ಸೋನಿಯಾ ಗಾಂಧಿ ಸಾಥ್‌ ; ಮಂಡ್ಯದಲ್ಲಿ ಭರದಿಂದ ಸಾಗುತ್ತಿರುವ ಭಾರತ್‌ ಜೋಡೋ ಯಾತ್ರೆ

Congress

Mandya : ಕರ್ನಾಟಕ ದ (Karnataka) ಮಂಡ್ಯ (Mandya) ಜಿಲ್ಲೆಯಲ್ಲಿ ಇಂದು ಭಾರತ್ ಜೋಡೋ ಯಾತ್ರೆ(Bharat Jodo Yatra) ಪುನರಾರಂಭಗೊಂಡಾಗ ಕಾಂಗ್ರೆಸ್ (Congress) ಮುಖ್ಯಸ್ಥೆ ಸೋನಿಯಾ ಗಾಂಧಿ (Sonia Gandhi) ಅವರು ಪುತ್ರ ರಾಹುಲ್ ಗಾಂಧಿ (Rahul Gandhi) ಅವರ ಜೊತೆಗೆ ಹೆಜ್ಜೆ ಹಾಕಿದರು.

Rahul Gandhi

ಈ ವೇಳೆ ಸಾವಿರಾರೂ ಸಂಖ್ಯೆಯ ಕಾಂಗ್ರೆಸ್‌ ಕಾರ್ಯಕರ್ತರು ಸೋನಿಯಾ ಗಾಂಧಿ ಅವರಿಗೆ ಜೈಕಾರ ಹಾಕಿ, ಸ್ವಾಗತ ಕೋರಿದರು.

ಇದೇ ವೇಳೆ ಸೋನಿಯಾ ಗಾಂಧಿ ಅವರೊಂದಿಗೆ ಕಾಂಗ್ರೆಸ್‌ನ ಮಹಿಳಾ ಶಾಸಕಿರಾದ ಅಂಜಲಿ ನಿಂಬಾಳ್ಕರ್, ರೂಪಕಲಾ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಪಾಲ್ಗೊಂಡಿದ್ದರು.

ಇನ್ನು ಇಂದಿನ ಯಾತ್ರೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕೊನೆಗೊಳ್ಳಲಿದ್ದು, ಬಳಿಕ ಬ್ರಹ್ಮದೇವರಹಳ್ಳಿ ಗ್ರಾಮದಲ್ಲಿ ಸಭೆ ನಡೆಯಲಿದೆ.

ನಾಗಮಂಗಲ (Nagamangala) ತಾಲೂಕಿನ ಸರಕಾರಿ ಆಯುರ್ವೇದಿಕ್ ಆಸ್ಪತ್ರೆ ಎದುರಿನ ಮಡಕೆ ಹೊಸೂರು ಗೇಟ್ ಬಳಿ ಕಾಂಗ್ರೆಸ್‌ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಸರ್ಕಾರದ(BJP Government) ವಿರುದ್ದ ಪ್ರತಿಭಟನೆ ನಡೆಸಲಿದ್ದಾರೆ.

ಇದನ್ನೂ ಓದಿ : https://vijayatimes.com/loan-app-harrasment-techie-dies/

ಈ ಕುರಿತು ಟ್ವೀಟ್‌ (Tweet) ಮಾಡಿರುವ ರಾಜ್ಯ ಕಾಂಗ್ರೆಸ್‌ (State Congress), “ಭರವಸೆ, ಪ್ರೀತಿ ಮತ್ತು ವಿಜಯದ ಪಯಣ, ಭಾರತ ಜೋಡೋ ಯಾತ್ರೆಗೆ ಸ್ಪೂರ್ತಿಯಾಗಿದೆ.

ಯಾತ್ರೆ ಇಂದು ಪಾಂಡವಪುರ ತಾಲೂಕಿನಿಂದ ಪುನರಾರಂಭಗೊಂಡು ನಾಗಮಂಗಲ ತಾಲೂಕಿನಲ್ಲಿ ಕೊನೆಗೊಳ್ಳಲಿದೆ” ಎಂದು ಬರೆದುಕೊಂಡಿದೆ.

ಭಾರತ್ ಜೋಡೋ ಯಾತ್ರೆಯು ಸೆಪ್ಟೆಂಬರ್ 7 ರಂದು ತಮಿಳುನಾಡಿನ (Tamilnadu) ಕನ್ಯಾಕುಮಾರಿಯಿಂದ ಪ್ರಾರಂಭವಾಗಿ, ಕೇರಳದ(Kerala) ಮೂಲಕ ಸಾಗಿ,

ಚಾಮರಾಜನಗರ (Chamrajnagar) ಜಿಲ್ಲೆಯ ಗುಂಡ್ಲುಪೇಟೆ ಮೂಲಕ ರಾಜ್ಯವನ್ನು ಪ್ರವೇಶಿಸಿತು.

Sonia Gandhi

ಯಾತ್ರೆಯು ಕರ್ನಾಟಕದಲ್ಲಿ 21 ದಿನಗಳ ಕಾಲ ಸಾಗಲಿದ್ದು, ಒಟ್ಟು 511 ಕಿ.ಮೀ. ಯಾತ್ರೆಯು ಚಾಮರಾಜನಗರ, (Congress Bharat Jodo Yatra) ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸಾಗಲಿದೆ.

ಇನ್ನು ವೈದ್ಯಕೀಯ ತಪಾಸಣೆಗಾಗಿ ವಿದೇಶದಲ್ಲಿರುವ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಸೋಮವಾರ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕಕ್ಕೆ ಆಗಮಿಸಿದ್ದರು.

https://fb.watch/fZ7jzHCiMl/

ಈ ವೇಳೆ ಕಬಿನಿ ಹಿನ್ನೀರಿನಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಎರಡು ದಿನಗಳ ಕಾಲ ವಿಶ್ರಾಂತಿ ಪಡೆದುಕೊಂಡಿದ್ದರು. ಇದೀಗ ಇಂದಿನಿಂದ ಮಂಡ್ಯ ಜಿಲ್ಲೆಯಲ್ಲಿ ಸಾಗುತ್ತಿರುವ ಭಾರತ್‌ ಜೋಡೋ ಯಾತ್ರೆಯಲ್ಲಿ ಎರಡು ದಿನಗಳ ಕಾಲ ಪಾಲ್ಗೊಳ್ಳುವ ಸಾಧ್ಯತೆ ಇದೆ.
Exit mobile version