ಮೇ.12ರ ನಂತರ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್: ಎಸ್ ಸುರೇಶ್ ಕುಮಾರ್ ಸುಳಿವು

ಚಾಮರಾಜನಗರ, ಮೇ. 06: ರಾಜ್ಯದಲ್ಲಿ ನಿನ್ನೆ ಒಂದೇ ದಿನ ಅರ್ಧ ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ಸೋಂಕು ದೃಢಪಟ್ಟಿದೆ. ಕೊರೋನಾ ಕರ್ಪ್ಯೂ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಜಾರಿಯಾಗಿದ್ದರೂ, ಸೋಂಕಿನ ನಿಯಂತ್ರಣ ಯಾಕೆ ಆಗ್ತಾ ಇಲ್ಲ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರ ಮಧ್ಯೆ ಮೇ.12ರ ನಂತರ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ನಿರ್ಧಾರ ಕೈಗೊಳ್ಳುವ ಸುಳಿವನ್ನು ಶಿಕ್ಷಣ ಸಚಿವರು ನೀಡಿದ್ದಾರೆ.

ಈ ಕುರಿತಂತೆ ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ರಾಜ್ಯದಲ್ಲಿ ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಕೊರೋನಾ ಕರ್ಪ್ಯೂ ಜಾರಿಗೊಳಿಸಲಾಗಿದೆ. ಹೀಗಿದ್ದೂ ಸೋಂಕಿನ ನಿಯಂತ್ರಣ ಆಗ್ತಾ ಇಲ್ಲ. ಕಳೆದ 12 ದಿನಗಳಿಂದ ಕೊರೋನಾ ಸೋಂಕಿನ ನಿಯಂತ್ರಣ ಕ್ರಮಗಳು ಏನ್ ಆಗಿವೆ ಎನ್ನುವ ಬಗ್ಗೆ ಚರ್ಚಿಸಲಾಗುತ್ತದೆ ಎಂದರು.

ಮೇ.12ರ ನಂತರ ಕೊರೋನಾ ಕರ್ಪ್ಯೂ ಮುಂದುವರೆಯುತ್ತಾ ಎನ್ನುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕೊರೋನಾ ಕರ್ಪ್ಯೂ ಜಾರಿಯಾಗಿದ್ದರೂ ಸೋಂಕಿನ ಪ್ರಕರಣ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಮೇ.10ರಂದು ತಜ್ಞರ ಸಭೆ ನಡೆಯಲಿದೆ. ಆ ಸಭೆಯಲ್ಲಿ ಕೊರೋನಾ ಕರ್ಪ್ಯೂ ಜಾರಿಯಲ್ಲಿದ್ದರೂ ಸೋಂಕು ನಿಯಂತ್ರಣ ಏಕಾಗಿಲ್ಲ ಎನ್ನುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಕೊರೋನಾ ಕರ್ಪ್ಯೂ ಜಾರಿಗೊಳಿಸಿದ್ದರೂ ಕೊರೋನಾ ಕಂಟ್ರೋಲ್ ಆಗಿರದೇ ಇರೋದು ಕಂಡರೇ, ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಕೈಗೊಳ್ಳೋದೆ ಒಳ್ಳೇದು ಎನ್ನುವ ಚಿಂತನೆ ಇದೆ. ಆ ಬಗ್ಗೆ ಸಿಎಂ ಯಡಿಯೂರಪ್ಪ ಅವರು ತಜ್ಞರೊಂದಿಗೆ ಸಭೆ ನಡೆಸಿ, ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು. ಈ ಮೂಲಕ ರಾಜ್ಯದಲ್ಲಿ ಕೊರೋನಾ ಕರ್ಪ್ಯೂನಿಂದ ಕಂಟ್ರೋಲ್ ಆಗದ ಸೋಂಕಿನ ಪ್ರಕರಣವನ್ನು ಸಂಪೂರ್ಣ ಲಾಕ್ ಡೌನ್ ಮಾಡುವ ಮೂಲಕ ನಿಯಂತ್ರಣ ಮಾಡೋ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂಬ ಸುಳಿವನ್ನು ಶಿಕ್ಷಣ ಸಚಿವರು ನೀಡಿದ್ದಾರೆ.

Exit mobile version