 23 ರಂದು ಸಿಂಗಾಪುರದಲ್ಲಿ ನಡೆದ ಸಮಾವೇಶದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಅವರು ಅರುಣಾಚಲ ಪ್ರದೇಶದ ವಿರುದ್ಧ ಚೀನಾ ಪದೇ ಪದೇ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ.

ಅರುಣಾಚಲ ಭಾರತದ ಅವಿಭಾಜ್ಯ ಅಂಗ ಎಂದೂ ಸ್ಪಷ್ಟಪಡಿಸಲಾಗಿದೆ ಎಂದು ಟಾಂಗ್​ ನೀಡಿದ್ದರು.ಅರುಣಾಚಲ ಪ್ರದೇಶ ತಮ್ಮದು ಎಂದು ಚೀನಾ ಹಲವು ವರ್ಷಗಳಿಂದ ಹೇಳುತ್ತಿದೆ. ಅರುಣಾಚಲ ಪ್ರದೇಶದಲ್ಲಿ ಸಾಂಸ್ಕೃತಿಕ ಸಂರಕ್ಷಣೆಗೆ ತಾನು ಬದ್ಧವಾಗಿದೆ ಎಂದು ಡ್ರ್ಯಾಗನ್ (Dragon) ಹೇಳಿಕೊಂಡಿದೆ ಮತ್ತು ಆ ಪ್ರಯತ್ನಗಳ ಭಾಗವಾಗಿ ಅಲ್ಲಿನ ಪ್ರದೇಶಗಳಿಗೆ ಚೀನಾದ ಹೆಸರುಗಳನ್ನು ನೀಡುತ್ತಿದೆ. ಅರುಣಾಚಲ ಪ್ರದೇಶವನ್ನು ಭಾರತದ ಭಾಗವಾಗಿ ಗುರುತಿಸುವ ಅಮೆರಿಕದ ಹೇಳಿಕೆಯ ಬಗ್ಗೆ ಕೂಡ ಅಸಮಾಧಾನ ವ್ಯಕ್ತಪಡಿಸಿದೆ.

Exit mobile version