ಬೆಂಗಳೂರು : ರಾಜ್ಯ ಸರ್ಕಾರದ ಐದು ಭರವಸೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯನ್ನು(congress Protest central government) ಜುಲೈ 1 ರಿಂದ ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ಯೋಜಿಸಿತ್ತು.
ಆದರೆ, ಕೇಂದ್ರ ಸರ್ಕಾರ ಈ ಯೋಜನೆಗೆ ಅಕ್ಕಿ ನೀಡಲು ನಿರಾಕರಿಸಿದೆ. ಇದರಿಂದ ಜುಲೈ 1ರಂದು ಈ ಯೋಜನೆ ಜಾರಿಯಾಗುವ ಸಾಧ್ಯತೆ ಅನಿಶ್ಚಿತವಾಗಿದ್ದು,
ರಾಜ್ಯ ಸರ್ಕಾರ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಲು (congress Protest central government) ಮುಂದಾಗಿದೆ.

ಕೇಂದ್ರ ಸರ್ಕಾರವು(Central Government) ಹೆಚ್ಚುವರಿ ಅಕ್ಕಿ ಪೂರೈಸಲು ನಿರಾಕರಣೆ ಮಾಡುತ್ತಿದ್ದು, ಹಾಗಾಗಿ ನಾಳೆ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಕೇಂದ್ರದ ನಡೆ ಖಂಡಿಸಿ ಪ್ರತಿಭಟನೆ ಮಾಡುತ್ತೇವೆ.
ನಗರದ ಪ್ರತಿಭಟನೆಯಲ್ಲಿ ನಾನು ಕೂಡ ಭಾಗಿಯಾಗುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್(D K Shiva Kumar) ಹೇಳಿದರು.
ಇದನ್ನೂ ಓದಿ : ಇಂದಿರಾ ಕ್ಯಾಂಟೀನ್ ಊಟದ ಮೆನು ಬದಲಾವಣೆ : ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ
ನಾಳೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಸದಾಶಿವನಗರದಲ್ಲಿ(Sadashiv Nagar) ಮಾತನಾಡಿದ ಅವರು, ಕೇಂದ್ರವು ಬಡವರಿಗೆ ಅಕ್ಕಿ ನೀಡದೆ ತೊಂದರೆ ನೀಡಲು ಹೊರಟಿದೆ.
ಅವರು ಅಕ್ಕಿ ಕೊಡಲು ಕೆಲವೊಂದು ನಿಯಮ, ಪದ್ಧತಿಗಳು ಇದೆ, ಅವರು ಪುಕ್ಕಟೆ ಏನು ಕೊಡಲ್ಲ ಎಂದಿದ್ದಾರೆ. ಎಲ್ಲಾ ಸಚಿವರು ಹೈಕಮಾಂಡ್ ಭೇಟಿಗೆ ಸಮಯ ಕೇಳಿದ್ದೇವೆ. ಎಲ್ಲಾ ಸಚಿವರು ಸಮಯ ನೀಡಿದರೆ ಹೈಕಮಾಂಡ್ ಭೇಟಿಯಾಗುತ್ತೇವೆ.

ಬಡವರಿಗೆ ದ್ರೋಹ ಮಾಡುವ ಪಾರ್ಟಿ ಬಿಜೆಪಿ
ಬಡವರ ಹೊಟ್ಟೆ ಮೇಲೆ ಭಾರತೀಯ ಜನತಾ ಪಕ್ಷ(BJP) ಹೊಡೆದಿದೆ. ಬಡವರಿಗೆ ದ್ರೋಹ ಮಾಡುವ ಪಾರ್ಟಿ ಎಂದರೆ ಅದು ಬಿಜೆಪಿಪಕ್ಷ. ಭಾರತೀಯ ಜನತಾ ಪಕ್ಷದ ಈ ನಿರ್ಧಾರಕ್ಕೆ ನಾವು ಧಿಕ್ಕಾರ ಹೇಳುತ್ತಿದ್ದೇವೆ.
ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಹೀಗಾಗಿ ಪ್ರತಿಭಟನೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಆಹಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ದೂರವಾಣಿ ಕರೆಗಳ ಮೂಲಕ ಅಕ್ಕಿ ವೆಚ್ಚ, ಸಾಗಾಣಿಕೆ ವೆಚ್ಚ ಸೇರಿದಂತೆ ಮಾಹಿತಿ ಸಂಗ್ರಹಿಸಿ ಸಿಎಂ ಸಿದ್ದರಾಮಯ್ಯ(Siddaramaiah) ಅವರಿಗೆ ಮಾಹಿತಿ ನೀಡಿದ್ದಾರೆ.
ಆಹಾರ ಇಲಾಖೆಯು ಈಗಾಗಲೇ ಅಕ್ಕಿಯ ಲಭ್ಯತೆಯ ಬಗ್ಗೆ ಪ್ರಾಥಮಿಕ ವರದಿಗಳನ್ನು ಸರ್ಕಾರಕ್ಕೆ ನೀಡಿದೆ. ಪ್ರತಿ ತಿಂಗಳು ರಾಜ್ಯದ ನಾಗರಿಕರಿಗೆ ಉಚಿತ ಅಕ್ಕಿ ವಿತರಿಸಲು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿದೆ.
ಅನ್ನಭಾಗ್ಯ ಯೋಜನೆ ಪ್ರಸ್ತುತ ರಾಜ್ಯ ಸರ್ಕಾರಕ್ಕೆ ಮಹತ್ವದ ಸವಾಲಾಗಿದೆ.

ಅನ್ನಭಾಗ್ಯ ಅನುಷ್ಠಾನದ ಸುತ್ತಲಿನ ಸಮಸ್ಯೆಗಳನ್ನು ಪರಿಹರಿಸಲು, ರಾಜ್ಯ ಆಹಾರ ಇಲಾಖೆಯು ಪಂಜಾಬ್, ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳನ್ನು ಸಂಪರ್ಕ ಮಾಡಿದೆ.
ರಶ್ಮಿತಾ ಅನೀಶ್