ಉತ್ತರ ಪ್ರದೇಶದ ಮಾಜಿ ಉಪ ಮುಖ್ಯಮಂತ್ರಿಗೆ ಕಾಂಗ್ರೆಸ್ ಆಹ್ವಾನ! ; ಪಕ್ಷೇತರ ನಾಯಕರನ್ನು ಕಾಂಗ್ರೆಸ್‌ ಆಹ್ವಾನಿಸಿದ್ದೇಕೆ ಎಂದು ನೆಟ್ಟಿಗರ ಪ್ರಶ್ನೆ?

Uttar Pradesh : ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ ಯಾತ್ರೆ’(Congress invites to DCM) ಇದೇ 2023 ಜನವರಿ 3 ರಂದು ಸುಮಾರು 3,000 ಕಿ.ಮೀ. ಕ್ರಮಿಸಿ,

ಉತ್ತರ ಪ್ರದೇಶವನ್ನು ಪ್ರವೇಶಿಸಲಿರುವ ಕಾರಣ ಅಖಿಲೇಶ್‌ ಯಾದವ್‌, ಜಯಂತ್‌ ಚೌಧರಿ ಅವರನ್ನು ಯಾತ್ರೆಗೆ ಸೇರುವಂತೆ ಕಾಂಗ್ರೆಸ್‌ ಪಕ್ಷ ಆಹ್ವಾನಿಸಿದೆ.

ಗ್ರ್ಯಾಂಡ್ ಓಲ್ಡ್ ಪಾರ್ಟಿಯು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav), ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಮತ್ತು

ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಜಯಂತ್ ಚೌಧರಿ (Jayant Chaudhary) ಸೇರಿದಂತೆ ಹಲವಾರು ಭಾರತೀಯ ಜನತಾ ಪಕ್ಷೇತರ ನಾಯಕರನ್ನು ಆಹ್ವಾನಿಸಿದೆ.

ಆದರೆ, ಯೋಗಿ ಆದಿತ್ಯನಾಥ್ (Yogi Adityanath) ಮುಖ್ಯಮಂತ್ರಿಯಾದ ಮೊದಲ ಅವಧಿಯಲ್ಲಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ದಿನೇಶ್ ಶರ್ಮಾ ಅವರಿಗೂ ಆಹ್ವಾನ ನೀಡಲಾಗಿದೆ ಎಂಬುದು ಸದ್ಯ ಅನೇಕರಲ್ಲಿ ಕುತೂಹಲ ಕರಳಿಸಿದೆ.

ಲಕ್ನೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರುವ ಶರ್ಮಾ ಅವರನ್ನು ಕಾಂಗ್ರೆಸ್ ಭಾರತ್‌ ಜೋಡೋ ಯಾತ್ರೆಗೆ ಆಹ್ವಾನಿಸಲಾಗಿದೆ ಎಂದು ಪಿಟಿಐ (Congress invites to DCM) ವರದಿ ಮಾಡಿದೆ.

ಇದನ್ನೂ ಓದಿ : https://vijayatimes.com/weight-loss-tips/

ಇನ್ನು ಈ ಬಗ್ಗೆ ಸ್ವತಃ ಅವರನ್ನೇ ಪ್ರಶ್ನಿಸಿದಾಗ, ಮಾಧ್ಯಮ ವರದಿಗಳ ಮೂಲಕ ಆಹ್ವಾನದ ಬಗ್ಗೆ ನನಗೆ ತಿಳಿದಿದೆ ಎಂದು ಬಿಜೆಪಿ (BJP) ನಾಯಕ ಹೇಳಿದರು. ರಾಹುಲ್ ಗಾಂಧಿಯವರ ಪ್ರಸ್ತಾಪವನ್ನು ತಿರಸ್ಕರಿಸಿದ ಶರ್ಮಾ,

“ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಸ್ತೆಗಳ ನಿರ್ಮಾಣ ಮತ್ತು ಇತರ ಅಭಿವೃದ್ಧಿ ಪ್ರಯತ್ನಗಳ ಮೂಲಕ ಭಾರತವನ್ನು ಸಂಪರ್ಕಿಸಲು ನೈಜ ಪ್ರಯತ್ನಗಳನ್ನು ಮಾಡುತ್ತಿದ್ದಾರೆ”.

‘ಭಾರತ್ ತೋಡೋ’ಯಲ್ಲಿ ತೊಡಗಿರುವವರು ‘ಭಾರತ್ ಜೋಡೋ ಯಾತ್ರೆ’ ಕೈಗೊಳ್ಳುತ್ತಿದ್ದಾರೆ ಎಂದು ಅವರು ಯಾತ್ರೆಯನ್ನು

ಖಂಡಿಸಿ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ಯಾತ್ರೆಯು ಪ್ರಸ್ತುತ ರಾಷ್ಟ್ರ ರಾಜಧಾನಿಯಲ್ಲಿ ಒಂಬತ್ತು ದಿನಗಳ ಚಳಿಗಾಲದ ವಿರಾಮದಲ್ಲಿದ್ದು,

ಇದನ್ನೂ ಓದಿ : https://vijayatimes.com/list-of-iifa-awards/

ಸೋಮವಾರ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ ಸಮಾಧಿಯಲ್ಲಿ ರಾಹುಲ್ ಗಾಂಧಿ ಶ್ರದ್ಧಾಂಜಲಿ ಸಲ್ಲಿಸಿದರು. ಮಹಾತ್ಮ ಗಾಂಧಿ,

ಪಂಡಿತ್ ಜವಾಹರ್ ಲಾಲ್ ನೆಹರು, ರಾಜೀವ್ ಗಾಂಧಿ, ಇಂದಿರಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಚೌಧರಿ ಚರಣ್ ಸಿಂಗ್ ಅವರ ಸ್ಮಾರಕಗಳಿಗೂ ಭೇಟಿ ನೀಡಿದರು.

ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ವಯನಾಡ್ ಸಂಸದರ ಇಂಗಿತವನ್ನು ಪ್ರತಿಪಕ್ಷ ನಾಯಕರು ಶ್ಲಾಘಿಸಿದರೆ,

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಕಾಂಗ್ರೆಸ್‌ಗೆ ಸೇರಿದ ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರ ಸಮಾಧಿಗೆ ಭೇಟಿ ನೀಡಬೇಕಿತ್ತು ಯಾಕೆ ನೀಡಲಿಲ್ಲ ಎಂದು ಪ್ರಶ್ನೆಯ ಮುಖೇನ ತಿರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿ ಅವರಿಗೆ ಪ್ರಾಮಾಣಿಕತೆ ಇದ್ದರೆ ಹೈದರಾಬಾದ್‌ (Hyderabad) ನಲ್ಲಿರುವ ನರಸಿಂಹರಾವ್ ಅವರ ಸಮಾಧಿಗೂ ಭೇಟಿ ನೀಡಬೇಕಿತ್ತು.
ಅದು ಅವರ ದಾರಿಯಲ್ಲಿದ್ದರೂ ಅವರು ಮಾಡಲಿಲ್ಲ ಎಂದು ಮಾಲ್ವಿಯಾ ಟ್ವೀಟ್ ಮಾಡಿ, ಆರೋಪಿಸಿದ್ದಾರೆ.
Exit mobile version