vijaya times advertisements
Visit Channel

ಶ್ರೀಲಂಕಾ ಬಂದರಿನಲ್ಲಿ ಚೀನಾದ ಹಡಗು ; ಭಾರತದ ಕಳವಳಕ್ಕೆ 5 ಕಾರಣಗಳು ಇಲ್ಲಿವೆ!

China Ship

ಹೊಸ ದಿಲ್ಲಿ : ಭಾರತದ(India) ತೀವ್ರ ವಿರೋಧದ ನಡುವೆಯೂ ಚೀನಾದ(China) ಗುಪ್ತಚರ ಹಡಗೊಂದು ಶ್ರೀಲಂಕಾದ(Srilanka) ಹಂಬನ್ತೋಟ ಬಂದರಿಗೆ ಬಂದು ತಲುಪಿದೆ. ಮೊದಲಿನಿಂದಲೂ ಈ ಹಡಗು ಶ್ರೀಲಂಕಾ ಬಂದರಿಗೆ ಬರುವುದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತದ ಕಳವಳಕ್ಕೆ ಪ್ರಮುಖ 5 ಕಾರಣಗಳೆಂದರೆ,

srilanka
  • ಯುಯಾಂಗ್ ವಾಂಗ್ 5 ಎಂಬ ಹಡಗಿನಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪರೀಕ್ಷೆಗೆ ಒಳಪಡಿಸುವ ಸಂವೇದಕಗಳಿವೆ. ಭಾರತದ ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಲ್ಲಿ, ಭಾರತ ತನ್ನ ಕ್ಷಿಪಣಿಗಳನ್ನು ಪರೀಕ್ಷಿಸುತ್ತಿದೆ. ಹೀಗಾಗಿ ಚೀನಾದ ಹಡಗು ಇದೇ ವ್ಯಾಪ್ತಿಯಲ್ಲಿ ಇರುವುದು ಭಾರತದ ಕಳವಳಕ್ಕೆ ಕಾರಣವಾಗಿದೆ.
  • ಚೀನಾ ಯುಯಾಂಗ್ ವಾಂಗ್ 5 ಹಡಗಿನಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು, ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿಗಳ ವ್ಯಾಪ್ತಿ ಮತ್ತು ನಿಖರತೆಯನ್ನು ಅಳೆಯುವ ಸಾಧ್ಯತೆ ಇರುತ್ತದೆ.
  • ಯುವಾಂಗ್ ವಾಂಗ್ 5 ಗುಪ್ತಚರ ಹಡಗು ಹಿಂದೂ ಮಹಾಸಾಗರದಲ್ಲಿ ಜಲಾಂತರ್ಗಾಮಿ ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ಸಾಗರ ಸಮೀಕ್ಷೆಗಳನ್ನು ಸಹ ನಡೆಸಬಹುದು. ಈ ರೀತಿಯ ಸಮೀಕ್ಷೆಗಳು ಭಾರತದ ಭದ್ರತೆಗೆ ಸವಾಲೊಡ್ಡುತ್ತವೆ.
China Ship
  • ಯುವಾಂಗ್ ವಾಂಗ್ 5 ಗುಪ್ತಚರ ಹಡಗು ತನ್ನ ಸ್ವಯಂಚಾಲಿತ ಗುರುತಿನ ವ್ಯವಸ್ಥೆಯನ್ನು ಬದಲಾಯಿಸಿಕೊಳ್ಳಬೇಕು ಎಂದು ಶ್ರೀಲಂಕಾ ಹೇಳಿದ್ದರು, ರಹಸ್ಯವಾಗಿ ವೈಜ್ಞಾನಿಕ ಸಂಶೋಧನೆಯನ್ನು ನಡೆಸುವ ಸಾಧ್ಯತೆ ಇದೆ. ಚೀನಾದ ಕಂಪನಿಯೊಂದು ಹಂಬಂಟೋಟಾ ಬಂದರಿನ ಉಸ್ತುವಾರಿ ವಹಿಸಿಕೊಂಡಿದ್ದು, ಭಾರತದ ಕಳವಳಕ್ಕೆ ಕಾರಣವಾಗಿದೆ.
  • ಶ್ರೀಲಂಕಾ 99 ವರ್ಷಗಳ ಕಾಲ ಚೀನಾದ ಮರ್ಚೆಂಟ್ ಪೋರ್ಟ್ ಹೋಲ್ಡಿಂಗ್ಸ್ ಕಂಪನಿಗೆ ಹಂಬಂಟೋಟಾ ಬಂದರಿನ ಗುತ್ತಿಗೆ ನೀಡಿದೆ. ಈ ಬಂದರನ್ನು ಬಳಸಿಕೊಂಡು, ಚೀನಾದ ಗುಪ್ತಚರ ಹಡಗುಗಳು ಈ ಬಂದರಿಗೆ ಬರುವುದರಿಂದ ಭಾರತ ಕರಾವಳಿ ಭದ್ರತೆಗೆ ಬಹುದೊಡ್ಡ ಸಮಸ್ಯೆಯಾಗಲಿವೆ. ಇಲ್ಲಿಂದ ಸುಲಭವಾಗಿ ಭಾರತದ ನೌಕಾಪಡೆಯ ಚಟುವಟಿಕೆಗಳನ್ನು ಗುರುತಿಸಬಹುದಾಗಿದೆ. ಹೀಗಾಗಿ ಈ ವ್ಯಾಪ್ತಿಯಲ್ಲಿ ಚೀನಾ ಹಡಗಿರುವುದು ಭಾರತದ ಕಳವಳಕ್ಕೆ ಮುಖ್ಯಕಾರಣವಾಗಿದೆ.

Latest News

Paneer
ಆರೋಗ್ಯ

ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ವರದಾನ ನಾವು ಪ್ರತಿದಿನ ಬಳಸುವ ಪನೀರ್

ಪನೀರ್ ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಕೂಡ ಇದರ ಪ್ರಯೋಜನಗಳು ಅಪಾರ. ಆದರೆ ಹೆಚ್ಚಿನವರಿಗೆ ಇದರ ಬಗ್ಗೆ ಅರಿವೇ ಇಲ್ಲ.

ದೇಶ-ವಿದೇಶ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಬೆಂಗಾವಲಿಗೆ 42 ಕಾರುಗಳು‌ ; ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

ಜನಸಾಮಾನ್ಯರ ಪಕ್ಷ ಎಂದೇ ಹೇಳಿಕೊಳ್ಳುವ ಆಮ್‌ ಆದ್ಮಿ ಪಕ್ಷದ ನಾಯಕರು ಈ ರೀತಿಯಾಗಿ ಸಾಮಾನ್ಯ ಜನರ ತೆರಿಗೆ(Tax) ಹಣವನ್ನು ದುಂದುವೆಚ್ಚ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Mallikarjun Kharge
ರಾಜಕೀಯ

ಮಲ್ಲಿಕಾರ್ಜುನ ಖರ್ಗೆ ಚಿತ್ತ ಕಾಂಗ್ರೆಸ್ ಅಧ್ಯಕ್ಷ ಸ್ಥಾನದತ್ತ ; ಅಧ್ಯಕ್ಷ ಸ್ಥಾನ ಬಹುತೇಕ ಖಚಿತ

ಈ ರಾಜೀನಾಮೆಯನ್ನು ಸೋನಿಯಾ ಗಾಂಧಿ ಅವರು ಅಂಗೀಕರಿಸುವ ಸಾಧ್ಯತೆ ಇದ್ದು, ಹೊಸ ರಾಜ್ಯಸಭಾ ವಿರೋಧ ಪಕ್ಷದ ನಾಯಕನ ಆಯ್ಕೆ ಸಂಬಂಧ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

PFI
ದೇಶ-ವಿದೇಶ

ಬಂಧಿತ PFI ಕಾರ್ಯಕರ್ತರನ್ನು 21 ದಿನಗಳ ಕಸ್ಟಡಿಗೆ ಕಳುಹಿಸಿದ NIA ಕೋರ್ಟ್!

ಬಂಧಿತರ ಮೇಲೆ ಭಯೋತ್ಪಾದನೆಗೆ ಹಣಕಾಸಿನ ನೆರವು ಒದಗಿಸಿರುವ ಮತ್ತು ಹಿಂದೂ ಕಾರ್ಯಕರ್ತರನ್ನು ಹತ್ಯೆ(Murder) ಮಾಡಿರುವ ಆರೋಪವನ್ನು ಹೊರಿಸಲಾಗಿದೆ.