ಮತಾಂತರ ನಿಷೇಧ ಕಾಯ್ದೆ ಬೇಡ – ಕ್ರೈಸ್ತ ಧರ್ಮಗುರುಗಳ ಮನವಿ

ಬೆಂಗಳೂರು ಸೆ 23 : ರಾಜ್ಯದಲ್ಲಿ ಮತಾಂತರ ನಿಷೇಧಕ್ಕೆ ಕಾನೂನು ಜಾರಿಗೆ ತರುವುದಾಗಿ ಸರ್ಕಾರ ಘೋಷಣೆ ಮಾಡಿದ ಬೆನ್ನಲ್ಲೇ, ಇಂತಹ ಕಾನೂನು ಕರ್ನಾಟಕದಲ್ಲಿ ಅಗತ್ಯ ಇಲ್ಲ ಎಂದು ಕ್ರಿಶ್ಚಿಯನ್‌ ಸಮುದಾಯದ ಧರ್ಮಗುರುಗಳು ತಿಳಿಸಿದ್ದಾರೆ

ಈ ಬಗ್ಗೆ ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಕ್ರಿಶ್ಚಿಯನ್‌ ಸಮುದಾಯದ ಧರ್ಮಗುರುಗಳು ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅಗತ್ಯ ಇಲ್ಲ ನಾವು ಅಂತವರಲ್ಲ, ನಮ್ಮ ಧರ್ಮದಲ್ಲಿ ಬಲವಂತದ ಮತಾಂತರ ಮಾಡುತ್ತಿಲ್ಲ. ಅವರ ಆರೋಪ ಸತ್ಯಕ್ಕೆ ದೂರವಾದುದು. ಸಾವಿರಾರು ಮಕ್ಕಳು ಕ್ರಿಶ್ಚಿಯನ್ ಶಾಲೆಗಳಲ್ಲಿ ಓದುತ್ತಿದ್ದಾರೆ. ಯಾವ ಮಕ್ಕಳು ಮತಾಂತರ ಆಗಿಲ್ಲ. ಹೀಗಾಗಿ ಇದಕ್ಕಾಗಿ ಪ್ರತ್ಯೇಕ ಮಸೂದೆಯ ಅಗತ್ಯವಿಲ್ಲ ಎಂದಿದ್ದಾರೆ. ಆರ್ಚ್ ಬಿಷಪ್ ಡಾ.ಪೀಟರ್ ಮಚಾಡೋ ನೇತೃತ್ವದ ಧರ್ಮಗುರುಗಳ ನಿಯೋಗ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ವಿಧಾನಸೌಧದದಲ್ಲಿ ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಿತು. ಸಿಎಂ ಭೇಟಿ ಸಂದರ್ಭದಲ್ಲಿ ದೇವದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಮತಾಂತರ ಆರೋಪಕ್ಕೆ ಧರ್ಮ ಗುರುಗಳು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಬೇಡ ಎಂದು ಮನವಿ ಮಾಡಲಾಗಿದೆ.

Exit mobile version