ಗೃಹಲಕ್ಷ್ಮೀ ಯೋಜನೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂಬ ಸುಳ್ಳು ಸುದ್ದಿ : ಸೈಬರ್ ಕೇಂದ್ರಗಳಿಗೆ ಮುಗಿಬಿದ್ದ ಮಹಿಳೆಯರು

KGF : ಕಾಂಗ್ರೆಸ್‌ನ (Congress) ಐದು ಖಾತರಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ (Grilahakshmi Yojana) ಲಾಭ ಪಡೆಯಲು ಮೇ 31 ರೊಳಗೆ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಗಳನ್ನು ಲಿಂಕ್ (Congress Gruhalakshmi scheme) ಮಾಡಬೇಕು ಎಂಬ ಸಾಮಾಜಿಕ ಮಾಧ್ಯಮದ ಸುಳ್ಳು ಸುದ್ದಿಗಳನ್ನು ನಂಬಿ ನಗರದ ಹಲವಾರು ಸೈಬರ್ ಕೇಂದ್ರಳಿಗೆ ಮಹಿಳೆಯರು ಮುಗಿಬಿದ್ದಿರುವ ಘಟನೆ ಕೋಲಾರದ ಅನೇಕ ಕಡೆ ನಡೆಯುತ್ತಿದೆ.

ಈ ಸುಳ್ಳು ಸುದ್ದಿಯನ್ನೇ ಬಂಡವಾಳ ಮಾಡಿಕೊಂಡಿರುವ ಕೋಲಾರದ ಸೈಬರ್ ಸೆಂಟರ್‌ನ ಮಾಲೀಕರು ಈ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಗಳನ್ನು ಲಿಂಕ್ ಮಾಡಲು 250 ರಿಂದ 300 ರೂ.ವರೆಗೆ ವಸೂಲಿ ಮಾಡುತ್ತಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಚ್.ಶ್ರೀನಿವಾಸ್ ರಾಬರ್ಚ್‌ಸನ್‌ಪೇಟೆ ಇಂಟರ್‌ನ್ಯಾಶನಲ್ ಆನ್‌ಲೈನ್ (H. Srinivas Robertsonpet International Online) ಮತ್ತು ಜೆ.ಪಿ ನೆಟ್‌ವರ್ಕ್ಸ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

ಅಲ್ಲದೆ ಸರ್ಕಾರ ಇಂಥಾ ಯಾವುದೇ ಆದೇಶ ಹೊರಡಿಸಿಲ್ಲ. ಜನ ಇಂಥಾ ಸುಳ್ಳು ಸುದ್ದಿಗಳನ್ನು ನಿರ್ಲಕ್ಷಿಸಬೇಕು ಎಂದು ತಹಸೀಲ್ದಾರ್ ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು (Congress Gruhalakshmi scheme) ಮಾಹಿತಿ ಹಬ್ಬಿಸಿದ ಕೆಜಿಎಫ್ ಸೈಬರ್

ಸೆಂಟರ್ ಮಾಲೀಕರ ವಿರುದ್ಧ ರಾಬರ್ಚ್‌ಸನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಕಠಿಣ ಕ್ರಮದ ಭರವಸೆ ನೀಡಿದ್ದಾರೆ.

ಇದನ್ನೂ ಓದಿ : https://vijayatimes.com/new-congress-govt-2023/

ಸುದ್ದಿ ಹಬ್ಬಿದ್ದು ಹೇಗೆ?

ಕಾಂಗ್ರೆಸ್‌ನ ಐದು ಭರವಸೆಗಳನ್ನು ಪಡೆಯಲು ಆಧಾರ್ ಕಾರ್ಡ್ (Aadhaar Card) ಮತ್ತು ಪಡಿತರ ಚೀಟಿಗಳನ್ನು (ID Card) ಲಿಂಕ್ ಮಾಡಲು ಮೇ 31 ಕೊನೆಯ ದಿನಾಂಕ ಎಂದು ಸೈಬರ್ ಸೆಂಟರ್ ಮುಖ್ಯಸ್ಥರು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹಬ್ಬಿಸಿದ್ದಾರೆ.

ಈ ಸುದ್ದಿಯನ್ನು ನಂಬಿದ ಮಹಿಳೆಯರು ಕೇವಲ 50 ರೂಪಾಯಿಗೆ ಆಧಾರ್ ಮತ್ತು ಪಡಿತರ ಚೀಟಿ ಪಡೆಯಲು ಕೆಜಿಎಫ್ ನ ಸೈಬರ್ ಸೆಂಟರ್ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು.

ಆ ಬಳಿಕ ಜನಜಂಗುಳಿ ಹೆಚ್ಚಾದ ತಕ್ಷಣ ಈ ಸೈಬರ್‌ ಸೆಂಟರ್‌ನವರು ಜನರಿಂದ 250 ರಿಂದ 300 ರೂಪಾಯಿ ವಸೂಲಿ ಮಾಡಲು ಪ್ರಾರಂಭಿಸಿದರು.

ಸೈಬರ್‌ ಸೆಂಟರ್‌ನ ಮೇಲೆ ದಾಳಿ:

ನಗರದ ಸೈಬರ್ ಹಬ್ ಮೇಲೆ ತಹಸೀಲ್ದಾರ್ ಎಚ್.ಶ್ರೀನಿವಾಸ್ (Tehsildar H. Srinivas) ಹಾಗೂ ಸಿಬ್ಬಂದಿ ದಾಳಿ ನಡೆಸಿದರು.

ಅಲ್ಲದೆ ಸುಳ್ಳು ಸುದ್ದಿಗಳಿಗೆ ಕಿವಿಗೊಡದಂತೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು. ಜೊತೆಗೆ ಸರಕಾರ ಇಂಥಾ ಯಾವುದೇ ಆದೇಶ ಹೊರಡಿಸಿಲ್ಲ. ಆಧಾರ್ ಮತ್ತು ಪಡಿತರ ಚೀಟಿಗಳನ್ನು ಲಿಂಕ್ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

Exit mobile version