ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ; 7 ಲಕ್ಷ ಕೋಟಿ ಹೂಡಿಕೆ, 3 ಲಕ್ಷ ಉದ್ಯೋಗ ಸೃಷ್ಟಿಯಾಗುವ ನೀರಿಕ್ಷೆ : ಸಿಎಂ

cm

Karnataka : ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕರ್ನಾಟಕ ನಾಗಾಲೋಟ ಮುಂದುವರಿಸಲು ಸಜ್ಜುಗೊಂಡಿದೆ. ‘ಬಿಯಾಂಡ್ ಬೆಂಗಳೂರು’ ಆಶಯದಲ್ಲಿ #GIM2022 ನಲ್ಲಿ 5 ಲಕ್ಷ ಕೋಟಿ ರೂ. ಹೂಡಿಕೆ ನಿರೀಕ್ಷೆಯಲ್ಲಿದ್ದು, ಲಕ್ಷಾಂತರ ಉದ್ಯೋಗದ ದಿಡ್ಡಿ ಬಾಗಿಲು ತೆರೆಯಲಿದೆ.

ಈ ಮೂಲಕ ನಮ್ಮ ಸರ್ಕಾರ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಹೆಜ್ಜೆಯಿರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ಜಗತ್ತಿನ ಗಮನ ಕರ್ನಾಟಕದ ಕಡೆ ನೆಟ್ಟಿದೆ.

ಇದಕ್ಕೆ ಕಾರಣ ಬಿಜೆಪಿ ಸರ್ಕಾರನ. 2 ರಿಂದ 4ರವರೆಗೆ ಆಯೋಜಿಸಿರುವ ಬಂಡವಾಳ ಹೂಡಿಕೆದಾರರ ಸಮಾವೇಶ. ಈ ಬಾರಿ ಸುಮಾರು 5 ಲಕ್ಷ ಕೋಟಿ ಬಂಡಾವಳ ಹೂಡಿಕೆಯ ನಿರೀಕ್ಷೆಯಿದೆ. ಇದರಿಂದ ರಾಜ್ಯ ಕೈಗಾರಿಕೋದ್ಯಮಕ್ಕೆ ಭೀಮಬಲ ದೊರೆತ್ತಿದ್ದು, 5 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ : https://vijayatimes.com/kantara-towards-300-crore/

ಇನ್ನು ಬೆಂಗಳೂರಿನಲ್ಲಿ(Bengaluru) ನವೆಂಬರ್ 2 ರಿಂದ ನವೆಂಬರ್ 4 ರವರೆಗೆ ನಡೆಯುವ ಮೂರು ದಿನಗಳ ಕಾರ್ಯಕ್ರಮವು 80ಕ್ಕೂ ಹೆಚ್ಚು ಸ್ಪೀಕರ್ ಸೆಷನ್‌ಗಳಿಗೆ ಸಾಕ್ಷಿಯಾಗಲಿದೆ. ಸಭೆಯು ಭವಿಷ್ಯದ ಹೂಡಿಕೆದಾರರನ್ನು ಆಕರ್ಷಿಸಲು ಮತ್ತು ಮುಂದಿನ ದಶಕದ ಅಭಿವೃದ್ಧಿ ಕಾರ್ಯಸೂಚಿಯನ್ನು ಹೊಂದಿಸುವ ಗುರಿಯನ್ನು ಹೊಂದಿದೆ.

ಕುಮಾರ ಮಂಗಲಂ ಬಿರ್ಲಾ, ಸಜ್ಜನ್ ಜಿಂದಾಲ್ ಮತ್ತು ವಿಕ್ರಮ್ ಕಿರ್ಲೋಸ್ಕರ್ ಅವರಂತಹ ಉದ್ಯಮ ನಾಯಕರು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಅದೇ ರೀತಿ ಮುನ್ನೂರಕ್ಕೂ ಹೆಚ್ಚು ಪ್ರದರ್ಶಕರನ್ನು ಹೊಂದಿರುವ ಹಲವಾರು ವ್ಯಾಪಾರ ಪ್ರದರ್ಶನಗಳು ಮತ್ತು ದೇಶದ ಅಧಿವೇಶನಗಳು ಸಮಾನಾಂತರವಾಗಿ ನಡೆಯುತ್ತವೆ.

ಕರ್ನಾಟಕಕ್ಕೆ ಬಂಡವಾಳವನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಸಮಾವೇಶ ಅತ್ಯಂತ ಮಹತ್ವದ್ದಾಗಿದೆ. ಬೆಂಗಳೂರು ಹೊರತಾಗಿ ಬೇರೆಡೆ ಹೂಡಿಕೆ ಮಾಡ ಬಯಸುವ ಉದ್ಯಮಿಗಳಿಗೆ ವಿಶೇಷ ಸವಲತ್ತುಗಳನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

Exit mobile version