ಬೆಂಗಳೂರು : ಸಿದ್ದರಾಮಯ್ಯ (Indira canteen menu change) ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಈ ಹಿಂದೆ ನಡೆದ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು
ಅಧಿಕಾರಕ್ಕೆ ಬಂದ ಕೂಡಲೇ ಇಂದಿರಾ ಕ್ಯಾಂಟೀನ್ (Indira Canteen) ಬಲಪಡಿಸುವುದಾಗಿ ಹೇಳಿದ್ದರು.ಅದರಂತೆ ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಇಂದಿರಾ ಕ್ಯಾಂಟೀನ್‌ನಲ್ಲಿ
ಗುಣಮಟ್ಟದ ಶುಚಿ-ರುಚಿ ಊಟ ನೀಡಲು ನಿರ್ಧಾರ ಮಾಡಲಾಗಿದೆ ಜೊತೆಗೆ ಊಟದ ಮೆನು ಬದಲಾವಣೆ ಮಾಡಲು (Indira canteen menu change) ಸಹ ನಿರ್ಧಾರಿಸಲಾಗಿದೆ.

ಕಾಂಗ್ರೆಸ್ ಸರ್ಕಾರದಿಂದ ಇಂದಿರಾ ಕ್ಯಾಂಟೀನ್ ನಲ್ಲಿ ಹೊಸ ಐಟಂಗಳ ಸೇರ್ಪಡೆ ಮಾಡಲು ತೀರ್ಮಾನ ಮಾಡಲಾಗಿದೆ. ಬೆಳಗ್ಗೆ ತಿಂಡಿ ಮೆನುವಿನಲ್ಲಿ ಮಂಗಳೂರು ಬನ್ಸ್ (Mangalore Buns) ಮತ್ತು
ಬ್ರೆಡ್ ಜಾಮ್ (Bread Jam)ನೀಡಲು ಕೂಡ ತೀರ್ಮಾನಿಸಲಾಗಿದೆ.ಇನ್ನು ಮಧ್ಯಾಹ್ನದ ಊಟದಲ್ಲಿ ಮಂಡ್ಯ (Mandya) ಜಿಲ್ಲೆಯಲ್ಲಿ ಪ್ರಸಿದ್ಧವಾದ ಮುದ್ದೆ, ಸೊಪ್ಪು ಸಾರು ನೀಡಲು ನಿರ್ಧಾರಿಸಲಾಗಿದೆ.
ಅಷ್ಟೇ ಅಲ್ಲದೆ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ ಊಟದಲ್ಲಿ ಸಿಗಲಿದೆ ಸಿಹಿ ತಿಂಡಿ ಅಥವಾ ಒಂದು ಸಿಹಿ ಪಾಯಸ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಆದ್ದರಿಂದ ಮಧ್ಯಾಹ್ನ ದಿನ ಬಿಟ್ಟು ದಿನ ಮುದ್ದೆ ಊಟ ಒದಗಿಸುವ ಕುರಿತು ನಿರ್ಧಾರ ಮಾಡಲಾಗಿದೆ.ಮುದ್ದೆ ಇಲ್ಲದ ದಿನದಂದು ಚಪಾತಿ (Chapati), ಸಾಗು ಊಟ ನೀಡಲು ಹೊಸ ಮೆನು ಮೂಲಕ ಯೋಜನೆ
ನಿರೂಪಿಸಲಾಗಿದೆ.ಆದ್ದರಿಂದ ಬಿಬಿಎಂಪಿ(BBMP) ಯು ಇಂದಿರಾ ಕ್ಯಾಂಟಿನ್‌ನಲ್ಲಿ ಮಧ್ಯಾಹ್ನದ ಊಟದಲ್ಲಿ ಪಾಯಸವನ್ನು ನೀಡಲು ಮೆನು ಪಟ್ಟಿಯಲ್ಲಿ ಹೊಸದಾಗಿ ಪಾಯಸವನ್ನು ಸೇರ್ಪಡೆ ಮಾಡಿದೆ.
ಈ ಹೊಸ ಮೆನುವಿನಲ್ಲಿರುವ ಊಟವನ್ನು ಕೊಡಲು ಊಟ ಒದಗಿಸುವ ಏಜೆನ್ಸಿಗಳು ಫೈನಲ್ ಆಗುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು ಹೊಸ ಮೆನು ಪ್ರಕಾರ ಊಟ ಜಾರಿಗೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಅಕ್ಕಿ ಪಾಲಿಟಿಕ್ಸ್: ಅನ್ನಭಾಗ್ಯಕ್ಕೆ ಅಕ್ಕಿ ಕೊಡಲು ಕೇಂದ್ರ ನಿರಾಕರಣೆ : ಅಕ್ಕಿಗಾಗಿ ಅನ್ಯ ರಾಜ್ಯಗಳ ಮೊರೆ
ಬೆಳಗ್ಗಿನ ತಿಂಡಿಗಳು: ಖಾರಾಬಾತ್, ಇಡ್ಲಿ, ಪುಳಿಯೊಗರೆ, ಚಿತ್ರಾನ್ನ, ಪೊಂಗಲ್ ರವಾ ಕಿಚಡಿ, , ವಾಂಗಿಬಾತ್ & ಕೇಸರಿಬಾತ್ ನೀಡಲಾಗುತ್ತಿತ್ತು. ಬ್ರೆಡ್ ಜಾಮ್ ಮತ್ತು ಮಂಗಳೂರು ಬನ್ಸ್ ಅನ್ನು ಈಗ ಅದಕ್ಕೆ ಹೊಸ
ಸೇರ್ಪಡೆಯಾಗಿ ನೀಡಲು ತೀರ್ಮಾನ ಮಾಡಲಾಗಿದೆ. ಇನ್ನು ಬೆಳಗ್ಗಿನ ತಿಂಡಿಗೆ ಕೇವಲ 5 ರೂ.ಬೆಂಗಳೂರಿನಲ್ಲಿ ಈವರೆಗೆ ಇದ್ದು, ಅದನ್ನು ರೂ.10ಕ್ಕೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ.
ಆಯಾ ಶೈಲಿಯ ತಿಂಡಿಯನ್ನು ಒಟ್ಟಾರೆ ರಾಜ್ಯದ ಎಲ್ಲ ಪ್ರಾದೇಶಿಕ ವಿಭಾಗಗಳ ಜನರಿಗೂ ಅನುಕೂಲ ಆಗುವಂತೆ ಕೊಡಲು ತೀರ್ಮಾನಿಸಲಾಗಿದೆ.

ಮಧ್ಯಾಹ್ನದ ಊಟ: ಇನ್ನು ಮಧ್ಯಾಹ್ನ ಊಟಕ್ಕೆ ಸದ್ಯ 10 ರೂ. ಬೆಲೆಯಿದೆ. ಇನ್ನು ಈವರೆಗೂ ಊಟದಲ್ಲಿ ಮೊಸರನ್ನ, ಅನ್ನ, ತರಕಾರಿ ಸಾಂಬಾರ್ ಮಾತ್ರ ನೀಡಲಾಗುತ್ತಿತ್ತು.
ಇನ್ನು ಅದರ ಜೊತೆಗೆ ಹೊಸದಾಗಿ ದಿನ ಬಿಟ್ಟು ದಿನ ಮುದ್ದೆ, ಸೊಪ್ಪುಸಾರು ಊಟ, ಸಿಹಿ ಪಾಯಸ ಹಾಗೂ ಮುದ್ದೆ ಇಲ್ಲದ ದಿನ ಚಪಾತಿ, ಸಾಗು ನೀಡಲು ಮೆನು ಸಿದ್ಧಪಡಿಸಲಾಗಿದೆ.
ಬಡವರಿಗೆ ಹೊಟ್ಟೆತುಂಬ ಇಷ್ಟವಾದ ಆಹಾರ ನೀಡಲು ಈ ಮೂಲಕ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ರಾತ್ರಿ ಊಟ: ಮೊಸರನ್ನ, ವಾಂಗಿಬಾತ್, ಬಿಸಿಬೆಳೆ ಬಾತ್, ಮೆಂತ್ಯೆ ಪಲಾವ್, ಟೊಮೆಟೋ ಬಾತ್, ಪುಳಿಯೊಗರೆ, ಪಲಾವ್ ನೀಡಲಾಗುತ್ತಿದೆ.ಸದ್ಯ ಇನ್ನು ಮುಂದೆ ಅದನ್ನೇ ಮುಂದುವರೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ಯಾವುದೇ ಬದಲಾವಣೆಯನ್ನು ರಾತ್ರಿ ಮೆನುವಿನಲ್ಲಿ ಮಾಡದಿರಲು ತೀರ್ಮಾನಿಸಲಾಗಿದೆ.
ರಶ್ಮಿತಾ ಅನೀಶ್