ಹೋರಾಟಗಳ ತವರೂರಾಗಿದ್ದ ಶಿವಮೊಗ್ಗ ಇಂದು ಮಾದಕ ವ್ಯಸನಿಗಳ ಅಡ್ಡೆಯಾಗಿದೆ : ಕಾಂಗ್ರೆಸ್‌

BJP

ಗೃಹಸಚಿವರ(HomeMinister) ತವರು ಜಿಲ್ಲೆಯ ಕಾಲೇಜುಗಳ ಕ್ಯಾಂಪಸ್ ಒಳಗೆ ಮಾದಕ ವ್ಯಸನದ ಗಬ್ಬು ವಾಸನೆ ನಾರುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿರುವುದೇಕೆ? ಇದರಲ್ಲೂ 40% ಹೊಡೆದುಕೊಳ್ಳೋಣ ಎಂಬ ನೀಚತನವೇ? ಹೋರಾಟಗಳ ತವರೂರಾಗಿದ್ದ ಶಿವಮೊಗ್ಗ(Shivmogga) ಇಂದು ಮಾದಕ ವ್ಯಸನಿಗಳ ಅಡ್ಡೆಯಾಗಿದೆ ಎಂದು ವಿಪಕ್ಷ ಕಾಂಗ್ರೆಸ್‌(Congress) ಗಂಭೀರ ಆರೋಪ ಮಾಡಿದೆ.


ಈ ಕುರಿತು ಟ್ವೀಟರ್‌ನಲ್ಲಿ(Tweeter) ವಿಡಿಯೋ(Video) ಅನ್ನು ಹಂಚಿಕೊಂಡಿರುವ ರಾಜ್ಯ ಕಾಂಗ್ರೆಸ್‌(State Congress), ರಾಜ್ಯದಲ್ಲಿ ಮಾದಕ ದ್ರವ್ಯ ಎಲ್ಲೆಡೆ ಕಂಡು ಬರುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರ(State Government) ಸೂಕ್ತ ಕ್ರಮಕೈಗೊಂಡಿಲ್ಲ. ಹೀಗಾಗಿ ದೇಶವನ್ನು ಕಟ್ಟಬೇಕಾದ ಯುವಕರು ಮಾದಕ ವ್ಯಸನದ ದಾಸರಾಗುತ್ತಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಅವರೇ ಮಕ್ಕಳ ಭವಿಷ್ಯದ ಬದುಕಿಗೆ ಕೊಳ್ಳಿ ಇಡುವ ಈ ಮಾದಕ ವ್ಯಸನದ ವಿರುದ್ಧ ಕ್ರಮಕೈಗೊಳ್ಳಿ ಇಲ್ಲವಾದರೆ ರಾಜೀನಾಮೆ(Resign) ಕೊಟ್ಟು ಹೊರಹೋಗಿ.

ಹೋರಾಟಗಳ ತವರೂರಾಗಿದ್ದ ಶಿವಮೊಗ್ಗ ಇಂದು ಮಾದಕ ವ್ಯಸನಿಗಳ ಅಡ್ಡೆಯಾಗಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.
ಅದಾನಿಯ ಬಂದರಲ್ಲಿ 3000 ಟನ್ ಮಾದಕವಸ್ತು ಸಿಕ್ಕಿದರೂ ಸರಿಯಾದ ತನಿಖೆ ನಡೆಸದೆ ಕೈತೊಳೆದುಕೊಂಡಿದ್ದು, ಬಿಜೆಪಿಯ ಹೊಣೆಗೇಡಿತನಕ್ಕೆ ಹಿಡಿದ ಕೈಗನ್ನಡಿ. ಮಾದಕ ವ್ಯಸನ, ಕೋಮು ಸಂಘರ್ಷಕ್ಕೆ ಯುವ ಸಮೂಹವನ್ನು ತಳ್ಳುವ ಮೂಲಕ ಬಿಜೆಪಿ ಈ ದೇಶದ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದೆ. ರಾಜ್ಯದಲ್ಲಿ ಡ್ರಗ್ಸ್‌(Drugs) ಹಾವಳಿ ಹೆಚ್ಚಾಗಿದ್ದು, ಹಳ್ಳಿಹಳ್ಳಿಗಳಿಗೆ ಮಾದಕ ದ್ರವ್ಯ ಕಾಲಿಟ್ಟಿದೆ.

ಆದರೆ ಗೃಹ ಸಚಿವರಿಗೆ ಮಾತ್ರ ಇದರ ವಾಸನೆ ಬಡಿದಿಲ್ಲ. ಎಲ್ಲ ಕಾಲೇಜುಗಳಲ್ಲೂ ಈಗ ಮಾದಕ ದ್ರವ್ಯ ಅತ್ಯಂತ ಸುಲಭವಾಗಿ ಲಭ್ಯವಾಗುತ್ತಿದೆ ಎಂದಿರುವ ಕಾಂಗ್ರೆಸ್‌, ಡ್ರಗ್ಸ್‌ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದೆ.

Exit mobile version