ಫೆ 14 ರಂದು ಪ್ರೇಮಿಗಳ ದಿನದಂದೆ ಸಿ.ಎಂ. ಇಬ್ರಾಹಿಂ ರಾಜೀನಾಮೆ!

Ibrahim

ಫೆ 14ರ ಪ್ರೇಮಿಗಳ ದಿನದಂದೆ ವಿಧಾನ ಪರಿಷತ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಿ.ಎಂ. ಇಬ್ರಾಹಿಂ ಸ್ಪಷ್ಟ ಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಮುಸ್ಲಿಮರು ಕಾಂಗ್ರೆಸ್ ನಿಂದ ಒಬ್ಬೊಬ್ಬರಾಗಿ ಹೊರ ಬರುತ್ತಿದ್ದಾರೆ. ಇದಕ್ಕೆ ಧರ್ಮ ಗುರುಗಳ ಬೆಂಬಲ ಇದೆ. ನಾನು ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ, ನನ್ನ ಮುಂದಿನ ರಾಜಕೀಯ ನಿರ್ಧಾರ ಮಾಡುತ್ತೇನೆ ಎಂದು ತಿಳಿಸಿದರು. ನನ್ನ ಮುಂದಿನ ಆಯ್ಕೆಗಳೆಂದರೆ ಜೆಡಿಎಸ್, ಮಮತಾ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಎಂದು ತಿಳಿಸಿದರು.

ಬಿಜೆಪಿ ಮತ್ತು ನನ್ನ ಸಿದ್ದಾಂತ ವಿರುದ್ದವಾಗಿದೆ :

ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲೂ ಉತ್ತಮ ನಾಯಕರಿದ್ದಾರೆ. ಅವರ ಜೊತೆಗೂ ನನಗೆ ಉತ್ತಮ ಒಡನಾಟವಿದೆ. ರಾಮಾ ಜೋಯಿಶರು ನನ್ನ ಆತ್ಮೀಯರಾಗಿದ್ದರು. ಆದರೆ ಅವರ ಸಿದ್ದಾಂತ ಬೇರೆ, ನನ್ನ ಸಿದ್ದಾಂತ ಬೇರೆ. ನಾನು ಎಲ್ಲರನ್ನೂ ಪ್ರೀತಿಸುವ ವ್ಯಕ್ತಿ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಜೊತೆಗೆ ನಮ್ಮದು ಬಸವ ತತ್ವ, ಬಿಜೆಪಿ ಅವರದ್ದು ಕೇಶವಕೃಪಾ ತತ್ವ. ನಮಗೂ ಅವರಿಗೂ ಆಗಿ ಬರುವುದಿಲ್ಲ ಎಂದು ಬಿಜೆಪಿ ಸೇರುವ ವಿಚಾರವನ್ನು ತೆರೆ ಎಳೆದಿದ್ದಾರೆ.
ಸಿದ್ದರಾಮಯ್ಯ ಅವರ ನಡುವೆ ಮುಸುಕಿನ ಗುದ್ದಾಟ ಇರುವ ಹಿನ್ನೆಲೆಯಲ್ಲಿ ಹಾಗೂ ಕಾಂಗ್ರೆಸ್ನಲ್ಲಿ ಸೂಕ್ತ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಸಿ.ಎಂ. ಇಬ್ರಾಹಿಂ ಬೇರೆ ಪಕ್ಷದತ್ತ ಮುಖಮಾಡಿದ್ದಾರೆ.

Exit mobile version